ಪಡಿತರ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ ಪ್ರಶ್ನಿಸಿದ್ದ ಪಿಐಎಲ್‌ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯು ನಿರ್ದಿಷ್ಟ ವರ್ಗದ ಜನರಿಗೆ ಅಹಾರ ಭದ್ರತೆ ಕಲ್ಪಿಸುತ್ತದೆ. ವ್ಯಕ್ತಿಗಳನ್ನು ಗುರುತಿಸಲು, ಸೋರಿಕೆಯಾಗದಂತೆ ತಡೆಯಲು ಆಧಾರ್‌ ಜೊತೆಗೆ ಇದನ್ನು ಜೋಡಿಸಲಾಗಿದೆ ಎಂದರೆ ಅದರಲ್ಲಿ ಸಮಸ್ಯೆಯಿಲ್ಲ ಎಂದ ನ್ಯಾಯಾಲಯ.
ಪಡಿತರ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ ಪ್ರಶ್ನಿಸಿದ್ದ ಪಿಐಎಲ್‌ ವಜಾಗೊಳಿಸಿದ ದೆಹಲಿ ಹೈಕೋರ್ಟ್‌
A1
Published on

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಆಹಾರ ಧಾನ್ಯ ಪಡೆಯಲು ಆಧಾರ್ ಕಡ್ಡಾಯಗೊಳಿಸುವ ಅಗತ್ಯತೆ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಪುಟ್ಟಸ್ವಾಮಿ ಪ್ರಕರಣ ಮತ್ತು ಆಧಾರ್‌ ಕೇಸ್‌ಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳ ಪ್ರಕಾರ ಸೌಲಭ್ಯಗಳನ್ನು ಹೊಂದಿರುವ ಯೋಜನೆಗಳ ಫಲಾನುಭವಿಗಳಾಗಲು ಆಧಾರ್‌ ಕಡ್ಡಾಯಗೊಳಿಸಬಹುದು ಎಂದು ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ನವೀನ್‌ ಚಾವ್ಲಾ ಅವರಿದ್ದ ಪೀಠ ಹೇಳಿತು.

"ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯು ಸಂವಿಧಾನದ 14 ಅಥವಾ 19ನೇ ವಿಧಿಯಂತೆ ಮೂಲ ತತ್ವವಲ್ಲ. ಇದು ನಿರ್ದಿಷ್ಟ ವರ್ಗದ ಜನರಿಗೆ ಅಹಾರ ಭದ್ರತೆಯನ್ನು ಕಲ್ಪಿಸುವ ಹಕ್ಕಾಗಿದೆ. ವ್ಯಕ್ತಿಗಳನ್ನು ಗುರುತಿಸಲು ಹಾಗೂ ಸೋರಿಕೆಯಾಗದಂತೆ ತಡೆಯಲು ಇದನ್ನು ಆಧಾರ್‌ ಜೊತೆಗೆ ಜೋಡಿಸಲಾಗಿದೆ ಎಂದರೆ ಅದರಲ್ಲಿ ಸಮಸ್ಯೆಯಿಲ್ಲ" ಎಂದು ಅಭಿಪ್ರಾಯಪಟ್ಟಿತು. ಮುಂದುವರೆದು ಪುಟ್ಟಸ್ವಾಮಿ ತೀರ್ಪಿನಲ್ಲಿ ಕೆಲವೊಂದು ಸೌಲಭ್ಯಗಳನ್ನು ಪಡೆಯಬೇಕೆಂದರೆ ಕೆಲವೊಂದು ಷರತ್ತುಗಳಿಗೆ ಒಳಪಡಬೇಕಾಗುತ್ತದೆ ಎನ್ನುವ ಸಾರವಿದೆ ಎಂಬುದು ತಮ್ಮ ಅಭಿಮತ ಎಂದಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com