ಪಶುವೈದ್ಯರ ಮಾನನಷ್ಟ ಮೊಕದ್ದಮೆ: ಮೇನಕಾ ಗಾಂಧಿಗೆ ದೆಹಲಿ ಹೈಕೋರ್ಟ್ ಸಮನ್ಸ್ [ಚುಟುಕು]

Manek Gandhi
Manek Gandhifacebook

ತಮ್ಮನ್ನು ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿ ಪಶು ವೈದ್ಯರು ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಂಸದೆ ಮೇನಕಾ ಗಾಂಧಿ ಅವರಿಗೆ ದೆಹಲಿ ಹೈಕೋರ್ಟ್‌ ಸಮನ್ಸ್‌ ಜಾರಿಗೊಳಿಸಿದೆ.

ನ್ಯಾಯಮೂರ್ತಿ ಅಮಿತ್ ಬನ್ಸಲ್ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದು ಲಿಖಿತ ಹೇಳಿಕೆ ದಾಖಲಿಸಲು ಮೇನಕಾ ಅವರಿಗೆ ಮೂವತ್ತು ದಿನಗಳ ಗಡುವು ನೀಡಿದರು. ಕಳೆದ ವರ್ಷ ಜೂನ್‌ನಲ್ಲಿ ಮೇನಕಾ ಅವರು ಪಶುವೈದ್ಯರಿಗೆ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ಸೋರಿಕೆಯಾಗಿತ್ತು.

Also Read
ಯೆಸ್ ಬ್ಯಾಂಕ್‌ ಕ್ಷೇಮಕ್ಕಾಗಿ ಪ್ರಿಯಾಂಕಾ ಗಾಂಧಿ ಅವರಿಂದ ಕಲಾಕೃತಿ ಖರೀದಿ: ರಾಣಾ ಕಪೂರ್

ನಾಯಿಯೊಂದರ ಅಂಗಚ್ಛೇದನದ ವೇಳೆ ಉಂಟಾದ ಲೋಪದ ಬಗ್ಗೆ ಪ್ರಶ್ನಿಸಿ ಗೋರಖ್‌ಪುರದ ಪಶುವೈದ್ಯ ಡಾ ವಿಕಾಸ್ ಶರ್ಮಾಅವರನ್ನು ಮೇನಕಾ ನಿಂದಿಸಿದ್ದರು. ಧ್ವನಿ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಬ್ಬಿತ್ತು.

ಅಲ್ಲದೆ ಆಕೆ ಪಶು ವೈದ್ಯರನ್ನು ನಿಂದಿಸಿ ಅಂಕಣ ಕೂಡ ಪ್ರಕಟಿಸಿದ್ದಾರೆ ಎಂದು ಕೂಡ ಭಾರತೀಯ ಪಶು ವೈದ್ಯಾಧಿಕಾರಿಗಳ ಸಂಘ ದೂರಿನಲ್ಲಿ ತಿಳಿಸಿದೆ.

Related Stories

No stories found.
Kannada Bar & Bench
kannada.barandbench.com