ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳ ಒಕ್ಕೂಟ (ಸಿಎಎನ್) ತನ್ನ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಾಜೆಕ್ಟ್ ಧನಂಜಯ್‌ನ ಮೂರನೇ ಆವೃತ್ತಿಗೆ ಅರ್ಜಿ ಆಹ್ವಾನಿಸುತ್ತಿದೆ.
ವಕೀಲರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಉತ್ಸುಕರಾಗಿರುವ, ಆರ್ಥಿಕ ಸಹಾಯ ಅಗತ್ಯವಿರುವ ಅರ್ಹ ಕಾನೂನು ಪದವೀಧರರಿಗೆ ನೆರವು ಮಾಡುವ ಗುರಿ ಹೊಂದಿದೆ ಈ ಯೋಜನೆ.
ʼಇನ್‌ಕ್ಯುಬೇಟರಿ ಅವಧಿʼಯಲ್ಲಿ ತಮ್ಮ ಪ್ರಾಕ್ಟೀಸ್‌ಗೆ ಹೊಂದಿಕೊಳ್ಳಲು ಬಯಸುವ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಹತ್ವಾಕಾಂಕ್ಷಿ ಮತ್ತು ಪ್ರತಿಭಾನ್ವಿತ ಕಾನೂನು ಪದವೀಧರರನ್ನು ಯೋಜನೆ ಒದಗಿಸಲಿದೆ. ಸುಮಾರು ಒಂದು ತಿಂಗಳ ಕಾಲ ನಡೆಯುವ ಆಯ್ಕೆ ಪ್ರಕ್ರಿಯೆ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಒದಗಿಸುವ ಮಾಸಿಕ ಭತ್ಯೆ, ಪ್ರಾಕ್ಟೀಸ್ ಮಾಡಲು ಆರಂಭಿಸಿದ 1-2 ವರ್ಷಗಳವರೆಗೆ ʼಜೀವನೋಪಾಯ ಭತ್ಯೆʼಯಾಗಿ ನೆರವಿಗೆ ಬರಲಿ ಎಂಬ ಆಶಯ ಯೋಜನೆಯದ್ದು.
ಕಳೆದ ವರ್ಷ ನಾಲ್ಕು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳಿಂದ ಆಯ್ದ ಐದು ಪ್ರತಿಭಾನ್ವಿತ ಪದವೀಧರರಿಗೆ 15,000 ನಿಂದ 20,000ದಷ್ಟು ಮಾಸಿಕ ಭತ್ಯೆ ನೀಡಲಾಯಿತು. ಮೂರನೇ ಆವೃತ್ತಿಯಲ್ಲಿ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಂದ ಬಂದ ಎನ್‌ಎಲ್‌ಯುಗಳ 4-5 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಪ್ರಾಕ್ಟೀಸ್‌ನ ಕನಿಷ್ಠ ಒಂದು ವರ್ಷ ಅವಧಿಗೆ ಮಾಸಿಕ ಭತ್ಯೆ ಒದಗಿಸಲಾಗುತ್ತದೆ.
ಅರ್ಹ ಅಭ್ಯರ್ಥಿಗಳು: ಅರ್ಜಿದಾರರು 2020-21ರ ಶೈಕ್ಷಣಿಕ ವರ್ಷದಲ್ಲಿ ಯಾವುದೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಬಿಎ ಎಲ್‌ಎಲ್‌ಬಿ ಅಥವಾ 5-ವರ್ಷದ ತತ್ಸಮಾನ ಕಾನೂನು ಪದವಿ ಪಡೆದಿರಬೇಕು.
ಜೂನ್ 2022 ಅಥವಾ ನಂತರದಲ್ಲಿ ಪದವಿ ಪಡೆಯುವ ಅಭ್ಯರ್ಥಿಗಳು ಸಹ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ನಮೂನೆಯನ್ನು ಇಲ್ಲಿ ಡೌನ್‌ಲೋಡ್ ಮಾಡಬಹುದು.
ಸೂಕ್ತ ರೀತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮೇ 31, 2022ರ ಭಾರತೀಯ ಕಾಲಮಾನ ಸಂಜೆ 5 ಗಂಟೆ.
ಅರ್ಜಿ ಸಲ್ಲಿಸುವ ವಿಧಾನ: ಅರ್ಜಿ ನಮೂನೆಯನ್ನು ಸ್ಕ್ಯಾನ್ ಮಾಡಿದ PDF ರೂಪದಲ್ಲಿ ಎಲ್ಲಾ ಅನುಬಂಧಗಳೊಂದಿಗೆ ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ಸಿಎಎನ್ ಪ್ರತಿಷ್ಠಾನದ ಅಧಿಕೃತ ಇಮೇಲ್ ಖಾತೆಗೆ ಕಳುಹಿಸಬೇಕು.
ಪರಿಶೀಲನಾ ಸಮಿತಿ: ಆಯ್ಕೆ ಪ್ರಕ್ರಿಯೆಯ ಪರಿಶೀಲನಾ ಸಮಿತಿಯ ಸದಸ್ಯರು:
1. ಅಮಲಪುಷ್ಪ್ ಶ್ರೋತಿ (ಎಒಆರ್ ಸುಪ್ರೀಂ ಕೋರ್ಟ್ ಮತ್ತು ವಕೀಲರು ಮಧ್ಯ ಪ್ರದೇಶ ಹೈಕೋರ್ಟ್);
2. ಟಿ ಸಿಂಗ್‌ದೇವ್ (ವಕೀಲರು, ದೆಹಲಿ ಹೈಕೋರ್ಟ್);
3. ಮೃಗಾಂಕ್ ಪ್ರಭಾಕರ್ (ಎಒಆರ್ ಸುಪ್ರೀಂ ಕೋರ್ಟ್ ಮತ್ತು ವಕೀಲರು ದೆಹಲಿ ಹೈಕೋರ್ಟ್);
4. ಅರ್ಚನಾ ಪಾಠಕ್ ದವೆ (ಎಒಆರ್ ಸುಪ್ರೀಂ ಕೋರ್ಟ್ ಮತ್ತು ವಕೀಲರು ದೆಹಲಿ ಹೈಕೋರ್ಟ್);
5. ತಾರಿಕ್ ಖಾನ್ (ರಿಜಿಸ್ಟ್ರಾರ್, ಅಂತರಾಷ್ಟ್ರೀಯ ರಾಜಿ ಮತ್ತು ಮಧ್ಯಸ್ಥಿಕೆ ಕೇಂದ್ರ, ಹೈದರಾಬಾದ್).
ಉನ್ನತಾಧಿಕಾರ ಆಯ್ಕೆ ಸಮಿತಿ: ಪರಿಶೀಲನಾ ಸಮಿತಿ ಶಿಫಾರಸುಗಳನುಸಾರ ಉನ್ನತಾಧಿಕಾರ ಹೊಂದಿರುವ ಆಯ್ಕೆ ಸಮಿತಿಯು ಧನಂಜಯ್ 2022ನೇ ಸಾಲಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ.