ವಿಕ್ರಮ್ ಸಂಪತ್ ವಿರುದ್ಧದ ಆಡ್ರೆ ಟ್ವೀಟ್‌ ತೆಗೆದುಹಾಕುವಂತೆ ಟ್ವಿಟರ್‌ಗೆ ಸೂಚಿಸಿದ ದೆಹಲಿ ಹೈಕೋರ್ಟ್ [ಚುಟುಕು]

Vikram Sampath and Audrey Truschke

Vikram Sampath and Audrey Truschke

ಹಿಂದೂ ರಾಷ್ಟ್ರೀಯವಾದಿ ವಿ ಡಿ ಸಾವರ್ಕರ್‌ ಅವರ ಬಗೆಗಿನ ಕೃತಿಯೊಂದಕ್ಕೆ ಸಂಬಂಧಿಸಿದಂತೆ ಚರಿತ್ರಕಾರ ವಿಕ್ರಮ್ ಸಂಪತ್ ಅವರು ಕೃತಿಚೌರ್ಯ ಮಾಡಿದ್ದಾರೆ ಎಂದು ಇತಿಹಾಸಕಾರ್ತಿ ಆಡ್ರೆ ಟ್ರುಶ್ಕೆ ಮಾಡಿರುವ ಐದು ಟ್ವೀಟ್‌ಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್‌ ಗುರುವಾರ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ಗೆ ಆದೇಶಿಸಿದೆ. ಟ್ರುಶ್ಕೆ ಮತ್ತಿಬ್ಬರು ಇತಿಹಾಸಕಾರರು ₹ 2 ಕೋಟಿ ಮಾನನಷ್ಟ ಪರಿಹಾರ ಕೊಡಬೇಕೆಂದು ಕೋರಿ ಸಂಪತ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಇದೇ ವೇಳೆ ವಿಕ್ರಂ ಕೃತಿಚೌರ್ಯ ಮಾಡಿದ್ದಾರೆಂದು ಆರೋಪಿಸಿ ವರದಿ ಪ್ರಕಟಿಸಿದ್ದ ʼದಿ ವೈರ್‌ʼ ವಿರುದ್ಧ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರಿದ್ದ ಪೀಠ ಯಾವುದೇ ಆದೇಶ ನೀಡಲಿಲ್ಲ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com