ಲಂಚ ಪ್ರಕರಣ ವಿಚಾರಣೆಯಿಂದ ಶಾಸಕರಿಗೆ ರಕ್ಷಣೆ ಇದೆಯೇ ಎಂಬ ವಿಚಾರವಾಗಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಸಾಂವಿಧಾನಿಕ ಪೀಠ

ರಕ್ಷಣೆ ವಿನಾಯಿತಿ ನಿರ್ಧರಿಸಲು ಕಾರ್ಯಕಾರಿ ಪರೀಕ್ಷೆ ಅಗತ್ಯವಿದೆ. ಇದು ಪರಿಣಾಮಗಳ ಭಯವಿಲ್ಲದೆ ಶಾಸಕನ ಕರ್ತವ್ಯವನ್ನು ನಿರ್ವಹಿಸಲು ಅಗತ್ಯವಿರುವ ಭಾಷಣ ಅಥವಾ ಮತದಾನದ ಕಾರ್ಯಗಳಿಗೆ ವಿಸ್ತರಿಸಬಹುದು ಎಂದು ಎಜಿ ಸಲಹೆ.
ಲಂಚ ಪ್ರಕರಣ ವಿಚಾರಣೆಯಿಂದ ಶಾಸಕರಿಗೆ ರಕ್ಷಣೆ ಇದೆಯೇ ಎಂಬ ವಿಚಾರವಾಗಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಸಾಂವಿಧಾನಿಕ ಪೀಠ

ಸಂವಿಧಾನದ 105(2) ಮತ್ತು 194(2) ನೇ ವಿಧಿಯಡಿ ಚುನಾಯಿತ ಜನಪ್ರತಿನಿಧಿಗಳಿಗೆ ಇರುವ ಕಾನೂನಾತ್ಮಕ ರಕ್ಷಣೆಯು ಲಂಚದ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುವುದರಿಂದ ಅವರಿಗೆ ರಕ್ಷಣೆ ಒದಗಿಸುತ್ತದೆಯೇ ಎಂಬುದಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪನ್ನು ಗುರುವಾರ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಕಾಯ್ದಿರಿಸಿದೆ [ಸೀತಾ ಸೊರೇನ್‌ ವರ್ಸಸ್‌ ಭಾರತ ಸರ್ಕಾರ].

ಕೇಂದ್ರ ಸರ್ಕಾರದ ವಾದವನ್ನು ಮತ್ತು ಅರ್ಜಿದಾರರ ಪ್ರತ್ಯುತ್ತರ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ, ಎಂ ಎಂ ಸುಂದರೇಶ್‌, ಪಿ ಎಸ್‌ ನರಸಿಂಹ, ಜೆ ಬಿ ಪರ್ದಿವಾಲಾ, ಪಿ ವಿ ಸಂಜಯ್‌ ಕುಮಾರ್‌ ಮತ್ತು ಮನೋಜ್‌ ಮಿಶ್ರಾ ಅವರ ನೇತೃತ್ವದ ಪೀಠವು ಪ್ರಕರಣದ ತೀರ್ಪು ಕಾಯ್ದಿರಿಸಿದೆ.

ರಕ್ಷಣೆ ನಿರ್ಧರಿಸಲು ಕಾರ್ಯಕಾರಿ ಪರೀಕ್ಷೆ ಅಗತ್ಯವಿದೆ. ಇದು ಪರಿಣಾಮಗಳ ಭಯವಿಲ್ಲದೆ ಶಾಸಕನ ಕರ್ತವ್ಯವನ್ನು ನಿರ್ವಹಿಸಲು ಅಗತ್ಯವಿರುವ ಭಾಷಣ ಅಥವಾ ಮತದಾನದ ಕಾರ್ಯಗಳಿಗೆ ವಿಸ್ತರಿಸಬಹುದು ಎಂದು ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಸಲಹೆ ನೀಡಿದರು.

ಸಂಸತ್ತಿನಲ್ಲಿ ಅಥವಾ ಸಂಸದೀಯ ಸಮಿತಿಯ ಮುಂದೆ ನೀಡುವ ಹೇಳಿಕೆಗಳು, ಹಾಕುವ ಮತಗಳಿಗೆ ಸಂಬಂಧಿಸಿದಂತೆ ಸಂಸದರಿಗೆ ಸಂವಿಧಾನದ 105(2) ನೇ ವಿಧಿಯಡಿ ಯಾವುದೇ ವಿಚಾರಣೆಯಿಂದ ರಕ್ಷಣೆ ಇದೆ. ಸಂವಿಧಾನದ 194(2) ನೇ ವಿಧಿಯು ರಾಜ್ಯಗಳಲ್ಲಿ ಶಾಸಕರಿಗೆ ಅದೇ ರೀತಿಯ ವಿನಾಯಿತಿ ಕಲ್ಪಿಸುತ್ತದೆ. ಈ ವಿನಾಯಿತಿಯು ಲಂಚದ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುವುದರಿಂದಲೂ ರಕ್ಷಣೆ ನೀಡುತ್ತದೆಯೇ ಎನ್ನುವ ವಿಚಾರ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದಿತ್ತು.

Related Stories

No stories found.
Kannada Bar & Bench
kannada.barandbench.com