CLAT Results
CLAT Results

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ಸಿಎಲ್ಎಟಿ- 2021 ಫಲಿತಾಂಶ ಪ್ರಕಟ

ಸಿಎಲ್ಎಟಿ- 2021 ಪರೀಕ್ಷೆ ಜುಲೈ 23 ರಂದು ನಡೆದಿತ್ತು.
Published on

ಪ್ರಸಕ್ತ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ 2021) ಫಲಿತಾಂಶಗಳನ್ನು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

“ಜುಲೈ 28 ರಂದು, ಸಿಎನ್‌ಎಲ್‌ಯುಗಳ ಕಾರ್ಯಕಾರಿ ಸಮಿತಿಯು ಪದವಿ ಮತ್ತು ಸ್ನಾತಕೋತ್ತರ ಎರಡೂ ಕೋರ್ಸ್‌ಗಳ ಸಿಎಲ್‌ಎಟಿ -2021 ಫಲಿತಾಂಶವನ್ನು ಅನುಮೋದಿಸಿತ್ತು ಮತ್ತು ಅದನ್ನು ಪರಿಗಣಿಸಿ ಅನುಮೋದಿಸುವಂತೆ ಸಿಎನ್‌ಎಲ್‌ಯುಗಳ ಸಾಮಾನ್ಯ ಮಂಡಳಿಗೆ ಶಿಫಾರಸು ಮಾಡಿತ್ತು” ಎಂದು ಜಾಲತಾಣದಲ್ಲಿರುವ ಒಕ್ಕೂಟದ ಅಧಿಕೃತ ಅಧಿಸೂಚನೆ ತಿಳಿಸಿದೆ.

Also Read
ಸಿಎಲ್‌ಎಟಿ 2021 ಆನ್‌ಲೈನ್‌ ಅರ್ಜಿ ಸಲ್ಲಿಕೆ ಗಡುವನ್ನು ಮೇ 15ರವರೆಗೆ ವಿಸ್ತರಿಸಿದ ಎನ್‌ಎಲ್‌ಯುಸಿ

ಅಂತೆಯೇ, ಸಿಎನ್‌ಎಲ್‌ಯುಗಳ ಸಾಮಾನ್ಯ ಮಂಡಳಿ ಎರಡೂ ಫಲಿತಾಂಶಗಳನ್ನು ಸರ್ವಾನುಮತದಿಂದ ಅಂಗೀಕರಿಸಿದ್ದುಒಕ್ಕೂಟದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಶಿಫಾರಸು ಮಾಡಿದೆ.

ಅಭ್ಯರ್ಥಿಗಳು ತಮ್ಮ ಪ್ರವೇಶ ಕಾರ್ಡ್ ಸಂಖ್ಯೆಗಳೊಂದಿಗೆ ಲಾಗ್ ಇನ್ ಆಗುವ ಮೂಲಕ ಅಂಕಗಳನ್ನು ವೀಕ್ಷಿಸಬಹುದು.

ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ.

Kannada Bar & Bench
kannada.barandbench.com