ಚಿತ್ರಮಂದಿರಗಳಲ್ಲಿ ಟಿಕೆಟ್‌ಗೆ ಹೆಚ್ಚಿನ ದರ: ನಿಗಾ ಇರಿಸಲು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ಈಗಾಗಲೇ ಥಿಯೇಟರ್ ಮಾಲೀಕರು ವಿಧಿಸಿರುವ ಹೆಚ್ಚುವರಿ ಮೊತ್ತವನ್ನು ಹೇಗೆ ಹಿಂಪಡೆಯಬೇಕು ಎಂಬ ಬಗ್ಗೆ ಸರ್ಕಾರ ನಿರ್ಧರಿಸಬೇಕು ಎಂದಿದ್ದಾರೆ ನ್ಯಾ. ಅನಿತಾ ಸುಮಂತ್.
Justice Anita Sumanth
Justice Anita Sumanth

ಚಿತ್ರಮಂದಿರ ಮಾಲೀಕರು ಸಿನಿಮಾ ಟಿಕೆಟ್‌ಗಳಿಗೆ ಹೆಚ್ಚಿನ ಶುಲ್ಕ ವಿಧಿಸದಂತೆ ನೋಡಿಕೊಳ್ಳುವುದಕ್ಕಾಗಿ ರಾಜ್ಯಾದ್ಯಂತ ಸಿನಿಮಾ ಥಿಯೇಟರ್‌ಗಳ ಮೇಲೆ ನಿಗಾ ಇರಿಸಲು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಜಿ ದೇವರಾಜನ್‌ ಮತ್ತು ಮುಖ್ಯ ಕಾರ್ಯದರ್ಶಿ ನಡುವಣ ಪ್ರಕರಣ].

ಥಿಯೇಟರ್ ಮಾಲೀಕರು ಈಗಾಗಲೇ ವಿಧಿಸಿರುವ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಲು ಅನುಸರಿಸಬೇಕಾದ ಮಾರ್ಗ ಕುರಿತು ಸರ್ಕಾರ ನಿರ್ಧರಿಸಬೇಕು ಎಂದು ಇದೇ ವೇಳೆ ನ್ಯಾ. ಅನಿತಾ ಸುಮಂತ್‌ ತಿಳಿಸಿದರು.  

ಸೀಲಿಂಗ್ ಅಥವಾ ಗರಿಷ್ಠ ಮಿತಿ ನಿಗದಿಪಡಿಸಿದ್ದರೂ, ಅನೇಕ ಚಿತ್ರಮಂದಿರಗಳು ವಿಶೇಷವಾಗಿ ಜನಪ್ರಿಯ ನಟರು ನಟಿಸಿದ ಚಿತ್ರಗಳ ವೀಕ್ಷಣೆಗೆ ಹೆಚ್ಚಿನ ದರ ವಿಧಿಸುತ್ತಲೇ ಇವೆ ಎಂದು ದೂರಿ ಜಿ ದೇವರಾಜನ್ ಎಂಬುವರು ಸಲ್ಲಿಸಿರುವ ಮೂರು ರಿಟ್ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆಗಳನ್ನು ನೀಡಿತು.   

Also Read
ಹೊರಗಿನ ಆಹಾರಕ್ಕೆ ಕಡಿವಾಣ ಹಾಕುವ ಹಕ್ಕು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ ಮಾಲೀಕರಿಗೆ ಇದೆ: ಸುಪ್ರೀಂ ಕೋರ್ಟ್

2017ರ ಆದೇಶದಲ್ಲಿ, ಹೈಕೋರ್ಟ್ ಗರಿಷ್ಠ ಶುಲ್ಕ ನಿಗದಿಪಡಿಸುವ ಉದ್ದೇಶವು ಸಾರ್ವಜನಿಕರಿಗೆ ಸಮಂಜಸವಾದ ದರದಲ್ಲಿ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಹೈಕೋರ್ಟ್‌ 2017ರಲ್ಲಿ ನೀಡಿದ್ದ ಆದೇಶ ಕಾಗದದ ಮೇಲೆಯೇ ಉಳಿಯಬಾರದು ಎಂದು ಅರ್ಜಿದಾರರು ಪ್ರಾರ್ಥಿಸಿದ್ದರು.

ವಿಚಾರಣೆ ವೇಳೆ ಸರ್ಕಾರ ತಾನು 2015ರಲ್ಲಿ ಹೊರಡಿಸಿದ್ದ ಆದೇಶದಂತೆ ರಾಜ್ಯದ ಚಿತ್ರ ಮಂದಿರಗಳು ಪ್ರತಿ ಟಿಕೆಟ್‌ಗೆ ಗರಿಷ್ಠ ₹ 120 ಶುಲ್ಕ ವಿಧಿಸಬಹುದು. ಈ ಗರಿಷ್ಠ ಮಿತಿಯಿಂದ ಐಮ್ಯಾಕ್ಸ್ ಥಿಯೇಟರ್‌ಗೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಅದು ಪ್ರತಿ ಟಿಕೆಟ್‌ಗೆ ಗರಿಷ್ಠ ₹480 ಶುಲ್ಕ ವಿಧಿಸಬಹುದಾಗಿತ್ತು ಎಂದು ಹೇಳಿತು.

ರಾಜ್ಯ ಸರ್ಕಾರದ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಾಲಯ ಪ್ರಕರಣದ ಕುರಿತು ತಾನು ಈ ಹಿಂದೆ ನೀಡಿದ್ದ ಆದೇಶ ನಿರಂತರವಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿತು.  

Related Stories

No stories found.
Kannada Bar & Bench
kannada.barandbench.com