ಹೈಕೋರ್ಟ್ ನೇಮಕಾತಿಯಲ್ಲಿ ವೈವಿಧ್ಯ ತರಲು ಕೇಂದ್ರ ಒತ್ತಾಯ: ಕಾನೂನು ಸಚಿವ ರವಿಶಂಕರ್‌ ಪ್ರಸಾದ್

ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತುತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರು ನ್ಯಾಯಮೂರ್ತಿಗಳು, ಇಬ್ಬರು ಮಹಿಳಾ ನ್ಯಾಯಮೂರ್ತಿಗಳು ಮತ್ತು ಪರಿಶಿಷ್ಟ ಜಾತಿ ಸಮುದಾಯದ ಒಬ್ಬ ನ್ಯಾಯಮೂರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
RS Prasad and P Wilson
RS Prasad and P Wilson

ಹೈಕೋರ್ಟ್‌ಗಳಿಗೆ ನೇಮಕಾತಿ ಮಾಡುವಾಗ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರವು ಒತ್ತಾಯಿಸುತ್ತಿರುವುದಾಗಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ಹಿರಿಯ ವಕೀಲರೂ ಆಗಿರುವ ಸಂಸದ ಪಿ ವಿಲ್ಸನ್‌ ಅವರಿಗೆ ನೀಡಿರುವ ಪತ್ರಮುಖೇನ ನೀಡಿರುವ ಲಿಖಿತ ಪ್ರತಿಕ್ರಿಯೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಈ ವಿಷಯ ತಿಳಿಸಿದ್ದಾರೆ.

ನ್ಯಾಯಾಂಗ ನೇಮಕಾತಿಗಳ ವಿಷಯದಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ರಾಜ್ಯಸಭಾ ಸದಸ್ಯ, ಡಿಎಂಕೆ ಪಕ್ಷದ ಪಿ ವಿಲ್ಸನ್ ಅವರು ಈ ಹಿಂದೆ ಭಾರತದ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಅಲ್ಲದೆ ಸಂಸತ್ತಿನಲ್ಲಿಯೂ ಧ್ವನಿ ಎತ್ತಿದ್ದರು. ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಸಾದ್‌, ಸುಪ್ರೀಂಕೋರ್ಟ್‌ಗೆ ನೇಮಕಾತಿ ಅವಕಾಶ ಕಲ್ಪಿಸುವ ಸಂವಿಧಾನದ 124ನೇ ವಿಧಿ ಯಾವುದೇ ಜಾತಿ, ವರ್ಗ ಅಥವಾ ಲಿಂಗಾಧಾರಿತ ಮೀಸಲಾತಿ ಒದಗಿಸುವುದಿಲ್ಲ ಎಂದಿದ್ದಾರೆ.

ಸಂಸದ ವಿಲ್ಸನ್‌ ಅವರಿಗೆ ರವಿಶಂಕರ್‌ ಪ್ರಸಾದ್‌ ಬರೆದಿರುವ ಪತ್ರ
ಸಂಸದ ವಿಲ್ಸನ್‌ ಅವರಿಗೆ ರವಿಶಂಕರ್‌ ಪ್ರಸಾದ್‌ ಬರೆದಿರುವ ಪತ್ರ

ʼಸುಪ್ರೀಂಕೋರ್ಟಿನಲ್ಲಿ ಒಟ್ಟು 34 ನ್ಯಾಯಮೂರ್ತಿಗಳ ನೇಮಕಾತಿಗೆ ಅನುಮತಿಯಿದ್ದು, ಅದರಲ್ಲಿ ಪ್ರಸ್ತುತ 30 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರು ನ್ಯಾಯಮೂರ್ತಿಗಳು, ಇಬ್ಬರು ಮಹಿಳಾ ನ್ಯಾಯಮೂರ್ತಿಗಳು ಮತ್ತು ಪರಿಶಿಷ್ಟ ಜಾತಿ ಸಮುದಾಯದ ಒಬ್ಬ ನ್ಯಾಯಮೂರ್ತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಮೂರ್ತಿಗಳ ನೇಮಕಾತಿ ವಿಚಾರವಾಗಿ ಹೈಕೋರ್ಟ್‌ ಕೊಲಿಜಿಯಂ ಪ್ರಧಾನ ಪಾತ್ರವಹಿಸುತ್ತದೆ. ಹೀಗಾಗಿ ನ್ಯಾಯಾಂಗ ನೇಮಕಾತಿಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಸಾಧಿಸಲು ಹೈಕೋರ್ಟ್‌ಗಳ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರ ಒತ್ತಾಯಿಸುತ್ತಲೇ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು/ ನ್ಯಾಯಮೂರ್ತಿಗಳಾಗಿರುವವರನ್ನೇ ಸುಪ್ರೀಂಕೋರ್ಟಿಗೆ ಪ್ರಧಾನವಾಗಿ ನೇಮಕ ಮಾಡಲಾಗುವುದರಿಂದ, ಹೈಕೋರ್ಟಿಗೆ ನೇಮಕ ಮಾಡುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಮಹಿಳಾ ವರ್ಗಕ್ಕೆ ಸೇರಿದ ಸೂಕ್ತ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರ ಕೋರಿದೆ.

ಆದರೆ ಪತ್ರದಲ್ಲಿರುವ ಕೊರತೆಗಳನ್ನು ಟ್ವಿಟರ್‌ನಲ್ಲಿ ಪ್ರಸ್ತಾಪಿಸಿರುವ ರಾಜ್ಯಸಭಾ ಸದಸ್ಯ ವಿಲ್ಸನ್‌ ʼಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯ ಕುರಿತಂತೆ ಪತ್ರದಲ್ಲಿ ಸ್ಪಷ್ಟತೆ ಇಲ್ಲʼ ಎಂದಿದ್ದಾರೆ.

Related Stories

No stories found.
Kannada Bar & Bench
kannada.barandbench.com