ಕೋವಿಡ್ ಸಾಂಕ್ರಾಮಿಕದಿಂದಾಗಿ ಅನಿಶ್ಚಿತತೆಯ ಅಲೆ ಎದ್ದಿರುವ ಹಿನ್ನೆಲೆಯಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ 2021ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ- 2021) ದಿನಾಂಕ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ.
ಮೇ 9ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಈ ವರ್ಷದ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಸಿಬಿಎಸ್‌ಇ ಪರೀಕ್ಷೆಯನ್ನು ಮೇ 4ರಿಂದ ಏರ್ಪಡಿಸಿದ ಹಿನ್ನೆಲೆಯಲ್ಲಿ ಸಿಎಲ್‌ಎಟಿಯನ್ನು ಜೂನ್ 13ಕ್ಕೆ ಮರುನಿಗದಿಪಡಿಸಲಾಗಿತ್ತು. ಹೊಸ ಅಧಿಸೂಚನೆ ಪ್ರಕಾರ ಪರೀಕ್ಷೆ ಕುರಿತಂತೆ ಮೇ ಮೊದಲ ವಾರದಲ್ಲಿ ಒಕ್ಕೂಟ ನಿರ್ಧಾರ ಕೈಗೊಳ್ಳಲಿದೆ.
“ಕೋವಿಡ್- 19 ಪರಿಸ್ಥಿತಿಯನ್ನು ಒಕ್ಕೂಟ ಗಮನಿಸುತ್ತಿದ್ದು ಪರೀಕ್ಷೆಯ ದಿನಾಂಕಕ್ಕೆ ಸಂಬಂಧಿಸಿದಂತೆ ಮೇ ಮೊದಲ ವಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನಂತರ ಅದನ್ನು ಒಕ್ಕೂಟದ ಜಾಲತಾಣದಲ್ಲಿ ಪ್ರಕಟಿಸಲಾಗುವುದು” ಎಂದು ಅದು ತಿಳಿಸಿದೆ.
ಅಭ್ಯರ್ಥಿಗಳು ಆತಂಕಗೊಳ್ಳಬಾರದು ಹಾಗೂ ಆಗಾಗ ಎನ್ಎಲ್ಯು ಒಕ್ಕೂಟದ ಜಾಲತಾಣಕ್ಕೆ ಭೇಟಿ ನೀಡುತ್ತಿರುವಂತೆ ಒಕ್ಕೂಟ ಮನವಿ ಮಾಡಿದೆ. ಕಳೆದ ತಿಂಗಳು ಹೊರಡಿಸಿದ ಅಧಿಸೂಚನೆಯಲ್ಲಿ ಪರೀಕ್ಷೆಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾರ್ಚ್ 30ರ ಬದಲು ಏಪ್ರಿಲ್ 30ಕ್ಕೆ ಮುಂದೂಡಲಾಗಿತ್ತು.