Justice Prathiba M. Singh
ಸುದ್ದಿಗಳು
ಪಿಎಂಎಲ್‌ಎ ನ್ಯಾಯನಿರ್ಣಯ ಪ್ರಾಧಿಕಾರದ ಹುದ್ದೆಗಳ ತ್ವರಿತ ಭರ್ತಿ: ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ಸ್ಥಾಪಿಸಲಾದ ನ್ಯಾಯನಿರ್ಣಯ ಪ್ರಾಧಿಕಾರದಲ್ಲಿ (ಎಎ) ಖಾಲಿ ಇರುವ ಆಡಳಿತ, ಕಾನೂನು ಹಾಗೂ ಹಣಕಾಸು ಮತ್ತು ಲೆಕ್ಕಶಾಸ್ತ್ರ ವಿಭಾಗದ ಸದಸ್ಯ ಹುದ್ದೆಗಳನ್ನು ನಾಲ್ಕು ತಿಂಗಳೊಳಗೆ ಭರ್ತಿ ಮಾಡುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ [ಅಲೋಕ್ ಇಂಡಸ್ಟ್ರೀಸ್ ಮತ್ತು ಜಾರಿ ನಿರ್ದೇಶನಾಲಯ ಸಹಾಯಕ ನಿರ್ದೇಶಕರ ನಡುವಣ ಪ್ರಕರಣ] .
ಆಡಳಿತಾಧಿಕಾರಿ ಮತ್ತು ರಿಜಿಸ್ಟ್ರಾರ್ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ಸೂಚಿಸಿದರು. ನ್ಯಾಯನಿರ್ಣಯ ಪ್ರಾಧಿಕಾರದಲ್ಲಿ ಹುದ್ದೆ ಖಾಲಿ ಇರುವ ಕುರಿತಾದ ಸ್ಥಿತಿಗತಿ ವರದಿ ಗಮನಿಸಿ ಅವರು ಈ ನಿರ್ದೇಶನ ನೀಡಿದರು.
ಹೆಚ್ಚಿನ ಮಾಹಿತಿಗೆ 'ಬಾರ್ ಅಂಡ್ ಬೆಂಚ್' ಇಂಗ್ಲಿಷ್ ಜಾಲತಾಣದ ʼಲಿಂಕ್ʼ ಗಮನಿಸಿ.