![ಎನ್ಎಸ್ಇ ವಂಚನೆ ಪ್ರಕರಣ: ಚಿತ್ರಾ ರಾಮಕೃಷ್ಣಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ [ಚುಟುಕು]](http://media.assettype.com/barandbench-kannada%2F2022-05%2F262f16fb-4f12-4b9d-b91a-ca5ce3d5d989%2Fbarandbench_2022_05_8466ee5c_ca4a_44cd_9c0d_9f7b4b889741_12.avif?w=480&auto=format%2Ccompress&fit=max)
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಉದ್ಯೋಗಿ ಆನಂದ್ ಸುಬ್ರಮಣಿಯನ್ ಅವರ ಹುದ್ದೆ ಮತ್ತು ವೇತನವನ್ನು ಕಾಲಕಾಲಕ್ಕೆ ಹೆಚ್ಚಿಸಿದ ಆರೋಪದ ಮೇಲೆ ಬಂಧಿತರಾಗಿರುವ ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣಗೆ ಜಾಮೀನು ನೀಡಲು ಸಿಬಿಐ ವಿಶೇಷ ನ್ಯಾಯಾಲಯ ನಿರಾಕರಿಸಿದೆ. [ಸಿಬಿಐ ಮತ್ತು ಸಂಜಯ್ ಗುಪ್ತಾ ಮತ್ತಿತರರ ನಡುವಣ ಪ್ರಕರಣ].
ಚಿತ್ರಾ ಮತ್ತು ಆನಂದ್ ಸುಬ್ರಮಣಿಯನ್ ಅವರ ಪರ ವಕೀಲರ ವಾದ ಆಲಿಸಿದ ನಂತರ ವಿಶೇಷ ನ್ಯಾಯಾಧೀಶ ಸಂಜೀವ್ ಅಗರ್‌ವಾಲ್ ಜಾಮೀನು ಅರ್ಜಿ ನಿರಾಕರಿಸಿದರು. ಇನ್ನಷ್ಟೇ ಆದೇಶದ ಪ್ರತಿ ಲಭ್ಯವಾಗಬೇಕಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.