[ಕೋವಿಡ್] ಅಗತ್ಯ ಬಿದ್ದರೆ ಔಷಧಗಳಿಗಾಗಿ ಪೇಟೆಂಟ್ ಕಾಯಿದೆಯಡಿ ತನಗಿರುವ ಅಧಿಕಾರವನ್ನು ಕೇಂದ್ರ ಬಳಸಲಿ: ದೆಹಲಿ ಹೈಕೋರ್ಟ್

ಔಷಧಗಳ ಅಕ್ರಮ ಸಂಗ್ರಹ ಮತ್ತು ಕಾಳ ಸಂತೆಯಲ್ಲಿ ಮಾರಾಟ ತಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ಔಷಧ ನಿಯಂತ್ರಕಕ್ಕೆ ಪೀಠ ಸೂಚಿಸಿದೆ.
[ಕೋವಿಡ್] ಅಗತ್ಯ ಬಿದ್ದರೆ ಔಷಧಗಳಿಗಾಗಿ ಪೇಟೆಂಟ್ ಕಾಯಿದೆಯಡಿ ತನಗಿರುವ ಅಧಿಕಾರವನ್ನು ಕೇಂದ್ರ ಬಳಸಲಿ: ದೆಹಲಿ ಹೈಕೋರ್ಟ್
Compulsory license

ಲಸಿಕೆಗಳ ಕೊರತೆ ಉಂಟಾಗಿರುವುದನ್ನು ಗಮನಿಸಿ ಕೋವಿಡ್‌ ರೋಗಿಗಳ ಜೀವ ಉಳಿಸುವ ಸಲುವಾಗಿ ಅಗತ್ಯ ಬಿದ್ದರೆ ಪೇಟೆಂಟ್‌ ಕಾಯಿದೆಯಡಿ ತನಗಿರುವ ಅಧಿಕಾರವನ್ನು ಕೇಂದ್ರ ಸರ್ಕಾರವು ಬಳಸಬೇಕು. ಔಷಧಗಳಿಗೆ ಕಡ್ಡಾಯ ಪರವಾನಗಿ ನೀಡುವ ಮೂಲಕ (ಕಂಪಲ್ಸರಿ ಲೈಸೆನ್ಸಿಂಗ್) ಪೇಟೆಂಟ್‌ ಇಲ್ಲದವರೂ ಅಗತ್ಯ ಔಷಧ ತಯಾರಿಸಲು ಅನುವು ಮಾಡಬೇಕು ಎಂದು ದೆಹಲಿ ಹೈಕೋರ್ಟ್‌ ಮಂಗಳವಾರ ಹೇಳಿದೆ (ರಾಕೇಶ್‌ ಮಲ್ಹೋತ್ರಾ ಮತ್ತು ಜಿಎನ್‌ಸಿಟಿಡಿ ನಡುವಣ ಪ್ರಕರಣ).

ರೆಮ್‌ಡೆಸಿವಿರ್‌ ಪ್ರಕರಣದಲ್ಲಿ ಮಾಡಿದಂತೆ ಔಷಧ ತಯಾರಿಕೆಯಲ್ಲಿ ತೊಡಗಿರುವವರನ್ನು ಅವರ ಉತ್ಪಾದನೆಯನ್ನು ಹೆಚ್ಚಿಸುವಂತೆ ಪ್ರೋತ್ಸಾಹಿಸುವುದು ಮತ್ತು ಇತರರು ಉತ್ಪಾದನೆ ಕೈಗೊಳ್ಳಲು ʼಸ್ವಯಂಪ್ರೇರಿತವಾಗಿ ಪರವಾನಗಿ' ನೀಡುವುದು ಉತ್ತಮ ವಿಧಾನ ಎಂದು ನ್ಯಾಯಾಲಯ ಹೇಳಿದೆ.

Also Read
ರಾಷ್ಟ್ರ ರಾಜಧಾನಿ ವಲಯ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ ಮಂಡನೆ; ದೆಹಲಿ ಸರ್ಕಾರ ಎಂದರೆ 'ಲೆಫ್ಟಿನೆಂಟ್‌ ಗವರ್ನರ್‌'

"ಅಂತಹ ಪ್ರಯತ್ನಗಳು ಫಲಪ್ರದವಾಗದಿದ್ದರೆ, ಎಲ್ಲಕ್ಕಿಂತ ಮುಖ್ಯವಾಗಿ ಜನರ ಜೀವ ಕ್ಷಿಪ್ರಗತಿಯಲ್ಲಿ ಹೋಗುತ್ತಿರುವುದರಿಂದ ಪೇಟೆಂಟ್‌ ಕಾಯಿದೆಯಡಿ ತನಗಿರುವ ಅಧಿಕಾರವನ್ನು ಕೇಂದ್ರ ಸರ್ಕಾರ/ನಿಯಂತ್ರಕರು ಬಳಸಬೇಕು (ಔಷಧಗಳಿಗೆ ಕಡ್ಡಾಯ ಪರವಾನಗಿ ನೀಡುವ ಮೂಲಕ ಪೇಟೆಂಟ್‌ ಇಲ್ಲದವರೂ ತಯಾರಿಸಲು ಅನುವು ಮಾಡಬೇಕು). ಇದಕ್ಕಾಗಿ ನ್ಯಾಯಯುತ ಪರವಾನಗಿ ಶುಲ್ಕವನ್ನು ನಿಗದಿಪಡಿಸುವ ಮೂಲಕ ಪೇಟೆಂಟ್ ಹೊಂದಿರುವವರಿಗೆ ಪರಿಹಾರ ನೀಡಬಹುದು "ಎಂದು ನ್ಯಾಯಾಲಯ ಹೇಳಿದೆ.

ಔಷಧಗಳ ಅಕ್ರಮ ಸಂಗ್ರಹ ಮತ್ತು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಸಂಬಂಧ ಅಂತಹ ಯಾವುದೇ ಪ್ರಕರಣ ಪತ್ತೆ ಹಚ್ಚಲು ಮತ್ತು ನಿಯಮಿತವಾಗಿ ತಪಾಸಣೆ ನಡೆಸಲು ಅಗತ್ಯ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಅದರ ಅಂಗಗಳಿಗೆ ಅದರಲ್ಲಿಯೂ ವಿಶೇಷವಾಗಿ ಔಷಧ ನಿಯಂತ್ರಕಕ್ಕೆ ಸೂಚಿಸಿದೆ. ನಗರದ ಕೋವಿಡ್‌ ಪರಿಸ್ಥಿತಿ ಕುರಿತಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ಪೀಠ ಈ ಆದೇಶ ಜಾರಿ ಮಾಡಿದೆ.

Related Stories

No stories found.
Kannada Bar & Bench
kannada.barandbench.com