ದೆಹಲಿ ಗಲಭೆ: ಮಸೀದಿ ಸುಟ್ಟು ಹಾಕಿದ ಮೂವರ ವಿರುದ್ಧ ಆರೋಪ ನಿಗದಿಗೊಳಿಸಲು ಸೂಚಿಸಿದ ನ್ಯಾಯಾಲಯ [ಚುಟುಕು]

ದೆಹಲಿ ಗಲಭೆ: ಮಸೀದಿ ಸುಟ್ಟು ಹಾಕಿದ ಮೂವರ ವಿರುದ್ಧ ಆರೋಪ ನಿಗದಿಗೊಳಿಸಲು ಸೂಚಿಸಿದ ನ್ಯಾಯಾಲಯ [ಚುಟುಕು]

Delhi Riots

ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿಯಲ್ಲಿ ಗಲಭೆ ಸೃಷ್ಟಿಸಿದ, ಮಸೀದಿ ಸುಟ್ಟು ಹಾಕಿದ ಮೂವರ ವಿರುದ್ಧ ಆರೋಪ ನಿಗದಿಪಡಿಸುವಂತೆ ದೆಹಲಿಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಸೂಚಿಸಿದೆ. ಕೃತ್ಯದಲ್ಲಿ ಭಾಗಿಯಾಗಿದ್ದರ ಬಗ್ಗೆ ಈ ಮೂವರ ವಿರುದ್ಧ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯ ಇದೆ ಎಂದು ನ್ಯಾಯಾಧೀಶ ವೀರೇಂದ್ರ ಭಟ್‌ ತಿಳಿಸಿದ್ದಾರೆ. ಭಯದ ವಾತಾವರಣದಿಂದಾಗಿ ಸಾಕ್ಷಿಗಳು ಸಾಕ್ಷ್ಯ ನುಡಿಯಲು ಹಿಂದೇಟು ಹಾಕಿದರು ಎಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿದೆ. ದೀಪಕ್‌, ಪ್ರಿನ್ಸ್‌ ಹಾಗೂ ಶಿವ ಎಂಬುವವರು ಪ್ರಕರಣದ ಆರೋಪಿಗಳು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.