
ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿ ಮತ್ತು ಪ್ರಕರಣದ ಸಂತ್ರಸ್ತೆ ಪರಸ್ಪರ ಮದುವೆಯಾಗಲು ಇಚ್ಛೆ ವ್ಯಕ್ತಪಡಿಸಿದ ನಂತರ ಸುಪ್ರೀಂ ಕೋರ್ಟ್ ಗುರುವಾರ ಆ ವ್ಯಕ್ತಿಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿದೆ.
ಪ್ರಾಸಿಕ್ಯೂಟರ್ ಪರಸ್ಪರ ಮದುವೆಯಾಗಲು ಇಚ್ಛೆ ವ್ಯಕ್ತಪಡಿಸಿದ ನಂತರ ಸುಪ್ರೀಂ ಕೋರ್ಟ್ ಗುರುವಾರ ಶಿಕ್ಷೆಯನ್ನು ಅಮಾನತುಗೊಳಿಸಿದೆ.
ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ದಂಪತಿಗಳು ನ್ಯಾಯಾಲಯದ ಕೋಣೆಯಲ್ಲಿಯೇ ಹೂಗುಚ್ಛ ಕೊಡಲು ಹೇಳಿತು.
ನಾವು ಊಟದ ವಿರಾಮದ ಅವಧಿಯಲ್ಲಿ ಕಕ್ಷಿದಾರರನ್ನು ಕೊಠಡಿಯಲ್ಲಿ ಭೇಟಿಯಾದೆವು. ಇಬ್ಬರೂ ಪರಸ್ಪರ ಮದುವೆಯಾಗುವ ಬಯಕೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದ ನ್ಯಾಯಾಲಯ ಮಹಿಳೆಗೆ ಔಪಚಾರಿಕವಾಗಿ ಮದುವೆಯ ಪ್ರಸ್ತಾಪ ಮಾಡುವಂತೆ ವ್ಯಕ್ತಿಗೆ ಸೂಚಿಸಿತು.
ವ್ಯಕ್ತಿಯ ಶಿಕ್ಷೆ ಅಮಾನತುಗೊಳಸಿದ ನ್ಯಾಯಾಲಯ ಅವರಿಬ್ಬರೂ ಮದುವೆಗೆ ಸಿದ್ಧರಾಗಿದ್ದು ಮದುವೆಯ ದಿನಾಂವನ್ನು ಆಯಾ ಪೋಷಕರು ನಿರ್ಧರಿಸಬೇಕು. ಸಾಧ್ಯವಾದಷ್ಟು ಬೇಗ ಮದುವೆ ನಡೆಯಲಿ ಎಂದು ಆಶಿಸುತ್ತೇವೆ. ಇಂತಹ ಸಂದರ್ಭಗಳಲ್ಲಿ ಶಿಕ್ಷೆ ಅಮಾನತುಗೊಳಿಸಿ ಅರ್ಜಿದಾರರನ್ನು ಬಿಡುಗಡೆ ಮಾಡುತ್ತೇವೆ. 6/5/2025 ರಂದು ನೀಡಿದ್ದ ನಿರ್ದೇಶನದಂತೆ ಅರ್ಜಿದಾರರು ನ್ಯಾಯಾಲಯದೆದುರು ಹಾಜರಾಗಿದ್ದಾರೆ. ಅವರೀಗ ಜೈಲಿಗೆ ತೆರಳಲಿ. ಸಾಧ್ಯವಾದಷ್ಟು ಬೇಗ ಸಂಬಂಧಪಟ್ಟ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.
ನಂತರ ಸಂಬಂಧಪಟ್ಟ ಸೆಷನ್ಸ್ ನ್ಯಾಯಾಲಯ ಅಪರಾಧಿಯನ್ನು ಸೂಕ್ತ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಹೇಳಿದ ಅದು ಜುಲೈ 25ಕ್ಕೆ ಪ್ರಕರಣ ಮುಂದೂಡಿತು .
ಆರೋಪಿ ದೋಷಿ ಎಂದು ಘೋಷಿಸಿದ್ದ ವಿಚಾರಣಾ ನ್ಯಾಯಾಲಯ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಪದೇ ಪದೇ ಅತ್ಯಾಚಾರ ಎಸಗಿದ್ದಕ್ಕಾಗಿ ಸೆಕ್ಷನ್ 376(2) (ಎನ್) ಅಡಿ 10 ವರ್ಷಗಳ ಕಠಿಣ ಸಜೆ, ಸೆಕ್ಷನ್ 417ರ ಅಡಿ ವಂಚನೆ ಅಪರಾಧಕ್ಕಾಗಿ 2 ವರ್ಷ ಕಠಿಣ ಸೆರೆವಾಸ ವಿಧಿಸಿತ್ತು. ಹೈಕೋರ್ಟ್ ಪರಿಹಾರ ನೀಡದ ಹಿನ್ನೆಲೆಯಲ್ಲಿ ಆರೋಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.