ಕಳೆದ ಮೂರು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಸ್ಥಿರ ಏರಿಕೆ ಉಂಟಾಗಿದೆ ಎನ್ನುತ್ತವೆ ಅಂಕಿ ಅಂಶಗಳು.
ಕಳೆದ ಮೂರು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಸ್ಥಿರ ಏರಿಕೆ ಉಂಟಾಗಿದೆ ಎನ್ನುತ್ತವೆ ಅಂಕಿ ಅಂಶಗಳು.

ಮಹಿಳೆ, ಮಕ್ಕಳು, ವೃದ್ಧರು, ಸಮಾಜದಂಚಿನ ವ್ಯಕ್ತಿಗಳ ವಿರುದ್ಧ 2022ರಲ್ಲಿ ಅಪರಾಧ ಹೆಚ್ಚಳ: ಎನ್‌ಸಿಆರ್‌ಬಿ ವರದಿ

ದೆಹಲಿಯಲ್ಲಿ ಮಹಿಳೆಯರ ವಿರುದ್ಧ 14,158 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದು ಎಲ್ಲಾ ನಗರಗಳಿಗಿಂತಲೂ ಅತಿ ಹೆಚ್ಚು ಎಂದು ತಿಳಿದುಬಂದಿದೆ.

ಸ್ತ್ರೀಯರು, ಮಕ್ಕಳು, ವೃದ್ಧರು, ಸಮಾಜದಂಚಿನ ವ್ಯಕ್ತಿಗಳ ವಿರುದ್ಧ 2021 ಕ್ಕೆ ಹೋಲಿಸಿದರೆ 2022ರಲ್ಲಿ ಹೆಚ್ಚು ಅಪರಾಧಗಳು ನಡೆದಿವೆ ಎಂದು ಇತ್ತೀಚಿಗೆ ಬಿಡುಗಡೆಯಾಗಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ವರದಿ ಬಹಿರಂಗಪಡಿಸಿದೆ.

2022 ರಲ್ಲಿ ದುರ್ಬಲ ಗುಂಪುಗಳ ವಿರುದ್ಧದ ಅಪರಾಧಗಳು
2022 ರಲ್ಲಿ ದುರ್ಬಲ ಗುಂಪುಗಳ ವಿರುದ್ಧದ ಅಪರಾಧಗಳು

ಮಹಿಳೆಯರ ವಿರುದ್ಧದ ಅಪರಾಧಗಳು

ಮಹಿಳೆಯರ ವಿರುದ್ಧ 4.45 ಲಕ್ಷ ಅಪರಾಧ ಪ್ರಕರಣಗಳು 2022 ರಲ್ಲಿ ದಾಖಲಾಗಿದ್ದು, 2021ಕ್ಕೆ ಹೋಲಿಸಿದರೆ 4% ಹೆಚ್ಚಳ ಉಂಟಾಗಿರುವುದನ್ನು ಇದು ಸೂಚಿಸುತ್ತದೆ. ಕಳೆದ ವರ್ಷ, ಪ್ರತಿ ಲಕ್ಷ ಮಹಿಳೆಯರ ವಿರುದ್ಧ ನಡೆದ ಅಪರಾಧ ಪ್ರಮಾಣ 66.4ರಷ್ಟಿದ್ದರೆ, 2021ರಲ್ಲಿ ಈ ಪ್ರಮಾಣ 64.5 ರಷ್ಟಿತ್ತು.

ಕಳೆದ ಮೂರು ವರ್ಷಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ - 2020ರಲ್ಲಿ 3.71 ಲಕ್ಷ ಪ್ರಕರಣಗಳು, 2021ರಲ್ಲಿ 4.28 ಲಕ್ಷ ಪ್ರಕರಣಗಳು ಮತ್ತು 2022ರಲ್ಲಿ 4.45 ಲಕ್ಷ ಪ್ರಕರಣಗಳು ದಾಖಲಾಗಿವೆ.

ಉತ್ತರ ಪ್ರದೇಶದಲ್ಲಿ 2022ರಲ್ಲಿ ಅತಿಹೆಚ್ಚು ಅಂದರೆ 65,743 ಪ್ರಕರಣಗಳು ಮಹಿಳೆಯರ ವಿರುದ್ಧ ನಡೆದಿದ್ದರೆ, ಮಹಾರಾಷ್ಟ್ರದಲ್ಲಿ 45,331 ಪ್ರಕರಣಗಳು ಮತ್ತು ರಾಜಸ್ಥಾನದಲ್ಲಿ 45,058 ಪ್ರಕರಣಗಳು ದಾಖಲಾಗಿವೆ.

ಮಹಾನಗರಗಳಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಹಿಳೆಯರ ವಿರುದ್ಧ 14,158 ಅಪರಾಧ ಪ್ರಕರಣಗಳು ದಾಖಲಾಗಿವೆ. 2021 ಮತ್ತು 2020ರಲ್ಲಿ, ದೆಹಲಿ ಕ್ರಮವಾಗಿ 13,982 ಮತ್ತು 9,782 ಪ್ರಕರಣಗಳಿಗೆ ಸಾಕ್ಷಿಯಾಗಿದೆ.

2022ರಲ್ಲಿ, ಗಂಡಂದಿರು ಅಥವಾ ಅವರ ಸಂಬಂಧಿಕರ ವಿರುದ್ಧ ಇಂತಹ 1.40 ಲಕ್ಷ ಕ್ರೌರ್ಯ ಪ್ರಕರಣಗಳು ದಾಖಲಾಗಿವೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 3% ಹೆಚ್ಚಳ ಸೂಚಿಸುತ್ತದೆ.
2022ರಲ್ಲಿ, ಗಂಡಂದಿರು ಅಥವಾ ಅವರ ಸಂಬಂಧಿಕರ ವಿರುದ್ಧ ಇಂತಹ 1.40 ಲಕ್ಷ ಕ್ರೌರ್ಯ ಪ್ರಕರಣಗಳು ದಾಖಲಾಗಿವೆ, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 3% ಹೆಚ್ಚಳ ಸೂಚಿಸುತ್ತದೆ.

ಈ ಅಪರಾಧಗಳಲ್ಲಿ ಹೆಚ್ಚಾಗಿ ಪತಿ ಅಥವಾ ಅವನ ಸಂಬಂಧಿಕರ ಕ್ರೌರ್ಯ, ಅಪಹರಣ ಮತ್ತು ಅತ್ಯಾಚಾರದಂತಹ ಕೃತ್ಯಗಳು ಇವೆ.

ಗಂಡಂದಿರು ಅಥವಾ ಅವರ ಸಂಬಂಧಿಕರ ವಿರುದ್ಧ 2022ರಲ್ಲಿ, ಸುಮಾರು 1.4 ಲಕ್ಷ ಕ್ರೌರ್ಯ ಪ್ರಕರಣಗಳು ದಾಖಲಾಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 3% ಹೆಚ್ಚಳ ಸೂಚಿಸುತ್ತದೆ.

ಒಟ್ಟು 88,273 ಮಹಿಳೆಯರು ಅಪಹರಣಕ್ಕೆ ತುತ್ತಾಗಿದ್ದು ಸುಮಾರು 31,516 ಅತ್ಯಾಚಾರ ಪ್ರಕರಣಗಳು ನಡೆದಿವೆ. ರಾಜಸ್ಥಾನ (5,399), ಉತ್ತರ ಪ್ರದೇಶ (3,692), ಮಧ್ಯಪ್ರದೇಶ (3,092) ಮತ್ತು ಮಹಾರಾಷ್ಟ್ರ (2,904) ರಾಜ್ಯಗಳಲ್ಲಿ ಗರಿಷ್ಠ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ 1,212 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಮಕ್ಕಳ ವಿರುದ್ಧದ ಕೃತ್ಯಗಳು

ಮಕ್ಕಳ ವಿರುದ್ಧ 2022ರಲ್ಲಿ 1,62,449 ಪ್ರಕರಣಗಳು ದಾಖಲಾಗಿವೆ. 2021ಕ್ಕೆ ಹೋಲಿಸಿದರೆ ಈ ಬಗೆಯ ಅಪರಾಧದಲ್ಲಿ 8.7% ಹೆಚ್ಚಳ ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು (20,762), ಮಧ್ಯಪ್ರದೇಶದಲ್ಲಿ 20,415 ಹಾಗೂ ಉತ್ತರ ಪ್ರದೇಶದಲ್ಲಿ 18,682 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ದೆಹಲಿಯಲ್ಲಿ 2022ರಲ್ಲಿ ಮಕ್ಕಳ ವಿರುದ್ಧ 7,468 ಅಪರಾಧ ಪ್ರಕರಣಗಳು ವರದಿಯಾಗಿವೆ.

ಮಕ್ಕಳ ವಿರುದ್ಧದ ಹೆಚ್ಚಿನ ಅಪರಾಧಗಳು ಒತ್ತೆ ಮತ್ತು ಅಪಹರಣ ವರ್ಗಕ್ಕೆ ಸೇರಿವೆ. ಘೋರ ಅಪರಾಧಗಳ ವಿಭಾಗದಲ್ಲಿ 2,390 ಮಕ್ಕಳ ಕೊಲೆ ಪ್ರಕರಣಗಳು ನಡೆದಿವೆ. 

ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಒಟ್ಟು 76,069 ಮಕ್ಕಳನ್ನು ಅಪಹರಿಸಲಾಗಿದ್ದು, ಇಂತಹ 74,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

 2022ರಲ್ಲಿ ಒಟ್ಟು 63,116 ಅಪ್ರಾಪ್ತ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ 62,095 ಪ್ರಕರಣಗಳು ದಾಖಲಾಗಿವೆ.

ಹಿರಿಯ ನಾಗರಿಕರು
ಹಿರಿಯ ನಾಗರಿಕರು

ಹಿರಿಯ ನಾಗರಿಕರ ವಿರುದ್ಧದ ಅಪರಾಧಗಳು

ಹಿರಿಯ ನಾಗರಿಕರ (60 ವರ್ಷಕ್ಕಿಂತ ಮೇಲ್ಪಟ್ಟವರು) ವಿರುದ್ಧ ಅಪರಾಧಗಳನ್ನು ಎಸಗಿದ್ದಕ್ಕಾಗಿ ಒಟ್ಟು 28,545 ಪ್ರಕರಣಗಳು ದಾಖಲಾಗಿದ್ದು, 2021ಕ್ಕೆ ಹೋಲಿಸಿದರೆ ಅಂತಹ ಅಪರಾಧಗಳ ನೋಂದಣಿಯಲ್ಲಿ 9.3% ಹೆಚ್ಚಳ ಕಂಡುಬಂದಿದೆ. 

ಹಿರಿಯ ನಾಗರಿಕರ ವಿರುದ್ಧ ಗರಿಷ್ಠ ಅಪರಾಧಗಳು ಮಧ್ಯಪ್ರದೇಶದಲ್ಲಿ 6,187 , ಮಹಾರಾಷ್ಟ್ರದಲ್ಲಿ 5,059, ತಮಿಳುನಾಡಿನಲ್ಲಿ 2,376 ಮತ್ತು ತೆಲಂಗಾಣದಲ್ಲಿ 2,181 ಪ್ರಕರಣಗಳು ನಡೆದಿವೆ. 1,315 ಪ್ರಕರಣಗಳಿಗೆ ಸಾಕ್ಷಿಯಾಗಿರುವ ದೆಹಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ 2022ರಲ್ಲಿ 13% ಏರಿಕೆ ಕಂಡಿದೆ.

ಒಟ್ಟು ಪ್ರಕರಣಗಳಲ್ಲಿ 1,269 ಕೊಲೆ, 83 ನರಹತ್ಯೆ ಮತ್ತು 431 ಕೊಲೆ ಯತ್ನ ಪ್ರಕರಣಗಳು ಹಿರಿಯ ನಾಗರಿಕರ ವಿರುದ್ಧ ದಾಖಲಾಗಿವೆ. ತಮಿಳುನಾಡು (198), ಮಹಾರಾಷ್ಟ್ರ (183) ಮತ್ತು ಮಧ್ಯಪ್ರದೇಶಗಳಲ್ಲಿ (128) ಹೆಚ್ಚು ಕೊಲೆಗಳು ನಡೆದಿವೆ. 

ರಾಷ್ಟ್ರ ರಾಜಧಾನಿ 2022ರಲ್ಲಿ 22 ಹಿರಿಯ ನಾಗರಿಕರ ಕೊಲೆಗಳಿಗೆ ಸಾಕ್ಷಿಯಾಗಿದೆ. 

ಸಮಾಜದಂಚಿನಲ್ಲಿರುವ ಸಮುದಾಯಗಳ ವಿರುದ್ಧದ ಕುಕೃತ್ಯಗಳು

ಹಿಂದಿನ ವರ್ಷಕ್ಕೆ ಹೋಲಿಸಿದರೆ 2022ರಲ್ಲಿ ಭಾರತದಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳಲ್ಲಿ 13%ರಷ್ಟು ಏರಿಕೆಯಾಗಿದೆ.

ಒಟ್ಟು 57,582 ಅಪರಾಧಗಳು ವರದಿಯಾಗಿದ್ದು, ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇ.34ರಷ್ಟಿದೆ.

ಇವುಗಳಲ್ಲಿ 18,428 (ಶೇ.32) ಪ್ರಕರಣಗಳು ಸಣ್ಣಪುಟ್ಟ ಗಾಯದ ವಿಭಾಗದಲ್ಲಿ ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ 9.2% (5,274 ಪ್ರಕರಣಗಳು) ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿವೆ. ಒಟ್ಟು ದಾಖಲಾದ ಪ್ರಕರಣಗಳಲ್ಲಿ 4,703 ಪ್ರಕರಣಗಳು (8.2%) ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆಯಡಿಯ ಅಪರಾಧಗಳಿಗೆ ಸಂಬಂಧಿಸಿವೆ.

[ವರದಿಯ ಪ್ರತಿಯನ್ನು ಇಲ್ಲಿ ಓದಿ]

Attachment
PDF
NCRB STATS.pdf
Preview

Related Stories

No stories found.
Kannada Bar & Bench
kannada.barandbench.com