ವಿಪಕ್ಷಗಳ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಷಡ್ಯಂತ್ರ: ದೆಹಲಿ ಹೈಕೋರ್ಟ್‌ ಮುಂದೆ ರಾಹುಲ್‌, ಸೋನಿಯಾ ಆಕ್ಷೇಪಣೆ

ಭಾಷಣ ಮಾಡಿದ ಆಡಳಿತ ಪಕ್ಷದರನ್ನು ಬಿಟ್ಟು ವಿರೋಧ ಪಕ್ಷದವರನ್ನು ಪಕ್ಷಕಾರರನ್ನಾಗಿಸಿರುವುದನ್ನು ನೋಡಿದರೆ ಇದರ ಹಿಂದೆ ವ್ಯಾಪಕ ಸಂಚು ನಡೆದಿದೆ ಎಂದು ರಾಹುಲ್‌ ಮತ್ತು ಸೋನಿಯಾ ಗಾಂಧಿ ಅವರ ಅರ್ಜಿಯಲ್ಲಿ ಹೇಳಲಾಗಿದೆ.
Rahul Gandhi and Sonia Gandhi
Rahul Gandhi and Sonia GandhiFacebook

ಪೌರತ್ವ ತಿದ್ದುಪಡಿ ಕಾಯಿದೆಗೆ (ಸಿಎಎ) ಸಂಬಂಧಿಸಿದ ಭಾಷಣದ ಕುರಿತು ಎಫ್‌ಐಆರ್‌ ದಾಖಲಿಸಲು ಕೋರಿರುವ ಅರ್ಜಿಯ ಹಿಂದೆ ವ್ಯವಸ್ಥಿತ ಸಂಚು ನಡೆದಿದೆ ಎಂದು ದೆಹಲಿ ಹೈಕೋರ್ಟ್‌ಗೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಭಾಷಣ ಮಾಡಿದ ಆಡಳಿತ ಪಕ್ಷದವರನ್ನು ಕೈಬಿಟ್ಟು ವಿರೋಧ ಪಕ್ಷಗಳ ನಾಯಕರು ಮತ್ತು ಸರ್ಕಾರದ ಧೋರಣೆಯನ್ನು ವಿರೋಧಿಸುವವರನ್ನು ಪಕ್ಷಕಾರರನ್ನಾಗಿಸಿರುವುದನ್ನು ನೋಡಿದರೆ ಇದರಿಂದ ಹಿಂದೆ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಮತ್ತು ಸೋನಿಯಾ ಹೇಳಿದ್ದಾರೆ.

ಕ್ರಮಕ್ಕೆ ಆಗ್ರಹಿಸಿ ಸಲ್ಲಿಸಿರುವ ಅರ್ಜಿಯ ಉಲ್ಲೇಖಿಸಿರುವ ನಿಯಮಗಳ ವ್ಯಾಪ್ತಿಗೆ ಆಡಳಿತ ಪಕ್ಷದ ಸದಸ್ಯರ ಭಾಷಣ ಕೂಡ ಒಳಪಡುತ್ತದೆ. ಆದರೆ, ಕೇವಲ ವಿರೋಧಿಗಳನ್ನೇ ಗುರಿಯಾಗಿಸಿ ಕ್ರಮಕ್ಕೆ ಮುಂದಾಗಿರುವುದ ಪಕ್ಷಪಾತವನ್ನು ತೋರಿಸುತ್ತದೆ ಎಂದು ವಿವರಿಸಲಾಗಿದೆ.

ಸಂಸದ ಅಸಾದುದ್ದೀನ್‌ ಓವೈಸಿ, ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, ನಟಿ ಸ್ವರ ಭಾಸ್ಕರ್‌ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ್‌ ಮಂದರ್ ಹಾಗೂ ರಾಹುಲ್‌ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅವರು ಪ್ರತಿಕ್ರಿಯೆ ಸಲ್ಲಿಸಿದ್ದಾರೆ.

“ಸಂಸತ್‌ನಲ್ಲಿ ಪಾಸು ಮಾಡಲಾದ ಮಸೂದೆಯ ಬಗ್ಗೆ ಸಾರ್ವಜನಿಕ ಹಿತಾದೃಷ್ಟಿಯಿಂದ ಜನರು ಧರಣಿ ನಡೆಸುವುದು, ಅಭಿಪ್ರಾಯ ವ್ಯಕ್ತಪಡಿಸುವುದನ್ನು ತಡೆಯುವುದು ಸಕಾರಣ ಹೊಂದಿರುವ ನಿರ್ಬಂಧವಲ್ಲ. ಇದು ನಮ್ಮ ಪ್ರಜಾಪ್ರಭುತ್ವ ರಚನೆಯಾಗಿರುವ ಮೂಲ ತತ್ವದ ಉಲ್ಲಂಘನೆಯಾಗಿದೆ. ಸರ್ಕಾರ ಪಾಸು ಮಾಡಿದ ಕಾಯಿದೆ ಅಥವಾ ಮಸೂದೆಯ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡುವುದು, ಅಭಿಪ್ರಾಯ ವ್ಯಕ್ತಪಡಿಸುವುದು, ಚರ್ಚೆ ನಡೆಸುವುದು, ಸುಧಾರಣೆಗೆ ಜನಾಭಿಪ್ರಾಯ ಸಂಗ್ರಹಿಸುವುದಕ್ಕೆ ಅಡ್ಡಿಪಡಿಸುವುದು ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ” ಎಂದು ವಿವರಿಸಲಾಗಿದೆ.

ಪ್ರತಿವಾದಿಗಳ ಪೂರ್ಣವಾದ ಭಾಷಣವನ್ನು ಅರ್ಜಿದಾರರು ಇಟ್ಟಿಲ್ಲ.‌ ಹೀಗಾಗಿ, ಇದು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 153ಎ ಮತ್ತು 153ಬಿ ಅಡಿ ಅಪರಾಧವಾಗುವುದಿಲ್ಲ. ಅರ್ಜಿದಾರರಿಗೆ ದಾವೆ ಹೂಡುವ ಯಾವುದೇ ಹಕ್ಕಿಲ್ಲವಾದ್ದರಿಂದ ಅರ್ಜಿಯು ಮಾನ್ಯತೆ ಹೊಂದಿಲ್ಲ ಎಂದು ವಾದಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com