ನಾಗರಿಕರು ತೆರಿಗೆ ಪಾವತಿಯನ್ನು ದೇಶಕ್ಕಾಗಿ ಮಾಡುವ ಕರ್ತವ್ಯ ಎಂದು ಪರಿಗಣಿಸಬೇಕೇ ವಿನಾ ಒತ್ತಾಯಪೂರ್ವಕ ಎಂದು ಭಾವಿಸಬಾರದು ಎಂಬುದಾಗಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಹೇಳಿದ್ದಾರೆ. ಅವರು ಶನಿವಾರ ʼ2021ನೇ ಸಾಲಿನ ಟಿಐಒಎಲ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ತೆರಿಗೆ ಸಮಾವೇಶʼದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ತೆರಿಗೆ ಪಾವತಿದಾರರು ತೆರಿಗೆ ಪಾವತಿಸದಿದ್ದರೆ ಸರ್ಕಾರ ಕಲ್ಯಾಣ ಯೋಜನೆ ಇತ್ಯಾದಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.