[ಚುಟುಕು] ಟೆಂಡರ್‌ ದಾಖಲೆಗಳನ್ನು ಅರ್ಥೈಸುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ಸಂಯಮ ವಹಿಸಬೇಕು: ಸುಪ್ರೀಂ ಕೋರ್ಟ್‌

Supreme Court 

Supreme Court 

Published on

ಟೆಂಡರ್ ದಾಖಲೆಗಳನ್ನು ಅರ್ಥೈಸುವಂತಹ ಪ್ರಕರಣಗಳಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ಸಂಯಮವನ್ನು ತೋರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಕೆಳ ಹಂತದ ನ್ಯಾಯಾಲಯಗಳಿಗೆ ಕಿವಿಮಾತು ಹೇಳಿದೆ. ಟೆಂಡರ್‌ಗಳನ್ನು ಬರೆಯುವವರು ಅದರ ಅಗತ್ಯವನ್ನು ತಿಳಿದಿರುವ, ಅರ್ಥೈಸುವ ಹಾಗೂ ತಾಂತ್ರಿಕ ಮೌಲ್ಯಮಾಪನ ಮಾಡುವ ಅಥವಾ ಅಂತಹ ದಾಖಲೆಗಳನ್ನು ತುಲನಾತ್ಮಕವಾಗಿ ನೋಡುವ ಅತ್ಯುತ್ತಮ ವ್ಯಕ್ತಿಗಳಾಗಿರುತ್ತಾರೆ ಎಂದು ನ್ಯಾ. ದಿನೇಶ್‌ ಮಹೇಶ್ವರಿ ಮತ್ತು ನ್ಯಾ. ವಿಕ್ರಮ್‌ ನಾಥ್‌ ಅವರಿದ್ದ ಪೀಠವು ಹೇಳಿದೆ.

ಹೆಚ್ಚಿನ ವಿವರಗಳಿಗೆ 'ಬಾರ್‌ ಅಂಡ್‌ ಬೆಂಚ್‌' ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com