ಕೋವಿಶೀಲ್ಡ್‌ 2ನೇ ಡೋಸ್‌ 84 ದಿನಗಳಿಗೂ ಮುನ್ನ ಹಾಕುವಂತಿಲ್ಲ ಎಂದ ಕೇರಳ ಹೈಕೋರ್ಟ್‌; ಏಕಸದಸ್ಯ ಪೀಠದ ಆದೇಶ ಬದಿಗೆ

ಕೋವಿಶೀಲ್ಡ್‌ ಲಸಿಕೆಗೆ ಹಣ ಪಾವತಿಸಿ ಪಡೆಯುವವರು ಎರಡನೇ ಡೋಸ್‌ ಅನ್ನು ನಾಲ್ಕು ವಾರಗಳ ಬಳಿಕ ಎಂದಾದರೂ ಹಾಕಿಸಿಕೊಳ್ಳಬಹುದು ಎಂದು ಹೇಳಿದ್ದ ಏಕಸದಸ್ಯ ಪೀಠದ ಆದೇಶವನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠವು ಬದಿಗೆ ಸರಿಸಿದೆ.
Kerala HC with Covid vaccine
Kerala HC with Covid vaccine

ಕೋವಿಶೀಲ್ಡ್‌ ಮೊದಲ ಮತ್ತು ಎರಡನೇ ಡೋಸ್‌ಗಳ ನಡುವಿನ ಅಂತರವನ್ನು 84 ದಿನಗಳಿಗೆ ನಿಗದಿಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳ ಹೈಕೋರ್ಟ್‌ ಶುಕ್ರವಾರ ಎತ್ತಿ ಹಿಡಿದಿದೆ.

ಕೋವಿಶೀಲ್ಡ್‌ ಲಸಿಕೆಗೆ ಹಣ ಪಾವತಿಸಿ ಪಡೆಯುವವರು ಎರಡನೇ ಡೋಸ್‌ ಅನ್ನು ನಾಲ್ಕು ವಾರಗಳ ಬಳಿಕ ಎಂದಾದರೂ ಹಾಕಿಸಿಕೊಳ್ಳಬಹುದು ಎಂದು ಆದೇಶಿಸಿದ್ದ ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಮಣಿಕುಮಾರ್‌ ಮತ್ತು ಶಾಜಿ ಪಿ ಚಲಿ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.

ಕೇಂದ್ರ ಸರ್ಕಾರವು ತಜ್ಞರ ಅಭಿಪ್ರಾಯ ಆಧರಿಸಿ ನಿರ್ಧಾರ ಕೈಗೊಂಡಿದ್ದು, ಈ ವಿಚಾರದಲ್ಲಿ ಸಾಂವಿಧಾನಿಕ ನ್ಯಾಯಾಲಯಗಳು ತಜ್ಞರ ಬುದ್ಧಿವಂತಿಕೆಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ತನ್ನ ಮುಂದಿದ್ದ ದಾಖಲೆಗಳನ್ನು ಪರಿಗಣಿಸಿ ಆದೇಶ ಮಾಡಿದೆ.

Also Read
ಗಂಭೀರ ಸಾಕ್ಷ್ಯಗಳಿಲ್ಲದೆ ಕೋವಿಶೀಲ್ಡ್‌ ಬಳಕೆಗೆ ನಿರ್ಬಂಧ ವಿಧಿಸಲಾಗದು ಎಂದ ಮದ್ರಾಸ್‌ ಹೈಕೋರ್ಟ್‌

“ತಜ್ಞರ ಸಲಹೆಯಂತೆ ಸರ್ಕಾರವು ನಿರ್ಧಾರ ಕೈಗೊಂಡಿರುವಾಗ ಕೋವಿಡ್‌ ಸಾಂಕ್ರಾಮಿಕದ ವಿಚಾರದಲ್ಲಿ ಹೇಗೆ ಮುಂದೆ ಹೆಜ್ಜೆ ಇಡಬೇಕು ಎಂದು ತೀರ್ಮಾನಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ವೈಜ್ಞಾನಿಕ ಸಂಶೋಧನೆಯ ಬಳಿಕ ತಜ್ಞರ ಸಲಹೆಯಂತೆ ಕೈಗೊಂಡಿರುವ ನಿರ್ಧಾರಕ್ಕೆ ಸಾಂವಿಧಾನಿಕ ನ್ಯಾಯಾಲಯಗಳ ತೀರ್ಪು ಪರ್ಯಾಯವಾಗುವುದಿಲ್ಲ. ಅದರಲ್ಲೂ ಸರ್ಕಾರಕ್ಕೆ ತಜ್ಞರು ಮತ್ತು ವೈಜ್ಞಾನಿಕ ಸಲಹೆ ನೀಡಿರುವುದು ತರಾತುರಿಯಿಂದ, ಅಸಮಂಜಸ ಅಥವಾ ವಿವೇಚನಾರಹಿತವಾಗಿದೆ ಎಂಬುದನ್ನು ಸಾಬೀತುಪಡಿಸಲು ನ್ಯಾಯಾಲಯದ ಮುಂದೆ ಯಾವುದೇ ದಾಖಲೆ ಇಟ್ಟಿಲ್ಲದಿರುವಾಗ ನ್ಯಾಯಾಲಯ ಇಂಥ ನಿರ್ಧಾರ ಕೈಗೊಳ್ಳಲಾಗದು” ಎಂದು ಅಭಿಪ್ರಾಯಪಟ್ಟಿರುವ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸಿದೆ.

Related Stories

No stories found.
Kannada Bar & Bench
kannada.barandbench.com