ಟ್ರೇಡ್‌ ಮಾರ್ಕ್‌ ಉಲ್ಲಂಘನೆ: ಲಿವಿ ಸ್ಟ್ರಾಸ್‌ಗೆ ₹ 4 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ ದೆಹಲಿ ಹೈಕೋರ್ಟ್ [ಚುಟುಕು]

Levis Jeans
Levis Jeans
Published on

ವಾಣಿಜ್ಯ ಚಿಹ್ನೆ (ಟ್ರೇಡ್‌ ಮಾರ್ಕ್‌) ಉಲ್ಲಂಘನೆ ಪ್ರಕರಣದಲ್ಲಿ ಲಿವೈಸ್‌ ಜೀನ್ಸ್‌ ತಯಾರಿಸುವ ಅಮೆರಿಕದ ಜೀನ್ಸ್‌ ವಸ್ತ್ರ ಕಂಪೆನಿ ಲಿವಿ ಸ್ಟ್ರಾಸ್‌ಗೆ ₹ 4 ಲಕ್ಷ ನೀಡುವಂತೆ ಇಂಪೀರಿಯಲ್‌ ಆನ್‌ಲೈನ್‌ ಸರ್ವೀಸಸ್‌ ಪ್ರೈ ಲಿಮಿಟೆಡ್‌ಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ.

150 ವರ್ಷಗಳ ಕಾಲ ವ್ಯಾಪಕವಾಗಿ ಬಳಕೆಯಲ್ಲಿರುವ ಲೀವೈಸ್ ಗುರುತು 'ಆರ್ಕ್ಯುಯೇಟ್ ಸ್ಟಿಚಿಂಗ್ ಡಿಸೈನ್' (ಹಿಂಬದಿಯ ಜೇಬಿನ ಮೇಲೆ ಮಾಡಲಾಗುವ ಹೊಲಿಗೆ ವಿನ್ಯಾಸ) ವಿಶಿಷ್ಟ ವಾಣಿಜ್ಯ ಚಿಹ್ನೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಅದನ್ನು ಉಲ್ಲಂಘಿಸಿದ ಇಂಪೀರಿಯಲ್‌ ಆನ್‌ಲೈನ್‌ ಸರ್ವೀಸಸ್‌ಗೆ ದಂಡ ವಿಧಿಸುವುದು ಸೂಕ್ತ ಎಂದು ನ್ಯಾ. ಪ್ರತಿಭಾ ಸಿಂಗ್‌ ಅಭಿಪ್ರಾಯಪಟ್ಟರು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com