ಅಂಬೇಡ್ಕರ್‌ ತಾವು ಪಡೆದ ಶಿಕ್ಷಣವನ್ನು ಕೇವಲ ತಮ್ಮ ಏಳಿಗೆಗೆ ಮಾತ್ರವೇ ಬಳಸಲಿಲ್ಲ: ನ್ಯಾ. ಡಿ ವೈ ಚಂದ್ರಚೂಡ್

ಅಂಬೇಡ್ಕರರು ತಾವು ಪಡೆದ ಶಿಕ್ಷಣವನ್ನು ಭಾರತೀಯ ಸಂವಿಧಾನ ರೂಪಿಸಲು ಮತ್ತು ತುಳಿತಕ್ಕೊಳಗಾದ ಜಾತಿಗಳ ಜನರಿಗೆ ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಲು ಬಳಸಿದರು ಎಂಬುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.
ಅಂಬೇಡ್ಕರ್‌ ತಾವು ಪಡೆದ ಶಿಕ್ಷಣವನ್ನು ಕೇವಲ ತಮ್ಮ ಏಳಿಗೆಗೆ ಮಾತ್ರವೇ ಬಳಸಲಿಲ್ಲ: ನ್ಯಾ. ಡಿ ವೈ ಚಂದ್ರಚೂಡ್
Dr. BR Ambedkar and Justice DY Chandrachud

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ತಾವು ಪಡೆದ ಶಿಕ್ಷಣವನ್ನು ತಮ್ಮ ಪ್ರಗತಿಗಾಗಿ ಮಾತ್ರ ಉಪಯೋಗಿಸದೆ ಭಾರತೀಯ ಸಂವಿಧಾನ ರೂಪಿಸಲು ಬಳಸಿದರು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಶನಿವಾರ ಅಭಿಪ್ರಾಯಪಟ್ಟರು. ಅಲ್ಲದೆ, ಜಾತಿ ವ್ಯವಸ್ಥೆ ವಿರುದ್ಧ ತುಳಿತಕ್ಕೊಳಗಾದ ಜಾತಿಗಳ ಜನರು ಧ್ವನಿ ಎತ್ತಲು ಸಹ ಅವರ ಶಿಕ್ಷಣ ಪ್ರೇರಣೆಯಾಯಿತು ಎಂದು ಅವರು ಹೇಳಿದರು.

ಅಂಬೇಡ್ಕರ್‌ ಅವರ ಶಿಕ್ಷಣ ಕೇವಲ ಸ್ವಂತ ಏಳಿಗೆಯ ವಾಹಕವಾಗಿರಲಿಲ್ಲ. ಬದಲಿಗೆ, ಭಾರತೀಯ ಸಂವಿಧಾನದ ಭವಿಷ್ಯ, ಸೂಕ್ಷ್ಮತೆ ಹಾಗು ಪರಿವರ್ತಕ ಸಾಮರ್ಥ್ಯಗಳಲ್ಲಿ ತನ್ನ ಗುರುತುಗಳನ್ನು ಉಳಿಸಿತು. ಇದು ಅವಹೇಳನಕಾರಿಯಾದ ಜಾತಿ ಮತ್ತು ಪಿತೃಪ್ರಧಾನ ವ್ಯವಸ್ಥೆ ವಿರುದ್ಧ ಅಗತ್ಯ ಧ್ವನಿ ಮತ್ತು ಉಸಿರನ್ನು ತುಳಿತಕ್ಕೊಳಗಾದ ಜನರಿಗೆ ಒದಗಿಸಿತು ಎಂದು ಅವರು ವಿವರಿಸಿದರು.

ತಮ್ಮ ತಂದೆ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವೈ ವಿ ಚಂದ್ರಚೂಡ್ ಅವರ 101ನೇ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಶಿಕ್ಷಣ ಪ್ರಸಾರಕ ಮಂಡಳಿ ಆಯೋಜಿಸಿತ್ತು.

ಭಾರತೀಯ ಸಂವಿಧಾನದೊಂದಿಗೆ ನಡೆಸುವ ಯಾವುದೇ ಸಂವಾದ ಡಾ. ಅಂಬೇಡ್ಕರ್‌ ಅವರಿಗೆ ಸಲ್ಲಿಸುವ ಗೌರವದೊಂದಿಗೆ ನಡೆಯಬೇಕು ಎಂದು ಅಭಿಪ್ರಾಯಪಟ್ಟ ಅವರು ಬಾಬಾ ಸಾಹೇಬರು ಅತ್ಯಂತ ಪ್ರಮುಖ ಜಾತಿ ವಿರೋಧಿ ವಕ್ತಾರರಾಗಿದ್ದರು ಆದರೆ ಜಾತಿವಾದ, ಪಿತೃಪ್ರಧಾನ ವ್ಯವಸ್ಥೆ ಮತ್ತು ದಬ್ಬಾಳಿಕೆಯ ಆಚರಣೆಗಳ ವಿರುದ್ಧ ಉಗ್ರ ಹೋರಾಟ ನಡೆಸುವ ಮೊದಲು, ಅವರ ಮೊದಲ ಮೊದಲಿಗೆ ಶಿಕ್ಷಣ ಪಡೆಯಲು ಹೋರಾಡಿದರು. ಎಂದು ನ್ಯಾ. ಚಂದ್ರಚೂಡ್ ಹೇಳಿದರು.

Also Read
ಜಾತಿ ಅಸಮಾನತೆ ತಡೆಗೆ ರಾಜ್ಯದ ಹಸ್ತಕ್ಷೇಪ ಅನಿವಾರ್ಯ ಎಂಬುದು ಸಂವಿಧಾನಶಿಲ್ಪಿಗಳಿಗೆ ಗೊತ್ತಿತ್ತು: ನ್ಯಾ. ಚಂದ್ರಚೂಡ್‌

ಅಸ್ಪೃಶ್ಯ ದಲಿತ ಜಾತಿಯಾಗಿದ್ದ ಮಹರ್‌ ಜಾತಿಗೆ ಸೇರಿದ್ದ ಡಾ. ಅಂಬೇಡ್ಕರ್‌ ಅವರು ತಮ್ಮ ಪ್ರಾಥಮಿಕ ಶಿಕ್ಷಣ ಪಡೆಯಲು ಕೂಡ ಪ್ರಯಾಸ ಪಡಬೇಕಾಯಿತು. "ಅವರ ಶಾಲಾ ಶಿಕ್ಷಣದ ಪ್ರಮುಖ ನೆನಪುಗಳು ಅವಮಾನ ಮತ್ತು ತಾರತಮ್ಯಕ್ಕೆ ಸಂಬಂಧಿಸಿದ್ದಾಗಿದ್ದವು, ಅಲ್ಲಿ ಅವರು ತರಗತಿಯ ಹೊರಗೆ ಕುಳಿತು ಪಾಠ ಕೇಳಬೇಕಿತ್ತು ಮತ್ತು ಅವರು ಮೇಲ್ಜಾತಿಯ ವಿದ್ಯಾರ್ಥಿಗಳಿಗೆ ಸೇರಿದ ನೀರು ಅಥವಾ ಪುಸ್ತಕ ಮುಟ್ಟುವಂತಿರಲಿಲ್ಲ" ಎಂದು ನ್ಯಾಯಮೂರ್ತಿಗಳು ಹೇಳಿದರು.

ಅಂಬೇಡ್ಕರ್‌ ಅಂತಿಮವಾಗಿ 26 ಪದವಿಗಳನ್ನು ಮತ್ತು ಪ್ರಶಸ್ತಿಗಳನ್ನು ಪಡೆದು ತಮ್ಮ ಪೀಳಿಗೆಯ ಅತ್ಯಂತ ವಿದ್ಯಾವಂತ ಭಾರತೀಯರಲ್ಲಿ ಒಬ್ಬರು ಎನಿಸಿಕೊಂಡರು ಎಂದು ಸ್ಮರಿಸಿದರು.

Related Stories

No stories found.