ಮನೆಯಲ್ಲಿ ಗೋಮಾಂಸ ಕತ್ತರಿಸುವುದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದು: ಬಂಧನ ರದ್ದುಪಡಿಸಿದ ಅಲಾಹಾಬಾದ್ ಹೈಕೋರ್ಟ್

ಪ್ರಸ್ತುತ ಪ್ರಕರಣದಲ್ಲಿ ಬಡತನ ಮತ್ತು ಹಸಿವಿನ ಕಾರಣಕ್ಕೆ ಮನೆಯಲ್ಲಿ ಗುಟ್ಟಾಗಿ ಗೋಮಾಂಸ ಕತ್ತರಿಸಿರಬಹುದಾಗಿದ್ದು ಇದು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
Allahabad High Court
National Security Act, Cow
Allahabad High Court National Security Act, Cow

“ಒಬ್ಬರು ತಮ್ಮ ಮನೆಯಲ್ಲಿ ಗೋಮಾಂಸ ಕತ್ತರಿಸುವುದು ಬಡತನ ಮತ್ತು ಹಸಿವಿನ ಕಾರಣಕ್ಕೆ ಇರಬಹುದು. ಇದನ್ನು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎನ್ನಬಹುದೇ ವಿನಾ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಎನ್ನಲಾಗದು” ಎಂದು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ವಿವರಿಸಿದ್ದು ರಾಷ್ಟ್ರೀಯ ಭದ್ರತಾ ಕಾಯಿದೆಯಡಿಯ (ಎನ್‌ಎಸ್‌ಎ) ಬಂಧನವನ್ನು ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರಿದ್ದ ವಿಭಾಗೀಯ ಪೀಠವು ಗೋಹತ್ಯೆ ಆರೋಪದ ಮೇಲೆ ಬಂಧಿತರಾಗಿದ್ದ ಇರ್ಫಾನ್, ರಹಮತುಲ್ಲಾ ಮತ್ತು ಪರ್ವೇಜ್ ಎಂಬ ಮೂವರ ಬಂಧನವನ್ನು ರದ್ದುಗೊಳಿಸುವಾಗ ಈ ಅವಲೋಕನ ಮಾಡಿದೆ.

ಈ ಮೂವರು ಕಳೆದ ವರ್ಷ ಗೋಮಾಂಸ ತುಂಡುಗಳನ್ನು ಕತ್ತರಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದ ಗುಂಪಿನ ಸದಸ್ಯರಾಗಿದ್ದರು. ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡುವ ರೀತಿಯಲ್ಲಿ ಜನರಿಗೆ ಕಾಣುವಂತೆ ಜಾನುವಾರುಗಳನ್ನು ಬಹಿರಂಗವಾಗಿ ಕೊಲ್ಲುವ ಅಥವಾ ಮಾಂಸವನ್ನು ಸಾರ್ವಜನಿಕವಾಗಿ ಸಾಗಿಸುವಂತಹ ಸನ್ನಿವೇಶದಲ್ಲಿ ಈ ಘಟನೆ ನಿಲ್ಲುವುದಿಲ್ಲ, ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರ ಮನೆಯಲ್ಲಿ ಬೆಳಗಿನ ಹೊತ್ತು ಗೋಮಾಂಸ ಕತ್ತರಿಸುವುದನ್ನು ಕಂಡು ಅರ್ಜಿದಾರರು ಮತ್ತು ಸಹ ಆರೋಪಿಗಳನ್ನು ಮುಗುಮ್ಮಾಗಿ ಬಂಧಿಸಲಾಯಿತು. ಅರ್ಜಿದಾರರು ಮತ್ತು ಇತರ ಸಹ-ಆರೋಪಿಗಳನ್ನು ಈ ಕೃತ್ಯ ಎಸಗುವಂತೆ ಮಾಡಲು ಕಾರಣ ಬಡತನ, ಉದ್ಯೋಗದ ಕೊರತೆಯೇ ಅಥವಾ ಹಸಿವೆಯೇ ಎಂಬುದು ನಮಗೆ ತಿಳಿದಿಲ್ಲ. ಈ ರೀತಿಯಲ್ಲಿ ಗುಣ ನಿಷ್ಕರ್ಷೆ ಮಾಡುವ ವಿಚಾರವೆಂದರೆ ಈ ಕೃತ್ಯವನ್ನು ಸಾರ್ವಜನಿಕರ ಕಣ್ಣಿಗೆ ಬೀಳುವಂತೆ ಆಕ್ರಮಣಕಾರಿ ರೀತಿಯಲ್ಲಿ ಇತರ ಸಮುದಾಯಗಳ ಭಾವನೆಗಳನ್ನು ಕೆರಳಿಸುವಂತೆ ಮಾಡಲಾಗಿದೆಯೇ ಅಥವಾ ಮನೆಯೊಳಗೆ ಯಾರಿಗೂ ಕಾಣದಂತೆ ಮಾಡಲಾಗಿದೆಯೇ ಎಂಬುದು ಸಾರ್ವಜನಿಕ ಸುವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತದೆಯೇ ಅಥವಾ ಕಾನೂನು ಸುವ್ಯವಸ್ಥೆಯನ್ನು ಮಾತ್ರ ಪ್ರಭಾವಿಸುತ್ತದೆಯೇ ಎಂಬ ಪ್ರಶ್ನೆಯನ್ನು ಪರಿಹರಿಸಬಹುದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

Also Read
ಸುಪ್ರೀಂಕೋರ್ಟ್ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಕಾವಡಿ ಯಾತ್ರೆ ರದ್ದುಪಡಿಸಿದ ಉತ್ತರಪ್ರದೇಶ ಸರ್ಕಾರ

ಅಂತೆಯೇ, ಪ್ರಸ್ತುತ ಪ್ರಕರಣ ಕೇವಲ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಒಳಗೊಂಡಿದ್ದು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದಿಲ್ಲ ಎಂದು ತೀರ್ಮಾನಿಸಿದ ನ್ಯಾಯಾಲಯ ಇತರ ಕೆಲವು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಬೇಡವಾದರೆ ಈ ಮೂವರನ್ನು ಬಿಡುಗಡೆ ಮಾಡಲು ಆದೇಶಿಸಿತು.

ತೀರ್ಪು ನೀಡುವಾಗ ನ್ಯಾಯಾಲಯ ಭವಿಷ್ಯದಲ್ಲಿ ಬಂಧಿತರು ಇಂತಹ ಚಟುವಟಿಕೆ ಪುನರಾವರ್ತಿಸುತ್ತಾರೆ ಎಂದು ಸೂಚಿಸಲು ಯಾವುದೇ ಆಧಾರ ಇಲ್ಲ ಎಂದು ಹೇಳಿತು. ಆ ಮೂಲಕ ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಅಂಗೀಕರಿಸಿದ ನ್ಯಾಯಾಲಯ ಎನ್‌ಎಸ್‌ಎ ಕಾಯಿದೆಯಡಿ ನೀಡಲಾಗಿದ್ದ ಬಂಧನ ಆದೇಶವನ್ನು ರದ್ದುಗೊಳಿಸಿತು.

Related Stories

No stories found.
Kannada Bar & Bench
kannada.barandbench.com