ಪತ್ರಕರ್ತ ಜುಬೈರ್ ನ್ಯಾಯಾಂಗ ಬಂಧನ ಕುರಿತು ಮಾಧ್ಯಮಗಳಿಗೆ ತಪ್ಪು ಮಾಹಿತಿ: ದೆಹಲಿ ಡಿಸಿಪಿ

"ಇದು ಭಾರೀ ಹಗರಣವಾಗಿದ್ದು ಇಂದು ನಮ್ಮ ದೇಶದಲ್ಲಿ ಕಾನೂನಿನ ಆಡಳಿತದ ಸ್ಥಿತಿಯನ್ನು ಹೇಳುತ್ತದೆ" ಎಂದು ಜುಬೈರ್ ಪರ ವಕೀಲ ಸೌತಿಕ್ ಬ್ಯಾನರ್ಜಿ ಪ್ರತಿಕ್ರಿಯಿಸಿದರು.
Delhi Police
Delhi Police

ನ್ಯಾಯಾಲಯದ ಆದೇಶ ಪ್ರಕಟವಾಗುವ ಮೊದಲೇ ಪತ್ರಕರ್ತ, ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಿರುವ ಕುರಿತು ತಾನು ತಪ್ಪು ಮಾಹಿತಿ ನೀಡಿರುವುದಾಗಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕೆಪಿಎಸ್ ಮಲ್ಹೋತ್ರಾ ಶನಿವಾರ ಹೇಳಿದ್ದಾರೆ ಎಂದು ವರದಿಯಾಗಿದೆ.

ಜುಬೈರ್ ಅವರ ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತನ್ನ ತೀರ್ಪನ್ನು ಕೆಲ ಹೊತ್ತಿನವರೆಗೆ ಕಾಯ್ದಿರಿಸಿದ್ದ ಬೆನ್ನಲ್ಲೇ ಈ ವೈಫಲ್ಯ ಸಂಭವಿಸಿದೆ. ಸಂಜೆ 4 ಗಂಟೆಗೆ ಆದೇಶ ನೀಡಲು ತೀರ್ಮಾನವಾಗಿತ್ತು.

Also Read
ಮೊಹಮ್ಮದ್‌ ಜುಬೈರ್‌ ಅವರನ್ನು ನಾಲ್ಕು ದಿನ ಪೊಲೀಸ್‌ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ

ನ್ಯಾಯಾಲಯ ಜುಬೈರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು 14 ದಿನಗಳ ನ್ಯಾಯಾಂಗ ಕಾಲ ಅವರನ್ನು ಬಂಧನಕ್ಕೆ ಕಳುಹಿಸಿದೆ ಎಂಬ ದೆಹಲಿ ಪೊಲೀಸರ ಹೇಳಿಕೆ ಮಾಧ್ಯಮಗಳಲ್ಲಿ ಬಿತ್ತರಗೊಳ್ಳಲು ಆರಂಭವಾಗಿತ್ತು. ಆದರೆ ನ್ಯಾಯಾಲಯಕ್ಕೆ ಹಾಜರಾಗಿದ್ದ ವರದಿಗಾರರು ಆದೇಶ ಇನ್ನೂ ಪ್ರಕಟವಾಗಿಲ್ಲ ಎಂದು ಖಚಿತಪಡಿಸಿದರು.

ಅಲ್ಲದೆ ಜುಬೈರ್‌ ಪರ ವಕೀಲ ಸೌತಿಕ್ ಬ್ಯಾನರ್ಜಿ ಅವರು ಕೂಡ ಜಾಮೀನು ಅರ್ಜಿ ಕುರಿತು ನ್ಯಾಯಾಲಯ ಈವರೆಗೆ ಆದೇಶ ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದರು. "ಜಾಮೀನು ತಿರಸ್ಕರಿಸಲಾಗಿದೆ ಮತ್ತು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂಬ ವಿಚಾರವನ್ನು ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಅವರು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದನ್ನು ನೋಡಿ ನನಗೆ ಆಘಾತವಾಗಿದೆ. ಸುದ್ದಿ ವಾಹಿನಿಗಳ ಟ್ವಿಟರ್ ಪೋಸ್ಟ್‌ಗಳಿಂದ ನನಗೆ ಇದು ಗೊತ್ತಾಯಿತು... ಇದು ಭಾರೀ ಹಗರಣವಾಗಿದ್ದು ಇಂದು ನಮ್ಮ ದೇಶದಲ್ಲಿ ಕಾನೂನಿನ ಆಡಳಿತದ ಸ್ಥಿತಿಯನ್ನು ಹೇಳುತ್ತದೆ" ಎಂದು ಬ್ಯಾನರ್ಜಿ ವೀಡಿಯೊದಲ್ಲಿ ಹೇಳಿದ್ದಾರೆ.

ವೀಡಿಯೊ ನೋಡಿ:

Related Stories

No stories found.
Kannada Bar & Bench
kannada.barandbench.com