![ಮದ್ಯದ ರಿಯಾಯಿತಿ ಮೇಲಿನ ನಿಷೇಧ ತಡೆಯಲು ದೆಹಲಿ ಹೈಕೋರ್ಟ್ ನಕಾರ [ಚುಟುಕು]](http://media.assettype.com/barandbench-kannada%2F2022-03%2Fccf3544f-fb1b-48fd-8d64-53f448bb24f2%2Fbarandbench_2020_05_ea4065df_7f55_46c6_8e34_f312ca6320e0_Line_for_Liquor_Wine_Store.avif?w=480&auto=format%2Ccompress&fit=max)
ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ಮಾರಾಟದ ಮೇಲೆ ಯಾವುದೇ ರಿಯಾಯಿತಿ ಅಥವಾ ಕಡಿತ ನಿಷೇಧಿಸಿರುವ ದೆಹಲಿ ಸರ್ಕಾರದ ಆದೇಶವನ್ನು ತಡೆಯಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಪ್ರಕರಣದ ಕುರಿತಂತೆ ಇಂದು ನ್ಯಾ. ವಿ ಕಾಮೇಶ್ವರ ರಾವ್ ಅವರು ಆದೇಶ ಪ್ರಕಟಿಸಿದರು. ಅರ್ಜಿಯು ದೆಹಲಿ ಸರ್ಕಾರದ ಆದೇಶಕ್ಕೆ ಮಧ್ಯಂತರ ಪರಿಹಾರವನ್ನು ಕೋರಿತ್ತು. ವಿಪರೀತ ರಿಯಾಯಿತಿಗಳ ಕಾರಣದಿಂದಾಗಿ, ಇತರ ರಾಜ್ಯಗಳಿಗೆ ಮದ್ಯವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ನಗರವನ್ನು ಅಕ್ರಮ ಮದ್ಯ ಮಾರಾಟ ಹಾಗೂ ಸಂಗ್ರಹದ ಕೇಂದ್ರವಾಗಲು ಬಿಡಲು ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರ ವಾದಿಸಿತ್ತು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 25ಕ್ಕೆ ನಿಗದಿಯಾಗಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.