ನ್ಯಾಯಾಲಯದ ಆವರಣದಲ್ಲಿಅಶ್ಲೀಲ ನೃತ್ಯ: ಜಿಲ್ಲಾ ನ್ಯಾಯಾಧೀಶರಿಂದ ವರದಿ ಕೇಳಿದ ದೆಹಲಿ ಹೈಕೋರ್ಟ್

ಮುಂದಿನ ಆದೇಶದವರೆಗೆ, ನವದೆಹಲಿ ವಕೀಲರ ಸಂಘದ ಪ್ರಸ್ತುತ ಕಾರ್ಯಕಾರಿ ಸಮಿತಿಯು ಯಾವುದೇ ಕಾರ್ಯಕ್ರಮಕ್ಕೆ ನ್ಯಾಯಾಲಯದ ಆವರಣವನ್ನು ಬಳಸದಂತೆ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ ಸೂಚಿಸಿದೆ.
Delhi High Court and Patiala House Court
Delhi High Court and Patiala House Court

ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಸಂಕೀರ್ಣದಲ್ಲಿ ಕಳೆದ ಸೋಮವಾರ ಹೋಳಿ ಹಬ್ಬ ಆಚರಣೆ ವೇಳೆ ನರ್ತಕಿಯರನ್ನು ಕರೆಸಿ ಅಶ್ಲೀಲ ನೃತ್ಯ  ಪ್ರದರ್ಶನ ಏರ್ಪಡಿಸಿದ್ದನ್ನು ದೆಹಲಿ ಹೈಕೋರ್ಟ್‌ ಖಂಡಿಸಿದೆ.

ಶುಕ್ರವಾರ ನೀಡಿದ ಪೂರ್ಣ ನ್ಯಾಯಾಲಯದ ತೀರ್ಪಿನಲ್ಲಿ, ಹೈಕೋರ್ಟ್ ಈ ಕೃತ್ಯವನ್ನು ವಿರೋಧಿಸಿತು. ಇದು ವಕೀಲ ವೃತ್ತಿಯ ಮಹೋನ್ನತ ಸದಾಚಾರ ಮತ್ತು ನೈತಿಕತೆಗೆ ಅನುಗುಣವಾಗಿಲ್ಲ. ಇದರಿಂದಾಗಿ ನ್ಯಾಯಾಂಗ ಸಂಸ್ಥೆಗೆ ಕಳಂಕ ತರುವಂತಹ ಪರಿಣಾಮ ಬೀರುತ್ತದೆ ಎಂದು ಹೇಳಿತು.

ನವದೆಹಲಿ ವಕೀಲರ ಸಂಘಕ್ಕೆ (ಎನ್‌ಡಿಬಿಎ) ಮೂರು ದಿನಗಳೊಳಗೆ ನೋಟಿಸ್‌ ನೀಡಬೇಕು, ಸಂಘದ ಪ್ರತಿಕ್ರಿಯೆ ಪಡೆದು ಅದನ್ನು ತನಗೆ ಸಲ್ಲಿಸಬೇಕು ಎಂದು ನವದೆಹಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಹೈಕೋರ್ಟ್‌ ಸೂಚಿಸಿದೆ ಎಂಬುದಾಗಿ ಮೂಲಗಳು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿವೆ.

Also Read
ಹೋಳಿ ಆಚರಣೆ ಪ್ರಯುಕ್ತ ನ್ಯಾಯಾಲಯ ಸಂಕೀರ್ಣದಲ್ಲಿ ನವದೆಹಲಿ ವಕೀಲರ ಸಂಘದಿಂದ ಐಟಂ ಡಾನ್ಸ್ ಆಯೋಜನೆ: ಆಕ್ಷೇಪ

ಅಲ್ಲದೆ ಮುಂದಿನ ಆದೇಶದವರೆಗೆ, ನವದೆಹಲಿ ವಕೀಲರ ಸಂಘದ ಪ್ರಸ್ತುತ ಕಾರ್ಯಕಾರಿ ಸಮಿತಿಯು ಯಾವುದೇ ಕಾರ್ಯಕ್ರಮಕ್ಕೆ ನ್ಯಾಯಾಲಯದ ಆವರಣ ಬಳಸದಂತೆ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್‌ ಸೂಚಿಸಿದೆ.

ಮೂಲಗಳ ಪ್ರಕಾರ, ಯಾವುದೇ ಜಿಲ್ಲಾ ನ್ಯಾಯಾಲಯದ ವಕೀಲರ ಸಂಘವು ಯಾವುದೇ ಕಾರ್ಯಕ್ರಮಕ್ಕೆ ನ್ಯಾಯಾಲಯಗಳ ಆವರಣ ಬಳಸಲು ಅನುಮತಿ ಕೋರಿದಾಗ, ಸಂಬಂಧಪಟ್ಟ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನ್ಯಾಯಾಂಗದ ಘನತೆ, ಅಥವಾ ನ್ಯಾಯಾಂಗ ಸಂಸ್ಥೆ ಇಲ್ಲವೇ ಕಾನೂನು ವೃತ್ತಿಗೆ ಕುಂದುಂಟಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಉಚ್ಚ ನ್ಯಾಯಾಲಯ ಆದೇಶಿಸಿದೆ.

ಸುಪ್ರೀಂಕೋರ್ಟ್‌ನಿಂದ ಅನತಿ ದೂರದಲ್ಲಿರುವ ಪಟಿಯಾಲ ಹೌಸ್‌ ನ್ಯಾಯಾಲಯದ ಆವರಣದಲ್ಲಿ ಮಹಿಳಾ ದಿನಾಚರಣೆ ಸಂಧರ್ಭದಲ್ಲಿಯೇ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಆಘಾತಕಾರಿ ಎಂದು ಅನೇಕ ವಕೀಲರು ಸಂಘ ಹಾಗೂ ದೆಹಲಿ ವಕೀಲರ ಪರಿಷತ್ತಿಗೆ ಪತ್ರ ಬರೆದಿದ್ದರು.

Related Stories

No stories found.
Kannada Bar & Bench
kannada.barandbench.com