ವಿಶೇಷ ಪ್ರಕರಣಗಳಲ್ಲಿ ದಾವೆದಾರರು ನೈಜ ಕಾರಣ ನೀಡಿದರೆ ಮಾತ್ರ ಆದ್ಯತೆಯ ಮೇಲೆ ವಿಚಾರಣೆಗೆ ಅನುಮತಿ: ಕೇರಳ ಹೈಕೋರ್ಟ್‌

ವಾಸ್ತವಿಕ ಕಾರಣ ನೀಡದ ಹೊರತು ಮುಂಚಿತವಾಗಿ ದಾವೆ ಹೂಡಿರುವವರನ್ನು ಮೀರಿ ಸಾಲಿನಲ್ಲಿ ಮುಂದೆ ಹೋಗಲು ಅವಕಾಶ ಮಾಡಿಕೊಡಬಾರದು ಎಂದು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್‌ ನಂಬಿಯಾರ್‌ ಮತ್ತು ಮೊಹಮ್ಮದ್‌ ನಿಯಾಸ್‌ ಹೇಳಿದ್ದಾರೆ.
Judges
Judges

ನೈಜ ಮತ್ತು ಸಮರ್ಥನೀಯ ಕಾರಣಗಳನ್ನು ಒಳಗೊಂಡು ಅರ್ಜಿಯನ್ನು ಸಲ್ಲಿಸಿದರೆ ಮಾತ್ರ ಮುಂಚಿತವಾಗಿ ದಾವೆ ಹೂಡಿರುವವರನ್ನು ಹಿಂದಿಕ್ಕಿ ಮತ್ತೊಬ್ಬರ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬಹುದು ಎಂದು ಈಚೆಗೆ ಕೇರಳ ಹೈಕೋರ್ಟ್‌ ಹೇಳಿದೆ [ಪ್ರೇಮಾ ಜಾಯ್‌ ಮತ್ತು ಇತರರು ವರ್ಸಸ್‌ ಜಾನ್‌ ಬ್ರಿಟ್ಟೊ].

ಮೇಲೆ ಉಲ್ಲೇಖಿಸಿದ ಕಾರಣ ಹೊರತುಪಡಿಸಿ ಯಾವುದೇ ಕಾರಣಕ್ಕೂ ದಾವೆದಾರರು ಸರತಿ ಸಾಲಿನಲ್ಲಿ ಮುಂದಕ್ಕೆ ಹೋಗಲು ಅನುಮತಿಸಬಾರದು ಎಂದು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್‌ ನಂಬಿಯಾರ್‌ ಮತ್ತು ಮೊಹಮ್ಮದ್‌ ನಿಯಾಸ್‌ ಸಿ ಪಿ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.

“ಹಿರಿತನ, ಕಾಲಾನುಕ್ರಮಣಿಕೆ ಆಧಾರದಲ್ಲಿ ಪ್ರಕರಣಗಳ ಇತ್ಯರ್ಥ ನಡೆಸುವುದು ಸಾಮಾನ್ಯ. ನೈಜ ಮತ್ತು ಸಮರ್ಥ ಕಾರಣಗಳನ್ನು ನೀಡಿದರೆ ಮಾತ್ರ ಇದಕ್ಕೆ ವಿನಾಯಿತಿ ಇರುತ್ತದೆ. ಮುಂಚಿತವಾಗಿ ದಾವೆ ಹೂಡಿರುವವರನ್ನು ಮೀರಿ ಉಳಿದವರಿಗೆ ಸರತಿ ಸಾಲಿನಲ್ಲಿ ಮುಂದೆ ಹೋಗಲು ಅವಕಾಶ ಮಾಡಿಕೊಡಬಾರದು. ಆದ್ಯತೆಯ ಮೇಲೆ ವಿಚಾರಣೆ ನಡೆಸಲು ಅರ್ಜಿದಾರರು ಮನವಿ ಸಲ್ಲಿಸಿದರೆ ನೈಜ ಕಾರಣಗಳನ್ನು ಒಳಗೊಂಡ ಆ ಅರ್ಜಿಯು ನ್ಯಾಯಾಲಯಕ್ಕೆ ಸಮಾಧಾನ ತಂದಲ್ಲಿ ಮಾತ್ರ ಅವುಗಳನ್ನು ಮುಂಚಿತವಾಗಿ ವಿಚಾರಣೆಗೆ ಪಟ್ಟಿ ಮಾಡಬಹುದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ವಿಶೇಷ ಪ್ರಕರಣಗಳಲ್ಲಿ ಸಮರ್ಥನೀಯ ಮತ್ತು ನೈಜ ಕಾರಣಗಳನ್ನು ಉಲ್ಲೇಖಿಸಿದರೆ ಆದ್ಯತೆಯ ಮೇರೆಗೆ ಅಂಥ ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿತು.

Related Stories

No stories found.
Kannada Bar & Bench
kannada.barandbench.com