ವಿಚ್ಛೇದಿತ ಪತ್ನಿಗೆ ₹1.5 ಲಕ್ಷ ಮಾಸಿಕ ಜೀವನಾಂಶ: ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾಗೆ ದೆಹಲಿ ಹೈಕೋರ್ಟ್ ಆದೇಶ

ವಿಚಾರಣಾ ನ್ಯಾಯಾಲಯ ಪಾಯಲ್ ಅಬ್ದುಲ್ಲಾಗೆ ಪ್ರತಿ ತಿಂಗಳು ₹ 75,000 ನೀಡಬೇಕು ಮತ್ತು ಅವರ ಮಗನಿಗೆ ₹ 25,000 ಮಧ್ಯಂತರ ಜೀವನಾಂಶ ಒದಗಿಸಬೇಕು ಎಂದು ಒಮರ್ ಅವರಿಗೆ ಆದೇಶ ನೀಡಿತ್ತು. ಈ ಪರಿಹಾರ ಮೊತ್ತವನ್ನು ಹೈಕೋರ್ಟ್ ಗುರುವಾರ ಹೆಚ್ಚಿಸಿದೆ.
Omar Abdullah
Omar Abdullah
Published on

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತಮ್ಮ ವಿಚ್ಛೇದಿತ ಪತ್ನಿ ಪಾಯಲ್‌ ಅವರಿಗೆ ಜೀವನಾಂಶ ರೂಪದಲ್ಲಿ ತಿಂಗಳಿಗೆ ₹1.5 ಲಕ್ಷ ನೀಡುವಂತೆ ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಇದಲ್ಲದೆ ಒಮರ್‌ ಅವರು ತಮ್ಮ ಇಬ್ಬರು ಪುತ್ರಂದಿರ ಶಿಕ್ಷಣಕ್ಕಾಗಿ ಮಾಸಿಕ ತಲಾ ₹ 60,000 ಪಾವತಿಸಬೇಕು ಎಂದು ನ್ಯಾ. ಸುಬ್ರಮೋಣಿಯಂ ಪ್ರಸಾದ್‌ ಅವರು ಸೂಚಿಸಿದರು. ಈ ಮೊತ್ತವು ಒಮ್ಮೆ ಒಮರ್‌ ಅವರ ಪುತ್ರರು ಕಾನೂನು ಶಿಕ್ಷಣಕ್ಕಾಗಿ ನೊಂದಾಯಿಸಿಕೊಂಡ ನಂತರ ಪದವಿ ಅವಧಿಯು ಮುಗಿಯುವವರೆಗೆ ಚಾಲ್ತಿಯಲ್ಲಿರಲಿದೆ ಎಂದು ಹೇಳಿದ್ದಾರೆ.

Also Read
ಪತಿಯನ್ನು ಕಪ್ಪು ಬಣ್ಣದ ಚರ್ಮ ಹೊಂದಿದವ ಎಂದು ಕರೆಯುವುದು ಕ್ರೌರ್ಯ: ವಿಚ್ಛೇದನ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌

ವಿಚಾರಣಾ ನ್ಯಾಯಾಲಯವು ಈ ಮೊದಲು ಪಾಯಲ್‌ ಅಬ್ದುಲ್ಲಾಗೆ ಪ್ರತಿ ತಿಂಗಳು ₹ 75,000 ನೀಡಬೇಕು ಮತ್ತು ಮಕ್ಕಳಿಗೆ ₹ 25,000 ಮಧ್ಯಂತರ ಜೀವನಾಂಶ ಒದಗಿಸಬೇಕು ಎಂದು ಒಮರ್‌ ಅವರಿಗೆ ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಪಾಯಲ್‌ ಹೈಕೋರ್ಟ್‌ ಮೊರೆಹೋಗಿದ್ದರು.  ಈ ಪರಿಹಾರ ಮೊತ್ತವನ್ನು ಹೈಕೋರ್ಟ್‌ ಗುರುವಾರ ಹೆಚ್ಚಿಸಿದೆ.

Kannada Bar & Bench
kannada.barandbench.com