ಸಿಎಲ್‌ಎಟಿ: ಪ್ರವೇಶ ಪತ್ರಗಳು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಗ್ಗೆ ಎನ್‌ಎಲ್‌ಯು ಒಕ್ಕೂಟದಿಂದ ಮಾಹಿತಿ

ವಿದ್ಯಾರ್ಥಿಗಳು ತಮ್ಮ ಸಿಎಲ್‌ಎಟಿ ಖಾತೆಗಳಿಗೆ ಲಾಗಿನ್‌ ಆಗುವ ಮುಖೇನ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.
ಸಿಎಲ್‌ಎಟಿ: ಪ್ರವೇಶ ಪತ್ರಗಳು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಗ್ಗೆ ಎನ್‌ಎಲ್‌ಯು ಒಕ್ಕೂಟದಿಂದ ಮಾಹಿತಿ
CLATA1

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ತೆಗೆದುಕೊಳ್ಳಲು ದಾಖಲಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳು ಲಭ್ಯವಿರುವ ಬಗ್ಗೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಸೋಮವಾರ ಪ್ರಕಟಿಸಿದೆ.

ವಿವಿಧ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಎಲ್‌ಎಟಿ 2022 ಪರೀಕ್ಷೆಯನ್ನು ವಿದ್ಯಾರ್ಥಿಗಳು ಜೂನ್‌ 19ರಂದು ಎದುರಿಸಬೇಕಿದೆ.

ವಿದ್ಯಾರ್ಥಿಗಳು ತಮ್ಮ ಸಿಎಲ್‌ಎಟಿ ಖಾತೆಗಳಿಗೆ ಲಾಗಿನ್‌ ಆಗುವ ಮುಖೇನ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ, https://consortiumofnlus.ac.in/clat-2022/admit-card.html ತಾಣಕ್ಕೆ ಭೇಟಿ ನೀಡಿ ತಮ್ಮ ದಾಖಲಾತಿ ಸಂಖ್ಯೆ/ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನೀಡುವ ಮುಖೇನವೂ ಪ್ರವೇಶ ಪತ್ರ ಪಡೆಯಬಹುದಾಗಿದೆ.

ಪ್ರಕಟಣೆಯನ್ನು ಓದಲು ಇಲ್ಲಿ ಗಮನಿಸಿ:

Attachment
PDF
CLAT_2022_Notification_Admit_Cards.pdf
Preview

Related Stories

No stories found.
Kannada Bar & Bench
kannada.barandbench.com