ಪ್ರಶಾಂತ್ ಭೂಷಣ್ ವಿರುದ್ಧ ಶಿಸ್ತು ಕ್ರಮದ ಆದೇಶ ಹೊರಡಿಸದಂತೆ ದೆಹಲಿ ವಕೀಲರ ಸಂಘಕ್ಕೆ ಹೈಕೋರ್ಟ್ ನಿರ್ಬಂಧ [ಚುಟುಕು]

Prashant Bhushan and Delhi High Court
Prashant Bhushan and Delhi High Court

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಕೇಂದ್ರ (ಸಿಪಿಐಎಲ್), ಸ್ವರಾಜ್ ಅಭಿಯಾನ ಮತ್ತು ಕಾಮನ್‌ ಕಾಸ್‌ ಎಂಬ ಮೂರು ಸರ್ಕಾರೇತರ ಸಂಸ್ಥೆಗಳ ಆಡಳಿತ ಮಂಡಳಿಯ ಭಾಗವಾಗಿದ್ದುಕೊಂಡು, ಅವುಗಳ ಪರ ವಾದ ಮಂಡಿಸಿದ್ದಕ್ಕಾಗಿ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಶಿಸ್ತುಕ್ರಮದ ಆದೇಶ ನೀಡದಂತೆ ದೆಹಲಿಯ ವಕೀಲರ ಸಂಘಕ್ಕೆ (ಬಿಸಿಡಿ) ದೆಹಲಿ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಪ್ರಶಾಂತ್‌ ಭೂಷಣ್‌ ವಿರುದ್ಧ ಬಿಸಿಡಿ ಕೈಗೊಂಡಿದ್ದ ಶಿಸ್ತು ಕ್ರಮ ಪ್ರಕ್ರಿಯೆ ಬುಧವಾರ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಆದೇಶ ನೀಡದಂತೆ ಹೈಕೋರ್ಟ್‌ ಬಿಸಿಡಿಗೆ ಸೂಚಿಸಿದೆ. ವಕೀಲರ ವೃತ್ತಿಪರ ನಡವಳಿಕೆ ಮತ್ತು ಶಿಷ್ಟಾಚಾರದ ಮಾನದಂಡಗಳ ನಿಯಮ 8 ಅನ್ನು ಪ್ರಶ್ನಿಸಿ ಪ್ರಶಾಂತ್‌ ಭೂಷಣ್ ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com