ಸಚಿವ ಸ್ಥಾನದಿಂದ ಸತ್ಯೇಂದ್ರ ಜೈನ್ ಕೆಳಗಿಳಿಸುವಂತೆ ಕೋರಿದ್ದ ಪಿಐಎಲ್ ದೆಹಲಿ ಹೈಕೋರ್ಟ್‌ನಿಂದ ವಜಾ [ಚುಟುಕು]

ಸಚಿವ ಸ್ಥಾನದಿಂದ ಸತ್ಯೇಂದ್ರ ಜೈನ್ ಕೆಳಗಿಳಿಸುವಂತೆ ಕೋರಿದ್ದ ಪಿಐಎಲ್ ದೆಹಲಿ ಹೈಕೋರ್ಟ್‌ನಿಂದ ವಜಾ [ಚುಟುಕು]
A1

ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ನಂದ ಕಿಶೋರ್ ಗಾರ್ಗ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿತು.

ಜೈನ್ ನ್ಯಾಯಾಂಗ ಬಂಧನದಲ್ಲಿದ್ದು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಗೊಳಿಸುವಂತೆ ಪಿಐಎಲ್ ಕೋರಿತ್ತು.

ಜೈನ್‌ ಅವರು ಸಾಂವಿಧಾನಿಕ ಪ್ರತಿಜ್ಞೆ ಮತ್ತು ಕಾನೂನಿನ ನಿಯಮ ಎತ್ತಿ ಹಿಡಿಯುವ ಕರ್ತವ್ಯ ಮಾಡಬೇಕಾದ ಸಾರ್ವಜನಿಕ ಸೇವಕರಾಗಿದ್ದಾರೆ. ಆದರೆ ಗಂಭೀರ ಆರೋಪ ಎದುರಿಸುತ್ತಿದ್ದರೂ ಸಂಪುಟ ದರ್ಜೆ ಸಚಿವರ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ʼಬಾರ್‌ ಅಂಡ ಬೆಂಚ್‌ʼ ಇಂಗ್ಲಿಷ್‌ ಜಾಲತಾಣದ ʼಲಿಂಕ್‌ʼ ಗಮನಿಸಿ.

Related Stories

No stories found.
Kannada Bar & Bench
kannada.barandbench.com