[ಚುಟುಕು] ಲೆಕ್ಕ ಪರಿಶೋಧಕರ ಅಪರಾಧ ಪ್ರಕರಣ ಬೆಳಕಿಗೆ ತರಲು ನೀತಿ ಅಗತ್ಯ: ಐಸಿಎಐಗೆ ದೆಹಲಿ ಹೈಕೋರ್ಟ್ ಕಿವಿಮಾತು

justice prathiba m singh with delhi HC

justice prathiba m singh with delhi HC

Published on

ಲೆಕ್ಕಪರಿಶೋಧಕರು ತಮ್ಮ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆ ಅಥವಾ ಶಿಕ್ಷೆ ಕುರಿತಂತೆ ಆಗಾಗ ಮಾಹಿತಿ ನೀಡುವ ನಿಟ್ಟಿನಲ್ಲಿ ನೀತಿ ಮತ್ತು ಕಾರ್ಯವಿಧಾನ ರೂಪಿಸುವಂತೆ ದೆಹಲಿ ಹೈಕೋರ್ಟ್‌ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಐಸಿಎಐಗೆ ಕಿವಿಮಾತು ಹೇಳಿತು. ಇಂತಹ ನೀತಿ ಅಗತ್ಯವಾಗಿದ್ದು ಇದರಿಂದ ಐಸಿಎಐನಲ್ಲಿ ನೋಂದಾಯಿಸಿಕೊಂಡಿರುವ ಲೆಕ್ಕ ಪರಿಶೋಧಕರ ವಿರುದ್ಧ ಇರುವ ಕ್ರಿಮಿನಲ್‌ ಮೊಕದ್ದಮೆ ಬಗ್ಗೆ ಸಂಸ್ಥೆ ಕತ್ತಲಿನಲ್ಲಿ ಉಳಿಯುವುದಿಲ್ಲ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅಭಿಪ್ರಾಯಪಟ್ಟರು. ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ನೀಡಲಾದ ಶೋಕಾಸ್‌ ನೋಟಿಸ್‌ ಪ್ರಶ್ನಿಸಿ ಮೋಹಿತ್‌ ಬನ್ಸಾಲ್‌ ಎಂಬ ಲೆಕ್ಕಪರಿಶೋಧಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com