ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯಗಳು ಆದೇಶ ನೀಡುವಂತಿಲ್ಲ: ಸುಪ್ರೀಂ ಕೋರ್ಟ್

ಪಂಜಾಬ್‌ನ ಸರ್ಕಾರಿ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ ಶೇ.3ರಷ್ಟು ಕ್ರೀಡಾ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.
Supreme Court

Supreme Court

ಯಾವುದೇ ನಾಗರಿಕ ವರ್ಗಕ್ಕೆ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯಗಳು ಆದೇಶ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಪುನರುಚ್ಚರಿಸಿದೆ [ಪಂಜಾಬ್‌ ಸರ್ಕಾರ ಮತ್ತು ಅಂಶಿಕಾ ಗೋಯೆಲ್‌ ನಡುವಣ ಪ್ರಕರಣ] .

ಮೀಸಲಾತಿಗೆ ಅನುಮತಿ ನೀಡುವ ಸಂವಿಧಾನದ 15 ಮತ್ತು 16 ನೇ ವಿಧಿಗಳು ಮೀಸಲಾತಿ ಒದಗಿಸುವುದು ರಾಜ್ಯದ ಅಧಿಕಾರ ಎಂದು ಈ ಹಿಂದಿನ ಹಲವು ತೀರ್ಪುಗಳಲ್ಲಿ ದೃಢಪಡಿಸಿವೆ ಎಂದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಇಂತಹ ನೀತಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವುದು ರಾಜ್ಯ ಸರ್ಕಾರಕ್ಕೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿತು.

ಈ ಹಿನ್ನೆಲೆಯಲ್ಲಿ ಪಂಜಾಬ್‌ನ ಸರ್ಕಾರಿ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿ ಶೇ.3ರಷ್ಟು ಕ್ರೀಡಾ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

Also Read
ನೀಟ್ ಪಿಜಿ ಪರೀಕ್ಷೆ: ಮೀಸಲಾತಿ ಅರ್ಹತೆಗೆ ವಿರುದ್ಧವಲ್ಲ ಎಂದ ಸುಪ್ರೀಂ, ಒಬಿಸಿ ಮೀಸಲಾತಿ ಎತ್ತಿಹಿಡಿದು ವಿವರವಾದ ಆದೇಶ

ತೀರ್ಪಿನ ವಿವರ:

- ಸಂವಿಧಾನದ 15 ಮತ್ತು 16 ನೇ ವಿಧಿಗಳು ರಾಜ್ಯಕ್ಕೆ ಮೀಸಲಾತಿ ಒದಗಿಸಲು ಅವಕಾಶ ನೀಡುತ್ತವೆ;

- ಮೀಸಲಾತಿ ಒದಗಿಸುವ ನೀತಿ ರೂಪಿಸುವುದು ರಾಜ್ಯಕ್ಕೆ ಬಿಟ್ಟ ವಿಚಾರ.

- ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯಗಳು ಆದೇಶಿಸುವಂತಿಲ್ಲ.

- ಪಂಜಾಬ್‌ನಸರ್ಕಾರಿವೈದ್ಯಕೀಯ/ದಂತವೈದ್ಯಕೀಯ ಕಾಲೇಜುಗಳಲ್ಲಿ ಶೇ.3ರಷ್ಟು ಕ್ರೀಡಾ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೀಡಿದ್ದ ನಿರ್ದೇಶನ ತಪ್ಪು.

Related Stories

No stories found.
Kannada Bar & Bench
kannada.barandbench.com