ಪ್ರಧಾನಿ ವಿರುದ್ಧದ ಷಡ್ಯಂತ್ರ ದೇಶದ್ರೋಹವಾಗಿದ್ದು ಬೇಜವಾಬ್ದಾರಿಯ ಆರೋಪ ಮಾಡಬಾರದು: ದೆಹಲಿ ಹೈಕೋರ್ಟ್

ಪ್ರಧಾನಮಂತ್ರಿ ವಿರುದ್ಧ ಯಾರೋ ಪಿತೂರಿ ನಡೆಸಿದ್ದಾರೆ ಎಂಬುದಾಗಿ ಬೇಜವಾಬ್ದಾರಿಯ ಆರೋಪ ಮಾಡಲಾಗದು. ಅಂತಹ ಆರೋಪ ಸಮರ್ಪಕ ಮತ್ತು ಪೊಳ್ಳಲ್ಲದ ಕಾರಣಗಳನ್ನು ಆಧರಿಸಿರಬೇಕು ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಹೇಳಿದರು.
ಪ್ರಧಾನಿ ವಿರುದ್ಧದ ಷಡ್ಯಂತ್ರ ದೇಶದ್ರೋಹವಾಗಿದ್ದು ಬೇಜವಾಬ್ದಾರಿಯ ಆರೋಪ ಮಾಡಬಾರದು: ದೆಹಲಿ ಹೈಕೋರ್ಟ್

ಪ್ರಧಾನಮಂತ್ರಿ ವಿರುದ್ಧದ ಪಿತೂರಿ ದೇಶದ್ರೋಹಕ್ಕೆ ಸಮವಾಗಿದ್ದು ಇದು ಅತ್ಯಂತ ಗಂಭೀರ ಅಪರಾಧ ಎಂದು ದೆಹಲಿ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ತಿಳಿಸಿದೆ.

ಪ್ರಧಾನಮಂತ್ರಿ ವಿರುದ್ಧ ಯಾರೋ ಪಿತೂರಿ ನಡೆಸಿದ್ದಾರೆ ಎಂಬುದಾಗಿ ಬೇಜವಾಬ್ದಾರಿಯ ಆರೋಪ ಮಾಡಲಾಗದು. ಅಂತಹ ಆರೋಪ ಸಮರ್ಪಕ ಮತ್ತು ಪೊಳ್ಳಲದ ಕಾರಣಗಳನ್ನು ಆಧರಿಸಿರಬೇಕು ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಹೇಳಿದರು.

"ಪ್ರಧಾನಿಯನ್ನು ಗುರಿಯಾಗಿಸಿಕೊಂಡ ಪಿತೂರಿ ಐಪಿಸಿ ಅಡಿಯಲ್ಲಿ ಅಪರಾಧ. ಇದು ದೇಶದ್ರೋಹ" ಎಂದು ನ್ಯಾಯಾಲಯ ನುಡಿದಿದೆ.

ತಮ್ಮ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿ ʼಕ್ಯಾನಿಂಗ್ ಲೇನ್ʼ, ʼಒಡಿಯಾ ಬಾಬುʼ ಹಾಗೂ ʼಪುರಿಯ ದಲ್ಲಾಳಿʼ ಎಂದು ಕರೆದಿದ್ದ ವಕೀಲ ಜೈ ಅನಂತ್ ದೆಹದ್ರಾಯ್‌ ವಿರುದ್ಧ ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಷಯ ತಿಳಿಸಿದೆ.

ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸುವ ಸಂಚು ನಡೆಸುತ್ತಿದ್ದಾರೆ ಎಂದು ದೇಹ್ರದಾಯ್‌ ಆರೋಪಿಸಿದರು. ಆಗ ನ್ಯಾಯಾಲಯ ದೇಹ್ರದಾಯ್‌ ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಚಲಾಯಿಸಿದರೆ ತೊಂದರೆ ಇಲ್ಲ. ಆದರೆ ಅವರು ಹೇಳುತ್ತಿರುವುದು ದೇಶದ ಅತ್ಯುನ್ನತ ಹುದ್ದೆಯ ಮೇಲೆ ಪ್ರಭಾವ ಬೀರುವುದರಿಂದ ಗಂಭೀರ ಪರಿಣಾಮ ಉಂಟುಮಾಡುತ್ತದೆ ಎಂದು ನ್ಯಾಯಾಲಯ ಹೇಳಿತು.

 ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಿನಾಕಿ ಮಿಶ್ರಾ  ಪಿತೂರಿ ನಡೆಸುತ್ತಿದ್ದಾರೆ ಎಂದು ದೇಹ್ರದಾಯ್‌ ಹೇಗೆ ಆರೋಪಿಸುತ್ತಿದ್ದಾರೆ ಎಂದು ನ್ಯಾಯಾಲಯ ಪ್ರಶ್ನಿಸಿತು.

 ಪ್ರಧಾನಿ ವಿರುದ್ಧದ ಪಿತೂರಿ ದೇಶದ್ರೋಹಕ್ಕೆ ಸಮನಾಗಿದ್ದು ಮಿಶ್ರಾ ವಿರುದ್ಧದ ಅಂತಹ ಆರೋಪಸಾಬೀತುಪಡಿಸಲು ದೇಹದ್ರಾಯ್‌ ಅವರಿಗೆ ಸಾಧ್ಯವಾಗದಿದ್ದರೆ ತಾನು ತಡೆಯಾಜ್ಞೆ ಆದೇಶ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

ಪ್ರಧಾನಿ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ತಮಾಷೆ ಆರೋಪವನ್ನು ಪುರಸ್ಕರಿಸಲು ಅನುಮತಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಮಿಶ್ರಾ ಅವರು ರಾಜಕಾರಣಿ ಹಾಗೂ ಪ್ರತಿಷ್ಠಿತ ವಕೀಲರು. ದೇಹದ್ರಾಯ್‌ ಕೂಡ ವಕೀಲ ಸಮುದಾಯದ ಗೌರವಾನ್ವಿತ ಸಮುದಾಯದ ಸದಸ್ಯರು. ಅವರು ಮಿಶ್ರಾ ವಿರುದ್ಧ ಹೀಗೆ ಆರೋಪ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿತು.

ಮಿಶ್ರಾ ದೇಶದ್ರೋಹ ಎಸಗಿದ್ದು ಆ ಕುರಿತ ದಾಖಲೆಯನ್ನು ಇಂದೇ ಒದಗಿಸುವುದಾಗಿ ದೇಹದ್ರಾಯ್‌ ತಿಳಿಸಿದಾಗ ನ್ಯಾಯಾಲಯ ಪ್ರಕರಣವನ್ನು ಇಂದು ಮಧ್ಯಾಹ್ನ 2.30ಕ್ಕೆ ಮುಂದೂಡಿತು. 

Related Stories

No stories found.
Kannada Bar & Bench
kannada.barandbench.com