ಗೋಹತ್ಯೆ ನಿಷೇಧ ಮಸೂದೆಯಲ್ಲಿರುವ ಪ್ರಮುಖ ಅಂಶಗಳೇನು?

ಗುಜರಾತ್‌, ಉತ್ತರಪ್ರದೇಶ ವಿಧಾನಸಭೆಗಳ ಮಾದರಿಯ ಮಸೂದೆಯನ್ನು ಸದನ ಅಂಗೀಕರಿಸಿದೆ. ವಿರೋಧಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಸೂದೆಗೆ ಒಪ್ಪಿಗೆ ದೊರೆತಿದೆ.
ಗೋಹತ್ಯೆ ನಿಷೇಧ ಮಸೂದೆಯಲ್ಲಿರುವ ಪ್ರಮುಖ ಅಂಶಗಳೇನು?

ʼಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆʼಗೆ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ. ಗುಜರಾತ್‌, ಉತ್ತರಪ್ರದೇಶ ವಿಧಾನಸಭೆಗಳ ಮಾದರಿಯಲ್ಲಿ ಮಸೂದೆಯನ್ನು ಸದನ ಅಂಗೀಕರಿಸಿದೆ. ವಿರೋಧಪಕ್ಷಗಳ ತೀವ್ರ ವಿರೋಧದ ನಡುವೆಯೂ ಮಸೂದೆಗೆ ಒಪ್ಪಿಗೆ ದೊರೆತಿದೆ. ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಅವರು ಮಸೂದೆಯನ್ನು ಮಂಡಿಸಿದರು. ಆದರೆ ಕಲಾಪ ಸಲಹಾ ಸಮಿತಿಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸುವ ಬಗ್ಗೆ ಪ್ರಸ್ತಾಪ ಇರಲಿಲ್ಲ ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಸೂದೆಯ ಪ್ರತಿಯನ್ನು ಹರಿದು ಎಸೆದರು. ಜೆಡಿಎಸ್‌ ಸದಸ್ಯರಿಂದಲೂ ವಿರೋಧ ವ್ಯಕ್ತವಾಯಿತು. ಪ್ರಮುಖ ಮಸೂದೆಯೊಂದನ್ನು ಮಂಡಿಸಲಾಗುವುದು ಎಂದು ಸದನದ ಸದಸ್ಯರ ಗಮನಕ್ಕೆ ತರಲಾಗಿತ್ತು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟನೆ ನೀಡಿದರು. ಮಸೂದೆಯ ಪ್ರಮುಖ ಉದ್ದೇಶಗಳನ್ನು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ವಿವರಿಸಿದರು. ಆದರೆ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ಮಸೂದೆಯ ಪ್ರಮುಖಾಂಶಗಳು

 • 13 ವರ್ಷದೊಳಗಿನ ಎಮ್ಮೆ ಕೋಣಗಳು ಸೇರಿದಂತೆ ಎತ್ತು ಹಸು ಕರು ಸೇರಿದಂತೆ ಯಾವುದೇ ಜಾನುವಾರುಗಳ ಹತ್ಯೆ ಮಾಡುವಂತಿಲ್ಲ.

 • ಗೋಹತ್ಯೆ ಮಾಡಿದರೆ 7 ವರ್ಷದವರೆಗೆ ಜೈಲು ಮತ್ತು ಗರಿಷ್ಠ ರೂ 10 ಲಕ್ಷದವರೆಗೆ ದಂಡ

 • ಒಂದು ಜಾನುವಾರು ಹತ್ಯೆಗೆ ರೂ 50,000ದಿಂದ ರೂ 5 ಲಕ್ಷದವರೆಗೆ ದಂಡ. ಎರಡಕ್ಕಿಂತ ಹೆಚ್ಚು ಹತ್ಯೆ ನಡೆದರೆ ರೂ 1 ಲಕ್ಷದಿಂದ ರೂ 10 ಲಕ್ಷದವರೆಗೆ ದಂಡ.

 • ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಕ್ಕಾಗಿ ಗೋಸಾಗಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯ.

 • ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು.

 • ಸರ್ಕಾರದ ನಿಯಮ ಉಲ್ಲಂಘಿಸಿದರೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ ಹಾಗೂ ರೂ 50,000ದಿಂದ ದಂಡ.

 • ಹದಿಮೂರು ವರ್ಷ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಸಮ್ಮತಿ.

 • ಸಬ್‌ಇನ್ಸ್‌ಪೆಕ್ಟರ್‌ ಮತ್ತು ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳಿಗೆ ತಪಾಸಣೆ ಮತ್ತು ಮುಟ್ಟುಗೋಲು ಅಧಿಕಾರ

 • ಮುಟ್ಟುಗೋಲು ನಡೆದ ತಕ್ಷಣ ಸಂಬಂಧಪಟ್ಟ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಅವರಿಗೆ ವರದಿ.

 • ಬ್ಯಾಂಕ್‌ ಗ್ಯಾರಂಟಿ ಬಳಿಕವಷ್ಟೇ ಆರೋಪಿ ಬಳಸಿದ ವಾಹನ ಮತ್ತಿತರ ವಸ್ತುಗಳನ್ನು ಮರಳಿಸುವುದು.

 • ರೋಗಗಳಿಂದ ಬಳಲುತ್ತಿರುವ ಗೋವುಗಳ ಹತ್ಯೆಗೆ ಇಲ್ಲ ಕಡಿವಾಣ.

 • ಪಶು ವೈದ್ಯಾಧಿಕಾರಿ ದೃಢೀಕರಣದ ನಂತರವೇ ಹತ್ಯೆಗೆ ಅವಕಾಶ.

 • ಸಂಶೋಧನಾ ಉದ್ದೇಶಕ್ಕೆ ಗೋವುಗಳನ್ನು ಬಳಸಲು ವಿನಾಯಿತಿ.

ಮಸೂದೆಯ ಪ್ರತಿ ಇಲ್ಲಿದೆ...

Related Stories

No stories found.
Kannada Bar & Bench
kannada.barandbench.com