ಪಿಎಂಎಲ್ಎ ಸೆಕ್ಷನ್ 45ರ ಅಡಿ ಜಾಮೀನು ಪಡೆಯಲು ಆರೋಪಿಗಳು ಅವಳಿ ಪರೀಕ್ಷೆ ಎದುರಿಸಬೇಕೇ? ಪರಿಶೀಲಿಸಲಿದೆ ಸುಪ್ರೀಂ

ಪಿಎಂಎಲ್ಎ ಅಡಿಯಲ್ಲಿ ವಿಶೇಷ ನ್ಯಾಯಾಲಯ ದೂರನ್ನು ಸಂಜ್ಞೇಯ ಅಪರಾಧದ ಪ್ರಕರಣವಾಗಿ ಪರಿಗಣಿಸಿದ ಬಳಿಕ ಸೆಕ್ಷನ್ 19ರ ಅಡಿಯಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಿಗಳನ್ನು ಇ ಡಿ ಬಂಧಿಸಬಹುದೇ ಎಂಬುದರ ಕುರಿತೂ ವಿಚಾರಣೆ ನಡೆಯಲಿದೆ.
ಸುಪ್ರೀಂ ಕೋರ್ಟ್, ಪಿಎಂಎಲ್ಎ
ಸುಪ್ರೀಂ ಕೋರ್ಟ್, ಪಿಎಂಎಲ್ಎ

ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ತನಿಖೆಯ ಅವಧಿಯಲ್ಲಿ ಬಂಧಿಸದೇ ಇದ್ದ ಆರೋಪಿಯನ್ನು, ವಿಚಾರಣಾ ನ್ಯಾಯಾಲಯ ಜಾರಿ ನಿರ್ದೇಶನಾಲಯ (ಇ ಡಿ) ದೂರನ್ನು ಸಂಜ್ಞೇಯ ಅಪರಾಧದ ಪ್ರಕರಣವಾಗಿ ಪರಿಗಣಿಸಿ ಅಂತಹ ವ್ಯಕ್ತಿಗೆ ಸಮನ್ಸ್ ನೀಡಿ ಆರೋಪಿಯಾಗಿ ಪಟ್ಟಿ ತಯಾರಿಸಿದರೆ ಆಗ ಅಂತಹವರು ಕಠಿಣ ಜಾಮೀನು ಷರತ್ತು ಈಡೇರಿಸಬೇಕೆ ಎಂಬುದನ್ನು ಸುಪ್ರೀಂ ಕೋರ್ಟ್‌ ಶೀಘ್ರವೇ ಪರಿಗಣಿಸಲಿದೆ.

ಹಾಗೆ ಮಾಡದೆ ಹೋದರೆ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಗಳು ಸುಲಭವಾಗಿ ಜಾಮೀನು ಪಡೆಯಬಹುದು ಎಂದು ಇಡಿ ವಕೀಲರು ವಾದಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಪ್ರಕರಣವನ್ನು ಸುದೀರ್ಘವಾಗಿ ಆಲಿಸುವ ಅಗತ್ಯವಿದೆ ಎಂದಿತು.

ಆರೋಪಿಯ ಜಾಮೀನು ಅರ್ಜಿಯನ್ನು ವಿರೋಧಿಸಲು ನ್ಯಾಯಾಲಯವು ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಅವಕಾಶವನ್ನು ಒದಗಿಸಬೇಕು. ಆರೋಪಿ ಅಪರಾಧದಲ್ಲಿ ತಪ್ಪಿತಸ್ಥನಲ್ಲ ಎಂದು ನಂಬಲು ಸಮಂಜಸವಾದ ಕಾರಣಗಳಿದ್ದು ಜಾಮೀನಿನ ಮೇಲೆ ಇರುವಾಗ ಅವನು ಯಾವುದೇ ಅಪರಾಧ ಎಸಗುವ ಸಾಧ್ಯತೆಯಿಲ್ಲ ಎಂದು ಮನವರಿಕೆಯಾದರೆ ಮಾತ್ರ ನ್ಯಾಯಾಲಯ ಆರೋಪಿಯನ್ನು ಬಿಡುಗಡೆ ಮಾಡಬಹುದು ಎಂದು ಪಿಎಂಎಲ್ಎಯ ಸೆಕ್ಷನ್ 45 ಹೇಳುತ್ತದೆ.

ಈ ಷರತ್ತುಗಳು ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಗೆ ಜಾಮೀನು ಪಡೆಯುವುದನ್ನು ಕ್ಲಿಷ್ಟಕರವಾಗಿಸುತ್ತದೆ.

ಪಿಎಂಎಲ್ಎ ಅಡಿಯಲ್ಲಿ ವಿಶೇಷ ನ್ಯಾಯಾಲಯ ಹೊರಡಿಸಿದ ಸಮನ್ಸ್‌ಗೆ ಅನುಗುಣವಾಗಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದರೆ ಆರೋಪಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ನಿಬಂಧನೆಗಳ ಅಡಿಯಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನೂ ಸುಪ್ರೀಂ ಕೋರ್ಟ್‌ ಎತ್ತಿದೆ.

ಪಿಎಂಎಲ್ಎ ಅಡಿಯಲ್ಲಿ ವಿಶೇಷ ನ್ಯಾಯಾಲಯ ದೂರನ್ನು ಪರಿಗಣಿಸಿದ ನಂತರ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಗಳನ್ನು ಪಿಎಂಎಲ್ಎಯ ಸೆಕ್ಷನ್ 19 ರ ಅಡಿಯಲ್ಲಿ ಇ ಡಿ ಬಂಧಿಸಬಹುದೇ ಎಂಬ ಕುರಿತೂ ಸರ್ವೋಚ್ಚ ನ್ಯಾಯಾಲಯ ಉನ್ನತ ನ್ಯಾಯಾಲಯ ಪರಿಗಣಿಸಲಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್

ಕಂದಾಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾದ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಲವು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಈ ಕಾನೂನು ಪ್ರಶ್ನೆ ಉದ್ಭವಿಸಿದೆ.

ಜನವರಿಯಲ್ಲಿ ಆರೋಪಿಗಳಿಗೆ ಮಧ್ಯಂತರ ರಕ್ಷಣೆ ನೀಡಿದ್ದ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆ ಕೇಳಿತ್ತು.

, ನ್ಯಾಯಮೂರ್ತಿ ಓಕಾ ಅವರು ಸಂಜ್ಞೇಯ ಅಪರಾಧದ ಹಂತದ ನಂತರವೂ ಕಠಿಣ ಅವಳಿ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂಬ ಹೇಳಿದರು.

ಆರೋಪಿಗಳ ಸಂಜ್ಞೇಯ ಅಪರಾಧವನ್ನು ಪರಿಗಣಿಸಿದ ನಂತರವೂ ಕಠಿಣ ಅವಳಿ ಪರೀಕ್ಷೆಯನ್ನು ಅವರು ಎದುರಿಸಬೇಕಾಗುತ್ತದೆಯೇ ಎಂಬ ಬಗ್ಗೆ ಪೀಠ ಚಿಂತಿಸುತ್ತಿದೆ ಎಂದು ನ್ಯಾ. ಓಕಾ ಅವರು ಮಾರ್ಚ್ 1 ರಂದು ಪ್ರಕರಣದ ವಿಚಾರಣೆ ನಡೆದಾಗ ತಿಳಿಸಿದರು.

ಸಿಬಿಐ ನ್ಯಾಯಾಲಯ ಜಾಮೀನು ನಿರಾಕರಿಸಿದ್ದ ಹಣ ಅಕ್ರಮ ವರ್ಗಾವಣೆ ಮಾಡಿದ್ದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರ ಇತ್ತೀಚಿನ ಆದೇಶದ ಬಗ್ಗೆ ನ್ಯಾ. ಓಕಾ ಗಮನಸೆಳೆದರು. ಪೀಠ ಏಪ್ರಿಲ್ 9ರಂದು ಪ್ರಕರಣ ಆಲಿಸಲಿದೆ.

ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮತ್ತು ತಂಡ ಆರೋಪಿಗಳ ಪರವಾಗಿ , ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಹಾಗೂ ವಿವಿಧ ವಕೀಲರು ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದರು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Tarsem Lal vs Directorate of Enforcement.pdf
Preview

Related Stories

No stories found.
Kannada Bar & Bench
kannada.barandbench.com