ಎನ್ಎಸ್ಇ ಕೋ- ಲೊಕೇಷನ್ ಹಗರಣ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸಿಬಿಐಗೆ ದೆಹಲಿ ಹೈಕೋರ್ಟ್ ಅವಕಾಶ

ಕಳೆದ ಮೂವತ್ತು ತಿಂಗಳಿನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ʼಗಣನೀಯʼವಾದದ್ದೇನೂ ಸಂಭವಿಸಿಲ್ಲ ಎಂದು ಪತ್ರಕರ್ತ ಶಂತನು ಗುಹಾ ರೇ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Delhi High Court
Delhi High Court

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ಕೋ- ಲೊಕೇಷನ್‌ ಹಗರಣದ ತನಿಖೆಗೆ ಸಂಬಂಧಿಸಿದಂತೆ ಮುಚ್ಚಿದ ಲಕೋಟೆಯಲ್ಲಿ ಸ್ಥಿತಿಗತಿ ವರದಿ ಸಲ್ಲಿಸಲು ದೆಹಲಿ ಹೈಕೋರ್ಟ್‌ ಸಿಬಿಐಗೆ ಅನುಮತಿ ನೀಡಿದೆ. (ಶಂತನು ಗುಹಾ ರೇ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ). ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನುಪ್ ಜೆ ಭಂಭನಿ ಅವರಿದ್ದ ವಿಭಾಗೀಯ ಪೀಠ ಸ್ಥಿತಿಗತಿ ವರದಿಯನ್ನು ನಾಲ್ಕು ವಾರಗಳಲ್ಲಿ ಮೊಹರು ಮಾಡಿದ ಲಕೋಟೆ ಮೂಲಕ ಸಲ್ಲಿಸುವಂತೆ ಸೂಚಿಸಿದೆ.

ಕಳೆದ ಮೂವತ್ತು ತಿಂಗಳಿನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ʼಗಣನೀಯʼವಾದದ್ದೇನೂ ಸಂಭವಿಸಿಲ್ಲ ಎಂದು ಪತ್ರಕರ್ತ ಶಂತನು ಗುಹಾ ರೇ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಕಳೆದ ಮೂವತ್ತು ತಿಂಗಳಿನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ʼಗಣನೀಯʼವಾದದ್ದೇನೂ ಸಂಭವಿಸಿಲ್ಲ ಎಂದು ಪತ್ರಕರ್ತ ಶಂತನು ಗುಹಾ ರೇ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Also Read
ಹಣಕಾಸು ವಲಯಕ್ಕೆ ಫೇಸ್‌ಬುಕ್, ಗೂಗಲ್, ಅಮೆಜಾನ್ ಪ್ರವೇಶ: ಕೇಂದ್ರದ ಪ್ರತಿಕ್ರಿಯೆ ಬಯಸಿದ ದೆಹಲಿ ಹೈಕೋರ್ಟ್‌

“ನ್ಯಾಯಾಲಯ ಸ್ಥಿತಿಗತಿ ವರದಿ ಪಡೆದು ನನ್ನ ಆರೋಪಗಳು ತನಿಖೆಯಲ್ಲಿ ಇವೆಯೇ ಎಂಬುದನ್ನು ನೋಡಬಹುದು. ನನ್ನ ದೂರು ಹೆಚ್ಚು ವಿಸ್ತಾರವಾದದ್ದು” ಎಂದು ರೇ ಪರವಾಗಿ ಹಿರಿಯ ನ್ಯಾಯವಾದಿ ಗೌರವ್‌ ಭಾಟಿಯಾ ವಾದಿಸಿದರು.

“ತನಿಖೆಯ ಮಾಹಿತಿ ಒದಗಿಸುವಂತೆ ಈ ಹಿಂದೆ ನೀಡಿದ್ದ ಆದೇಶದ ಹೊರತಾಗಿಯೂ ಹೆಚ್ಚಿನ ಮಾಹಿತಿ ಒದಗಿಸಿಲ್ಲ. ಯಾವುದೇ ಆರೋಪ ಪಟ್ಟಿ ಸಲ್ಲಿಸಿಲ್ಲ. ನನಗೆ ಸ್ಥಿತಿಗತಿ ವರದಿ ನೀಡಿಲ್ಲ. ಈಗಿನ ಪ್ರಕರಣದ ವ್ಯಾಪ್ತಿಗೆ ಒಳಪಡದಿದ್ದರೆ ತಾನು ಒದಗಿಸಿರುವ ಮಾಹಿತಿ ಆಧಾರದ ಮೇಲೆ ಹೊಸ ಪ್ರಕರಣ ನೋಂದಾಯಿಸಿಕೊಳ್ಳಬೇಕು” ಎಂದು ರೇ ಕೋರಿದ್ದರು.

ಅರ್ಜಿಗೆ ಪ್ರತಿಕ್ರಿಯೆಯಾಗಿ, ಸಿಬಿಐ ಪರ ವಕೀಲ ಅನಿಲ್ ಗ್ರೋವರ್, “ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು. ನ್ಯಾಯಾಲಯವು ಈ ಹಿಂದೆ ನೀಡಿರುವ ಆದೇಶದ ಅನುಸಾರ, ರೇ ಅವರಿಗೆ ವಿವರವಾದ ಮಾಹಿತಿಯನ್ನು ಈಗಾಗಲೇ ಒದಗಿಸಲಾಗಿದೆ. ಸಿಬಿಐ ನ್ಯಾಯಾಲಯದ ಮುಂದೆ ಸ್ಥಿತಿಗತಿ ವರದಿ ಸಲ್ಲಿಸಬಹುದು” ಎಂದು ಅವರು ಹೇಳಿದರು.

“ಪ್ರಕರಣಕ್ಕೆ ಸಂಬಂಧಪಡದ ಯಾವುದೇ ವಿಚಾರಣೆ ನಡೆಸಲು ಹೋಗುವುದಿಲ್ಲ” ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿತು. ಸಿಬಿಐನ ಈಗಿನ ಪ್ರಕರಣದ ವ್ಯಾಪ್ತಿ ಹಿಗ್ಗಿಸಲು ತನಗೆ ಒಲವು ಇಲ್ಲ. ಸಿಬಿಐನ ಸ್ಥಿತಿಗತಿ ವರದಿಯನ್ನು ಸಹ ರೇ ಅವರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಅದರಂತೆ, ತನಿಖಾ ಸಂಸ್ಥೆ ನ್ಯಾಯಾಲಯದ ಪರಿಶೀಲನೆಗಾಗಿ ಮೊಹರು ಮಾಡಿದ ಕವರ್‌ನಲ್ಲಿ ಸ್ಥಿತಿಗತಿ ವರದಿ ಸಲ್ಲಿಸುತ್ತದೆ ಎಂದು ಪೀಠ ಹೇಳಿದ್ದು ಕೇಂದ್ರ ಸರ್ಕಾರ ಮತ್ತು ಸಿಬಿಐಗೆ ಈ ಸಂಬಂಧ ನೋಟಿಸ್‌ ನೀಡಲಾಗಿದೆ.

ಹಣಕಾಸು ಸಚಿವಾಲಯದ ಸಕ್ರಿಯ ಭಾಗವಹಿಸುವಿಕೆ ಇಲ್ಲದಿದ್ದರೆ ಕೋ-ಲೊಕೇಷನ್‌ ಹಗರಣ ಸಂಭವಿಸುತ್ತಿರಲಿಲ್ಲ ಎಂದು ಆರೋಪಿಸಿ ರೇ 2017 ರ ಆಗಸ್ಟ್‌ನಲ್ಲಿ ಸಿಬಿಐಗೆ ದೂರು ನೀಡಿದ್ದರು. ದೂರಿನಲ್ಲಿ, ಮಾಜಿ ವಿತ್ತ ಸಚಿವ ಪಿ ಚಿದಂಬರಂ, ಸೆಬಿ ಅಧಿಕಾರಿಗಳು ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳನ್ನು ಗುರಿಮಾಡಲಾಗಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ರೇ ಅವರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿರುವ ಹೆಸರುಗಳಿಗಷ್ಟೇ ಹಗರಣ ಸೀಮಿತವಾಗಿಲ್ಲ. ಇನ್ನೂ ಹೆಸರಿಸಲಾಗದ ವ್ಯಕ್ತಿಗಳಿಗೆ ಕೂಡ ಪ್ರಕರಣವನ್ನು ವಿಸ್ತರಿಸಬಹುದು ಎಂದು ತಿಳಸಿ ಸಿಬಿಐ ವರದಿ ಸಲ್ಲಿಸಿತ್ತು. ಆ ಬಳಿಕ ಹಿಂದಿನ ಅರ್ಜಿಯನ್ನು ವಾಪಸ್‌ ಪಡೆಯಲಾಗಿತ್ತು. ತನಿಖಾಧಿಕಾರಿಯಿಂದ ತನಿಖೆಗೆ ಅಗತ್ಯವಾದ ಮಾಹಿತಿ ಪಡೆಯಲು ನ್ಯಾಯಾಲಯ ರೇ ಅವರಿಗೆ ಸ್ವಾತಂತ್ರ್ಯ ನೀಡಿತ್ತು.

ಏನಿದು ಕೋ ಲೊಕೇಷನ್‌ ಹಗರಣ?

ಸ್ಥೂಲವಾಗಿ ಹೇಳುವುದಾದರೆ ಇದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‌ಎಸ್‌ಇಯ ಮಾರುಕಟ್ಟೆ ಕೈಚಳಕಕ್ಕೆ ಸಂಬಂಧಿಸಿದ ಹಗರಣ. ಆಯ್ದ ಕೆಲವರಿಗೆ ಮಾರುಕಟ್ಟೆಯ ಉಳಿದ ಭಾಗಗಳಿಗಿಂತ ಮೊದಲೇ ಮಾರುಕಟ್ಟೆ ಬೆಲೆಯ ಮಾಹಿತಿ ನೀಡುವುದು. ಆ ಮೂಲಕ ಉಳಿದ ಮಾರುಕಟ್ಟೆಯನ್ನು ಮುನ್ನಡೆಸಲು ಅವರಿಗೆ ಅನುವು ಮಾಡಿಕೊಡುವುದಾಗಿದೆ. ಇದು ಎನ್‌ಎಸ್‌ಇಯ ಡಿಮ್ಯೂಚುಯಲೈಸೇಷನ್‌ ವಿನಿಮಯ ಆಡಳಿತ ಮತ್ತು ಅದರ ದೃಢ ಪಾರದರ್ಶಕತೆ ಆಧರಿತ ವ್ಯವಸ್ಥೆಯನ್ನು ಉಲ್ಲಂಘಿಸುವುದಾಗಿದೆ.

Related Stories

No stories found.
Kannada Bar & Bench
kannada.barandbench.com