ಸಿಎಲ್ಎಟಿ- 2024: ಅರ್ಜಿ ಸಲ್ಲಿಸಲು ನ. 10ರವರೆಗೆ ಅವಕಾಶ

ಅರ್ಜಿ ಸಲ್ಲಿಸಲು ಈ ಮೊದಲು ನವೆಂಬರ್ 3 ಕೊನೆಯ ದಿನವಾಗಿತ್ತು. ಪರೀಕ್ಷೆ ಡಿಸೆಂಬರ್ 3ರಂದು ನಡೆಯಲಿದೆ.
CLAT
CLAT
Published on

ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ(ಸಿಎಲ್‌ಎಟಿ) 2024ರ ಆವೃತ್ತಿಯ ಅರ್ಜಿ ಸಲ್ಲಿಕೆ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (NLUs) ತನ್ನ ಅಧಿಕೃತ ಜಾಲತಾಣದಲ್ಲಿ ಈ ಘೋಷಣೆ ಮಾಡಿದೆ. ಅರ್ಜಿ ಸಲ್ಲಿಸಲು ಈ ಮೊದಲು ನವೆಂಬರ್ 3 ಕೊನೆಯ ದಿನವಾಗಿತ್ತು.

Also Read
ಡಿಸೆಂಬರ್‌ 3ಕ್ಕೆ ಸಿಎಲ್‌ಎಟಿ 2024 ಪರೀಕ್ಷೆ

ಒಕ್ಕೂಟದ ಹೇಳಿಕೆ ಪ್ರಕಾರ "2024-25 ಶೈಕ್ಷಣಿಕ ವರ್ಷದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿರುವುದು ದೇಶದ ಅಸಂಖ್ಯಾತ ಕಾನೂನು ವಿದ್ಯಾರ್ಥಿಗಳಿಗೆ ಪರಿಹಾರ ಒದಗಿಸುತ್ತದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯಾವಕಾಶ ದೊರೆಯುತ್ತದೆ ಮತ್ತು ಅವರು ಪರೀಕ್ಷೆ ಹಾಜರಾಗುವ ಅವಕಾಶ ಕಳೆದುಕೊಳ್ಳುವುದಿಲ್ಲ".

ಡಿಸೆಂಬರ್ 3, 2023 ರಂದು ಸಿಎಎಲ್‌ಎಟಿ-  2024 ಪರೀಕ್ಷೆ ನಡೆಯಲಿದೆ.

Kannada Bar & Bench
kannada.barandbench.com