ಐದು ವರ್ಷ ಹೊಸ ಫಾರ್ಮಸಿ ಕಾಲೇಜು ತೆರಯುವಂತಿಲ್ಲ ಎಂದು ಪಿಸಿಐ ಹೇರಿದ್ದ ನಿಷೇಧ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ನಾಗರಿಕರ ಮೇಲೆ ದೂರಗಾಮಿ ಪರಿಣಾಮಗಳನ್ನು ಉಂಟುಮಾಡುವ ಇಂತಹ ನಿಯಂತ್ರಕ ನಿರ್ಧಾರಗಳಿಗೆ ವೈಜ್ಞಾನಿಕ ಅಧ್ಯಯನ ಮತ್ತು ಪೂರಕ ಮಾಹಿತಿ ಅಗತ್ಯವಿದೆ ಎಂದು ನ್ಯಾ. ಪ್ರತೀಕ್ ಜಲನ್ ಹೇಳಿದರು.
ಐದು ವರ್ಷ ಹೊಸ ಫಾರ್ಮಸಿ ಕಾಲೇಜು ತೆರಯುವಂತಿಲ್ಲ ಎಂದು ಪಿಸಿಐ ಹೇರಿದ್ದ ನಿಷೇಧ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

Delhi High Court

A1

2020-21ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಕಾಲ ಹೊಸ ಫಾರ್ಮಸಿ ಕಾಲೇಜು ತೆರಯುವಂತಿಲ್ಲ ಎಂದು ಭಾರತೀಯ ಫಾರ್ಮಸಿ ಮಂಡಳಿ ವಿಧಿಸಿದ್ದ ನಿಷೇಧವನ್ನು ದೆಹಲಿ ಹೈಕೋರ್ಟ್‌ ಸೋಮವಾರ ರದ್ದುಗೊಳಿಸಿದೆ [ಶಹೀದ್ ತೆಗ್ ಬಹದ್ದೂರ್ ಕಾಲೇಜ್ ಆಫ್ ಫಾರ್ಮಸಿ ಮತ್ತು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ನಡುವಣ ಪ್ರಕರಣ].

ನಾಗರಿಕರ ಮೇಲೆ ದೂರಗಾಮಿ ಪರಿಣಾಮ ಬೀರುವ ಇಂತಹ ನಿಯಂತ್ರಕ ನಿರ್ಧಾರಗಳಿಗೆ ವೈಜ್ಞಾನಿಕ ಅಧ್ಯಯನ ಮತ್ತು ಪೋಷಕ ಮಾಹಿತಿಯ ಅಗತ್ಯವಿದೆ ಎಂದು ನ್ಯಾ. ಪ್ರತೀಕ್ ಜಲನ್ ಹೇಳಿದರು.

ಇದೇ ವೇಳೆ ನ್ಯಾಯಾಲಯ "ಮೊರಟೋರಿಯಂ (ತಾತ್ಕಾಲಿಕ ತಡೆ) ವಿಧಿಸುವುದರಿಂದ ಪಿಸಿಐ ಅಧಿಕಾರವನ್ನು ಅತಿಕ್ರಮಿಸಿದಂತಾಗುತ್ತದೆಯೇ?” ಎಂಬ ವಿಚಾರವನ್ನು ಪರಿಗಣಿಸಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮೊರಟೋರಿಯಂ ಕುರಿತು ಪಿಸಿಐ ನಿಲುವಿನಲ್ಲಿ ಪ್ರಾಥಮಿಕ ಅಸಂಗತತೆಯನ್ನು ವಿವರಿಸುವುದರ ಜೊತೆಗೆ ನ್ಯಾಯಾಲಯ ವಿವಿಧ ಅವಲೋಕನಗಳನ್ನು ಮಾಡಿತು.

Also Read
ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನಿರಾಕರಿಸುವಂತಿಲ್ಲ: ಸುಪ್ರೀಂಕೋರ್ಟ್

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಫಾರ್ಮಸಿ ಕೌನ್ಸಿಲ್ ಆಫ್‌ ಇಂಡಿಯಾ ಬರೆದಿದ್ದ ಪತ್ರ ಪ್ರಶ್ನಿಸಿ 88 ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಪ್ರಸ್ತುತ ಪ್ರಕರಣದಲ್ಲಿ ಪಿಸಿಐ ಚಲಾಯಿಸಿರುವ ಕಾರ್ಯನಿರ್ವಾಹಕ ಅಧಿಕಾರವು ಅದರ ವ್ಯಾಪ್ತಿಯನ್ನು ಮೀರಿದೆ ಎಂದು ತೀರ್ಪು ನೀಡಿದ ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿ ಪಿಸಿಐ ನಿರ್ಧಾರವನ್ನು ರದ್ದುಗೊಳಿಸಿತು. ಸಂಸ್ಥೆಯೊಂಧನ್ನು ಸ್ಥಾಪಿಸಿ ಅದನ್ನು ನಿರ್ವಹಿಸುವ ಮೂಲಭೂತ ಹಕ್ಕನ್ನು ಕಾರ್ಯಕಾರಿ ಆದೇಶವೊಂದರ ಮೂಲಕ ನಿರ್ಬಂಧಿಸುವುದು ಅನುಮತಿಸುವಂತಹದ್ದಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಒತ್ತಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com