ಸಿಎಲ್‌ಎಟಿ -2023: ಇಂದಿನಿಂದ ಅರ್ಜಿ ಆಹ್ವಾನ; ಡಿ.18ರಂದು ಪರೀಕ್ಷೆ

ಸಿಎಲ್‌ಎಟಿ -2023ಕ್ಕೆ ಅರ್ಜಿ ಸಲ್ಲಿಸಲು 2022ರ ನವೆಂಬರ್‌ 13 ಕೊನೆಯ ದಿನವಾಗಿದೆ.
CLAT 2023
CLAT 2023

ಮುಂದಿನ ವರ್ಷದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯನ್ನು (ಸಿಎಲ್‌ಎಟಿ) 2022ರ ಡಿಸೆಂಬರ್‌ 18ರಂದು ಆಫ್‌ಲೈನ್‌ ಸ್ವರೂಪದಲ್ಲಿ (ಭೌತಿಕವಾಗಿ) ನಡೆಸಲು ಉದ್ದೇಶಿಸಲಾಗಿದೆ. 12ನೇ ತರಗತಿ/ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಸಿಎಲ್‌ಎಟಿ ನಡೆಯಲಿದೆ.

ಪರೀಕ್ಷೆಗೆ ಇಂದಿನಿಂದ ನೋಂದಣಿ ಆರಂಭವಾಗಿದೆ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (ಎನ್‌ಎಲ್‌ಯು) ಘೋಷಿಸಿದೆ. ಇಚ್ಛೆ ಹೊಂದಿರುವ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಸಿಎಲ್‌ಎಟಿ -2023ಕ್ಕೆ ಅರ್ಜಿ ಸಲ್ಲಿಸಲು 2022ರ ನವೆಂಬರ್‌ 13 ಕೊನೆಯ ದಿನವಾಗಿದೆ.

Related Stories

No stories found.
Kannada Bar & Bench
kannada.barandbench.com