[ಕಾಮನ್‌ವೆಲ್ತ್‌ ಗೇಮ್ಸ್‌ ಹಗರಣ] ಭ್ರಷ್ಟಾಚಾರ ʼಸೈಲೆಂಟ್‌ ಕಿಲ್ಲರ್‌ʼ ಎಂದ ದೆಹಲಿ ಹೈಕೋರ್ಟ್‌: ವರ್ಮಾ ಮನವಿ ತಿರಸ್ಕಾರ

ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾಮನ್ವೆಲ್ತ್ ಕ್ರೀಡಾಕೂಟದ ಆಯೋಜನಾ ಸಮಿತಿಯ ಮಾಜಿ ಮಹಾ ನಿರ್ದೇಶಕ ವಿ ಕೆ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
[ಕಾಮನ್‌ವೆಲ್ತ್‌ ಗೇಮ್ಸ್‌ ಹಗರಣ] ಭ್ರಷ್ಟಾಚಾರ ʼಸೈಲೆಂಟ್‌ ಕಿಲ್ಲರ್‌ʼ ಎಂದ ದೆಹಲಿ ಹೈಕೋರ್ಟ್‌: ವರ್ಮಾ ಮನವಿ ತಿರಸ್ಕಾರ
A1
Published on

ಕಾಮನ್‌ವೆಲ್ತ್ ಗೇಮ್ಸ್ [ಸಿಡಬ್ಲ್ಯೂಜಿ] ಹಗರಣದ ಆರೋಪಿ ವಿಕೆ ವರ್ಮಾ ವಿರುದ್ಧ ವಂಚನೆ, ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ರೂಪಿಸುವ ವಿಶೇಷ ಸಿಬಿಐ ನ್ಯಾಯಾಲಯದ ಆದೇಶ ಬದಿಗೆ ಸರಿಸಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ತನ್ನ ವಿರುದ್ಧ ವಂಚನೆ ಮತ್ತು ಪಿತೂರಿ ಆರೋಪ ನಿಗದಿಪಡಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನಾ ಸಮಿತಿಯ ಮಾಜಿ ಮಹಾ ನಿರ್ದೇಶಕ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

Also Read
ಭ್ರಷ್ಟಾಚಾರ ಪ್ರಕರಣ: ಅನಿಲ್‌ ದೇಶಮುಖ್ ಅವರನ್ನು ಏ. 29 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ

ಭ್ರಷ್ಟಾಚಾರ ಎಂಬುದು ಸಮಾಜದ ʼಸೈಲೆಂಟ್‌ ಕಿಲ್ಲರ್‌ʼ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಗಂಭೀರ ಆರ್ಥಿಕ ಸಮಸ್ಯೆಯಾಗಿದೆ ಎಂದು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸಂಪನ್ಮೂಲಗಳ ಹಂಚಿಕೆಯಲ್ಲಿ ಅಸಮಾನತೆ ಮತ್ತು ಅಸಮರ್ಥತೆಯನ್ನು ಉತ್ತೇಜಿಸುವ ಮೂಲಕ ಅಭಿವೃದ್ಧಿ ಗುರಿಗಳ ಸಾಧನೆಯನ್ನು ಭ್ರಷ್ಟಾಚಾರ ತಡೆಯುತ್ತದೆ ಎಂದು ನ್ಯಾಯಾಲಯ ಹೇಳಿದೆ.

Kannada Bar & Bench
kannada.barandbench.com