ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ 2022 ಫಲಿತಾಂಶ ಪ್ರಕಟ

2022ರ ಜೂನ್‌ 19ರಂದು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ನಡೆಸಲಾಗಿತ್ತು.
CLAT 2022
CLAT 2022

ಪ್ರಸಕ್ತ ವರ್ಷದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ 2022) ಫಲಿತಾಂಶವನ್ನು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ನೊಂದಾವಣಿ ಸಂಖ್ಯೆ/ ಪ್ರವೇಶಪತ್ರ ಸಂಖ್ಯೆ ಬಳಸುವ ಮೂಲಕ ಜಾಲತಾಣದ ಲಿಂಕ್‌ನಲ್ಲಿ ಫಲಿತಾಂಶ ಪರಿಶೀಲಿಸಬಹುದಾಗಿದೆ.

ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ದೇಶಾದ್ಯಂತ 22 ರಾಷ್ಟ್ರೀಯ ಕಾನೂನು ಶಾಲೆಗಳು ನಡೆಸುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯೇ ಸಿಎಲ್‌ಎಟಿ. 2022ರ ಜೂನ್‌ 19ರಂದು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ನಡೆಸಲಾಗಿತ್ತು.

2022ರ ಜೂನ್‌ 22ರಂದು ವಿಷಯ ತಜ್ಞರ ಸಮಿತಿ ಸಭೆಯನ್ನು ನಡೆಸಲಾಗಿತ್ತು. ಎಲ್ಲಾ ಆಕ್ಷೇಪಣೆಗಳಿಗೂ ಉತ್ತರಿಸಿ ಸಮಿತಿಯು ವರದಿ ಅಂತಿಮ ವರದಿ ಸಲ್ಲಿಸಿತ್ತು. ವಿಷಯ ತಜ್ಞರ ಸಮಿತಿಯ ವರದಿಯನ್ನು 2022ರ ಜೂನ್‌ 23ರಂದು ಮೇಲ್ವಿಚಾರಣಾ ಸಮಿತಿಯು ಪರಿಶೀಲಿಸಿತ್ತು.

“ಮೇಲ್ವಿಚಾರಣಾ ಸಮಿತಿಯ ಶಿಫಾರಸ್ಸುಗಳನ್ನು ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಒಪ್ಪಿಕೊಂಡಿದ್ದು, ಮೇಲ್ವಿಚಾರಣಾ ಸಮಿತಿ ಒಪ್ಪಿಗೆ ನೀಡಿರುವ ವಿಷಯ ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಒಳಗೊಂಡ ಅಂತಿಮ ಉತ್ತರ ಕೀ ಬಿಡುಗಡೆ ಮಾಡುವಂತೆ ಸಿಎಲ್‌ಎಟಿ ಸಂಚಾಲಕರಿಗೆ ನಿರ್ದೇಶಿಸಿದೆ” ಎಂದು ಒಕ್ಕೂಟ ಬಿಡುಗಡೆ ಮಾಡಿದ್ದ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com