ದೆಹಲಿ ಹೈಕೋರ್ಟ್‌ ನ್ಯಾ. ತಾರಾ ವಿತಾಸ್ತ ಗಂಜು ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೊಲಿಜಿಯಂ ಶಿಫಾರಸ್ಸು

ಆಗಸ್ಟ್ 25 ಮತ್ತು 26 ರಂದು ನಡೆದ ಕೊಲಿಜಿಯಂ ಸಭೆಗಳಲ್ಲಿ ವರ್ಗಾವಣೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
Tara Vitasta Ganju
Tara Vitasta Ganju
Published on

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಆಗಸ್ಟ್ 25 ಮತ್ತು 26 ರಂದು ನಡೆದ ಕೊಲಿಜಿಯಂ ಸಭೆಗಳಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ

ತಾರಾ ಅವರು 1971 ರಲ್ಲಿ ಜನಿಸಿದರು, 1995 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ ಕಾನೂನು ಪದವಿಯನ್ನು ಪಡೆದರು. ನಂತರ ಅವರು ಯುನೈಟೆಡ್ ಕಿಂಗ್‌ಡಂನಲ್ಲಿ ತಮ್ಮ ಕಾನೂನು ಶಿಕ್ಷಣ ಮುಂದುವರೆಸಿದರು. 1999ರಲ್ಲಿ ಬ್ರಿಟಿಷ್ ಶಿವ್ನಿಂಗ್ ವಿದ್ಯಾರ್ಥಿವೇತನವನ್ನು ಪಡೆದರು.

ವಕೀಲ ವೃತ್ತಿಯನ್ನು 1995ರಲ್ಲಿ ಆರಂಭಿಸಿದ ತಾರಾ ಅವರು ಹೈಕೋರ್ಟ್‌ನಲ್ಲಿ ಬಹುತೇಕವಾಗಿ ಕೆಲಸ ಮಾಡಿದರು. ದೆಹಲಿ ಮತ್ತು ಅದರ ನೆರೆಯ ನ್ಯಾಯವ್ಯಾಪ್ತಿಗಳಲ್ಲಿನ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸಿದ ಅವರು ಮೇಲ್ಮನವಿ ಮತ್ತು ರಿಟ್ ನ್ಯಾಯಾಲಯಗಳ ಅಡಿಯಲ್ಲಿ ಆಸ್ತಿ, ಉತ್ತರಾಧಿಕಾರ ಕಾನೂನು, ನಾಗರಿಕ ಕಾನೂನುಗಳು, ಮಧ್ಯಸ್ಥಿಕೆ, ಕಂಪನಿ, ಕ್ರಿಮಿನಲ್ ಮತ್ತು ಬೌದ್ಧಿಕ ಆಸ್ತಿ ಮೊಕದ್ದಮೆ ಸೇರಿದಂತೆ ವಿವಿಧ ಕಾನೂನು ಕ್ಷೇತ್ರಗಳಲ್ಲಿ ಸಲಹೆ ನೀಡಿದರು, ಪ್ರಕರಣಗಳನ್ನು ನಡೆಸಿದರು.

ಮೇ 18, 2022 ರಂದು ತಾರಾ ಅವರನ್ನು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು.

Kannada Bar & Bench
kannada.barandbench.com