ದೇಸಿ ಗೋತಳಿಯ ಸಂರಕ್ಷಣೆ ಮತ್ತು ವರ್ಧನೆಯ ಸಲುವಾಗಿ ವಿದೇಶಿ ತಳಿಗೆ ಬದಲಾಗಿ ದೇಸಿ ಗೋವುಗಳ ಕೃತಕ ಗರ್ಭಧಾರಣೆ ನಡೆಸಲು ನಿರ್ದೇಶಿಸಬೇಕು ಎಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಭಾರತದಲ್ಲಿ ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಗಮನ ಹರಿಸಿರುವುದರಿಂದ ದೇಶೀಯ ತಳಿಗಳ ಸಂತತಿ ಕಡಿಮೆಯಾಗಿದೆ ಎನ್ನುವುದನ್ನು ಹಾಗೂ ದೇಸಿ ಸಂತತಿಗಳ ಮಹತ್ವವನ್ನು ದಿವ್ಯಾ ರೆಡ್ಡಿ ಅವರು ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ. ಜಾನುವಾರುಗಳ ಗಣತಿಯ ಅನ್ವಯ 2019ರಲ್ಲಿ 19,34,62,871 ರಾಸುಗಳಿದ್ದು ಇದರಲ್ಲಿ ವಿದೇಶಿ/ಮಿಶ್ರ ತಳಿಯ ರಾಸುಗಳ ಸಂಖ್ಯೆ 5.13 ಕೋಟಿ ಇದ್ದರೆ, ದೇಸಿ ತಳಿಯ ರಾಸುಗಳ ಸಂಖ್ಯೆ 14.21 ಕೋಟಿ ಇದೆ. ವಿದೇಶಿ/ಮಿಶ್ರ ತಳಿಯ ರಾಸುಗಳ ಸಂಖ್ಯೆ ಈ ಹಿಂದಿನ 2012ರ ಹೋಲಿಕೆಯಲ್ಲಿ 29.3% ಏರಿಕೆಯಾಗಿದ್ದರೆ, ದೇಸಿ ತಳಿಗಳ ಸಂಖ್ಯೆಯಲ್ಲಿ ಶೇ.6 ಇಳಿಕೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.