'ಸಿಎನ್ಎನ್' ಚಿಹ್ನೆ ಬಳಸದಂತೆ ಇಬ್ಬರು ಪತ್ರಕರ್ತರಿಗೆ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್ [ಚುಟುಕು]
A1

'ಸಿಎನ್ಎನ್' ಚಿಹ್ನೆ ಬಳಸದಂತೆ ಇಬ್ಬರು ಪತ್ರಕರ್ತರಿಗೆ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್ [ಚುಟುಕು]

ಅಮೆರಿಕದ ಮಾಧ್ಯಮ ಸಂಸ್ಥೆ ಕೇಬಲ್ ನ್ಯೂಸ್ ನೆಟ್‌ವರ್ಕ್ (ಸಿಎನ್‌ಎನ್‌)ನ ವಾಣಿಜ್ಯ ಚಿಹ್ನೆಯನ್ನು ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬಳಸದಂತೆ ದೆಹಲಿ ಹೈಕೋರ್ಟ್‌ ಇಬ್ಬರು ಪತ್ರಕರ್ತರಿಗೆ ಶಾಶ್ವತ ತಡೆಯಾಜ್ಞೆ ನೀಡಿದೆ.

ಪತ್ರಕರ್ತರಾದ ಫಯಾಜ್‌ ಶೇಖ್‌ ಮತ್ತು ಅಜರ್‌ ಹುಸೇನ್‌ ಅವರು ಕ್ರಮವಾಗಿ ಸಿಎನ್‌ಎನ್‌ ಸಿಟಿ ನ್ಯೂಸ್‌ ನೆಟ್‌ವರ್ಕ್‌ ಮತ್ತು ಸಿಎನ್‌ಎನ್‌ ಖಬರ್‌ ಅಪ್‌ಡೇಟ್‌ ಎಂಬ ಸುದ್ದಿವಾಹಿನಿಗಳನ್ನು ನಡೆಸುತ್ತಿದ್ದಾರೆ ಎಂದು ಮೊಕದ್ದಮೆ ಹೂಡಲಾಗಿತ್ತು.

"ಒಂದು ಸೇವೆಗೆ ಅದೇ ಬಗೆಯ ಚಿಹ್ನೆ ಬಳಸುವುದು ಸಿಎನ್‌ಎನ್‌ ಹಕ್ಕುಗಳ ಉಲ್ಲಂಘನೆಯಾಗಿದ್ದು, ಪ್ರತಿವಾದಿಗಳು ಆ ಚಿಹ್ನೆ ಬಳಸುತ್ತಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ" ಎಂದು ನ್ಯಾ. ಪ್ರತಿಭಾ ಎಂ ಸಿಂಗ್‌ ತಿಳಿಸಿ ಸಿಎನ್‌ಎನ್‌ಗೆ ರೂ 3 ಲಕ್ಷ ಪರಿಹಾರ ಒದಗಿಸುವಂತೆ ಸೂಚಿಸಿದರು.

ಹೆಚ್ಚಿನ ಮಾಹಿತಿಗಾಗಿ ಬಾರ್‌ ಅಂಡ್‌ ಬೆಂಚ್‌ ಇಂಗ್ಲಿಷ್‌ ಜಾಲತಾಣದ ಲಿಂಕ್ ಗಮನಿಸಿ.

Related Stories

No stories found.
Kannada Bar & Bench
kannada.barandbench.com