ಅಮೆರಿಕದ ವಾಣಿಜ್ಯ ನೀತಿಯನ್ನು ಉತ್ತೇಜಿಸುವುದಕ್ಕಾಗಿ ರೂಪುಗೊಂಡಿರುವ ಅಮೆರಿಕ ಒಕ್ಕೂಟ ಸರ್ಕಾರದ ಅಂಗಸಂಸ್ಥೆ ಅಮೆರಿಕ ವಾಣಿಜ್ಯ ಪ್ರತಿನಿಧಿ ಕಚೇರಿ (ಯುಎಸ್‌ಟಿಆರ್) ಬೌದ್ಧಿಕ ಆಸ್ತಿ ಹಕ್ಕುಗಳು, ರಕ್ಷಣೆ ಮತ್ತು ಜಾರಿ ಕುರಿತು ಇತ್ತೀಚೆಗೆ ತನ್ನ ವಾರ್ಷಿಕ ವಿಶೇಷ 301 ವರದಿ ಬಿಡುಗಡೆ ಮಾಡಿದ್ದು ಇದರಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಚಾರ ಮತ್ತು ನಿರ್ವಹಣೆಗಾಗಿ (ಸಿಐಎಪಿಎಂ) ನ್ಯಾಯಾಲಯವೊಂದನ್ನು ಸ್ಥಾಪಿಸಿದ ದೆಹಲಿ ಹೈಕೋರ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
ಬೌದ್ಧಿಕ ಆಸ್ತಿ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪ್ರತ್ಯೇಕವಾಗಿ ನಿಭಾಯಿಸಲು ಬೌದ್ಧಿಕ ಆಸ್ತಿ ನ್ಯಾಯಾಲಯವನ್ನು ದೆಹಲಿ ಹೈಕೋರ್ಟ್ ಜುಲೈ 2021ರಲ್ಲಿ ಸ್ಥಾಪಿಸಿತ್ತು. ಇಂತಹ ನ್ಯಾಯಾಲಯಗಳು ಈಗಾಗಲೇ ಇಂಗ್ಲೆಂಡ್, ಜಪಾನ್, ಮಲೇಷ್ಯಾ, ಥಾಯ್ಲೆಂಡ್, ಚೀನಾ ಮುಂತಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ದೆಹಲಿ ಹೈಕೋರ್ಟ್ ತನ್ನ ಕೆಲಸದಿಂದಾಗಿ ಜಾಗತಿಕ ಸಾಲಿಗೆ ಸೇರಿದೆ.
ಹೆಚ್ಚಿನ ಮಾಹಿತಿಗಾಗಿ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ಜಾಲತಾಣದ ʼಲಿಂಕ್ʼ ಗಮನಿಸಿ.