ವಂಚನೆ ಪ್ರಕರಣ: ಸ್ಪೈಸ್‌ಜೆಟ್‌ ಪ್ರವರ್ತಕ ಅಜಯ್‌ ಸಿಂಗ್‌ ನಿರೀಕ್ಷಣಾ ಜಾಮೀನು ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾಯಿಸಿರುವ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ ತನಿಖಾಧಿಕಾರಿ
Spice Jet promoter Ajay Singh
Spice Jet promoter Ajay SinghTwitter

ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಪೈಸ್‌ಜೆಟ್‌ ಪ್ರವರ್ತಕ ಅಜಯ್‌ ಸಿಂಗ್‌ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ [ಅಜಯ್‌ ಸಿಂಗ್‌ ವರ್ಸಸ್‌ ಸರ್ಕಾರ].

ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎನ್ನುವ ಮಾಹಿತಿಯನ್ನು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ವಿನೀತಾ ಗೋಯಲ್‌ ಅವರಿಗೆ ತನಿಖಾಧಿಕಾರಿಯು ನೀಡಿದರು.

ಅಪರಾಧಧ ಗಂಭೀರತೆಯ ಹಿನ್ನೆಲೆಯಲ್ಲಿ ಅರ್ಜಿದಾರರು ಕೋರಿರುವ ಪರಿಹಾರವನ್ನು ನೀಡುವುದಕ್ಕೆ ಸೂಕ್ತ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಮನವಿಯನ್ನು ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ

ದೆಹಲಿ ನಿವಾಸಿಯೊಬ್ಬರು ಸಿಂಗ್‌ ವಿರುದ್ಧ ಶೇರು ಕೊಳ್ಳುವಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಂಗ್ ತಾವು ನೀಡಿರುವ ವಾಗ್ದಾವನ್ನು ಈಡೇರಿಸಿಲ್ಲ ಎಂದು ಆಪಾದಿಸಿ ವಂಚನೆ ಪ್ರಕರಣ ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ತನಿಖೆಗೆ ಸಹಕರಿಸಲು ಹಾಜರಾಗುವಂತೆ ನೋಟಿಸ್‌ ನೀಡಿದರೂ ಸಹ ಸಿಂಗ್ ಅದನ್ನು ಪಾಲಿಸಿಲ್ಲ. ದಕ್ಷಿಣ ದೆಹಲಿಯ ಹೌಝ್‌ ಖಾಸ್‌ ಪೊಲೀಸ್‌ ಠಾಣೆಯಲ್ಲಿ ಘಟನೆಯ ಸಂಬಂಧ ಎಫ್‌ಐಆರ್‌ ದಾಖಲಾಗಿದೆ.

ಸಿಂಗ್‌ ಅವರು ಅಪ್ರಾಮಾಣಿಕ ಉದ್ದೇಶವನ್ನು ಹೊಂದಿದ್ದರು. ಈ ಕಾರಣದಿಂದಲೇ ಶೇರುಗಳ ಮಾರಾಟ ಸುಗಮಗೊಳಿಸಲು ನೀಡಲಾಗುವ ವಿತರಣಾ ಸೂಚನಾ ಪತ್ರವನ್ನು (ಡಿಐಎಸ್‌) ನೀಡುವಾಗ ಅವಧಿ ತೀರಿದ್ದ ಪತ್ರ ನೀಡಿದ್ದರು. ಇದರಿಂದಾಗಿ ಶೇರು ವರ್ಗಾವಣೆ ಆಗಲಿಲ್ಲ ಎಂದು ಆರೋಪಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com