ದಿಲೀಪ್ ಜಾಮೀನು: ಪತ್ರಿಕಾ ಸ್ವಾತಂತ್ರ್ಯ ಎಂಬುದು ನ್ಯಾಯಾಂಗ ನಿಂದಿಸಲು ಪರವಾನಗಿ ಅಲ್ಲ ಎಂದ ಕೇರಳ ಹೈಕೋರ್ಟ್ [ಚುಟುಕು]

Dileep and Kerala High Court

Dileep and Kerala High Court


Published on: 

ಬಹುಭಾಷಾ ನಟಿಯೊಬ್ಬರ ಮೇಲೆ ಎಸಗಿದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸ್‌ ಅಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್‌ಗೆ ನಿರೀಕ್ಷಣಾ ಜಾಮೀನು ನೀಡುವ ವೇಳೆ ಕೇರಳ ಹೈಕೋರ್ಟ್‌ “ಪತ್ರಿಕಾ ಸ್ವಾತಂತ್ರ್ಯ ಎಂಬುದು ನ್ಯಾಯಾಂಗ ನಿಂದನೆಗೆ ಪರವಾನಗಿ ಅಲ್ಲ” ಎಂದು ಹೇಳಿದೆ. ಶನಿವಾರದಂದು ನಡೆದ ಎರಡು ಸುದೀರ್ಘ ವಿಚಾರಣೆಗಳು ಸೇರಿದಂತೆ ಪ್ರಕರಣದ ವಿವಿಧ ವಿಚಾರಣೆಗಳ ಅವಧಿಯಲ್ಲಿ, ನ್ಯಾಯಾಲಯ ಪ್ರಕರಣವನ್ನು ನಿರ್ವಹಿಸಿದ ರೀತಿಯ ಬಗ್ಗೆ ಸಮಾಜದ ಕೆಲವು ವಲಯಗಳಿಂದ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನ್ಯಾ. ಗೋಪಿನಾಥ್‌ ಅವರಿದ್ದ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.