ಆನ್‌ಲೈನ್‌ ಗೇಮಿಂಗ್ ಕರಡು ನಿಯಮಾವಳಿ: ಬಳಕೆದಾರರ ಹಿತಾಸಕ್ತಿಯ ಕುರಿತು ನಡೆದಿರುವ ಚರ್ಚೆಗಳೇನು?

ಬಳಕೆದಾರರ ಹಿತಾಸಕ್ತಿ ರಕ್ಷಿಸುವ ಗುರಿ ಇರಿಸಿಕೊಂಡಿರುವ ಹೊಸ ನಿಯಮಾವಳಿಗಳನ್ನು ಕೆಲವರು ಸ್ವಾಗತಿಸಿದ್ದಾರೆ, ಆದರೆ ಪ್ರತ್ಯೇಕ ಕಾಯಿದೆಯಲ್ಲಿ ಹೆಚು ದೃಢವಾದ ಕಾರ್ಯವಿಧಾನವನ್ನು ಅನೇಕರು ಬಯಸಿದ್ದಾರೆ.
Gaming
Gaming

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಾವಳಿ- 2021ಕ್ಕೆ ತಿದ್ದುಪಡಿ ಮಾಡಿ ಆನ್‌ಲೈನ್ ಗೇಮಿಂಗ್ ನಿಯಮಾವಳಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಬಳಕೆದಾರರ ಹಿತಾಸಕ್ತಿ ರಕ್ಷಿಸುವ ಗುರಿ ಇರಿಸಿಕೊಂಡಿರುವ ಹೊಸ ನಿಯಮಾವಳಿಗಳನ್ನು ಕೆಲವರು ಸ್ವಾಗತಿಸಿದ್ದಾರೆ, ಆದರೆ ಪ್ರತ್ಯೇಕ ಕಾಯಿದೆಯಲ್ಲಿ ಹೆಚು ದೃಢವಾದ ಕಾರ್ಯವಿಧಾನವನ್ನು ಉಳಿದವರು ಬಯಸಿದ್ದಾರೆ.

Also Read
ಆನ್‌ಲೈನ್‌ ಗೇಮ್‌ ವಿರುದ್ಧದ ಕಾನೂನು ರದ್ದು: ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ರಾಜ್ಯ ಸರ್ಕಾರ ಮೊರೆ

ದೇಶದಲ್ಲಿ ಆನ್‌ಲೈನ್ ಕೌಶಲ್ಯ ಆಧಾರಿತ ಗೇಮಿಂಗ್‌ನ ಉನ್ನತ ಸಂಸ್ಥೆಯಾದ, ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್, ಸೋಮವಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ಬಿಡುಗಡೆ ಮಾಡಿದ ಕರಡು ನಿಯಮಗಳನ್ನು ಶ್ಲಾಘಿಸಿದೆ. ಒಕ್ಕೂಟದ ಸಿಇಒ ರೋಲ್ಯಾಂಡ್ ಲ್ಯಾಂಡರ್ಸ್ ಈ ಕ್ರಮವನ್ನು ಸ್ವಾಗತಿಸಿದರು,

“ಮಾಹಿತಿ ತಂತ್ರಜ್ಞಾನ ನಿಯಮಾವಳಿಗೆ ತಿದ್ದುಪಡಿ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಇದು ಈಗ ನಿರ್ದಿಷ್ಟವಾಗಿ ಗೇಮಿಂಗ್ ಮಧ್ಯಸ್ಥ ಸಂಸ್ಥೆಯನ್ನು ಸಹ ಒಳಗೊಂಡಿದೆ. ಗೇಮ್‌ ಆಡುವವರಿಗಾಗಿ ಮತ್ತು ಆನ್‌ಲೈನ್ ಗೇಮಿಂಗ್ ಉದ್ಯಮದ ದೀರ್ಘಕಾಲದ ಅಗತ್ಯವನ್ನು ಸಾಕಾರಗೊಳಿಸಿದ್ದಕ್ಕಾಗಿ  ನಾವು ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ” ಎಂದು ಅವರು ಹೇಳಿದ್ದಾರೆ.

ಕರಡು ನಿಯಮಗಳನ್ನು ಬಿಡುಗಡೆ ಮಾಡುವಾಗ, ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮಾಡಿ “ಆನ್‌ಲೈನ್ ಗೇಮಿಂಗ್ ಕ್ಷೇತ್ರದ ನವೋದ್ಯಮಿಗಳು ಭಾರತದ ಡಿಜಿಟಲ್ ಆರ್ಥಿಕತೆಗೆ ಮತ್ತು ಸ್ಟಾರ್ಟಪ್‌ ವ್ಯವಸ್ಥೆಗೆ ಮುಂದೆ ದೊಡ್ಡ ಕೊಡುಗೆ ನೀಡುವವರಾಗಿದ್ದಾರೆ. ಹೊಸ ಕರಡು ನಿಯಮ ರೋಮಾಂಚಕಾರಿಯಾಗಿ ನವೀನ ವ್ಯವಸ್ಥೆಯನ್ನು ಉತ್ತೇಜಿಸಲಿದ್ದು, ಗೇಮ್‌ ಆಡುವವರ ಹಕ್ಕುಗಳನ್ನು ರಕ್ಷಿಸುವ ಹಾಗೂ ಆನ್‌ಲೈನ್‌ ಬೆಟ್ಟಿಂಗ್‌ನಿಂದ ರಕ್ಷಣೆ ಒದಗಿಸುವ ಗುರಿ ಹೊಂದಿದೆ" ಎಂದಿದ್ದಾರೆ.

ಆದರೆ ಕರಡು ನಿಯಮಗಳಲ್ಲಿರಬೇಕಾದ ಕೆಲವು ಅಂಶಗಳನ್ನು ಕಾನೂನು ಕ್ಷೇತ್ರದ ಪ್ರಮುಖರು ಚರ್ಚಿಸಿದ್ದಾರೆ. ಡಿಎಸ್‌ಕೆ ಲೀಗಲ್‌ನ ಸಹ ಪಾಲುದಾರರಾಗಿರುವ ನಕುಲ್‌ ಬಾತ್ರಾ ಅವರು ಐಟಿ ಮಧ್ಯಸ್ಥ ವೇದಿಕೆಗಳಂತೆ ಕೆಲವೊಂದು ಹೆಚ್ಚುವರಿ ಗಮನವನ್ನು ಗೇಮಿಂಗ್ ಉದ್ಯಮವು ತೆಗೆದುಕೊಳ್ಳಬೇಕಿದೆ. ಬಳಕೆದಾರರ ಕೆವೈಸಿ, ಹಣ ಹಿಂಪಡೆಯುವಿಕೆ ಅಥವಾ ಹಣದ ಮರುಪಾವತಿಯ ಪಾರದರ್ಶಕ ವ್ಯವಸ್ಥೆ, ಶುಲ್ಕ ಹಾಗೂ ಗೆದ್ದ ಮೊತ್ತದ ಸಮರ್ಪಕ ವಿತರಣೆ ಹೊಂದಿರಬೇಕು. ಸಚಿವಾಲಯದಿಂದ ನೋಂದಣಿಗೊಂಡಿರಬೇಕು. ಅಲ್ಲದೆ, ಕುಂದುಕೊರತೆ ಮತ್ತು ನೋಡಲ್‌ ಅಧಿಕಾರಿಗಳ ನೇಮಕ ಮತ್ತು ಔಪಚಾರಿಕ ಪರಿಹಾರ ಕಾರ್ಯವಿಧಾನವನ್ನು ಅನುಷ್ಠಾನಕ್ಕೆ ತರಬೇಕು” ಎಂದಿದ್ದಾರೆ.

ಇದೇ ವೇಳೆ ವಕೀಲೆ ಕೃತಿಕಾ ಸೇಥ್‌ ಅವರು “ಮಧ್ಯಸ್ಥಗಾರರ ಭೌತಿಕ ವಿಳಾಸ ಪ್ರಕಟಿಸಬೇಕು ಮತ್ತು 24x7 ಸಮನ್ವಯ ವ್ಯವಸ್ಥೆ ಇರಬೇಕು” ಎಂದು ಆಗ್ರಹಿಸಿದ್ದಾರೆ.

ತಂತ್ರಜ್ಞಾನ ಮತ್ತು ಗೇಮಿಂಗ್‌ ಪ್ರಕರಣಗಳ ವಕೀಲರಾದ ಜೇ ಸೇಯ್ತಾ ಅವರು “ನೂತನ ಕರಡು ನಿಯಮಾವಳಿಗಳು ಆನ್‌ಲೈನ್‌ ಆಟವನ್ನು ಠೇವಣಿಗಳು (ಡಿಪಾಸಿಟ್ಸ್‌) ಮತ್ತು ಗೆಲುವಿನ ಮೊತ್ತ (ವಿನ್ನಿಂಗ್ಸ್) ಹೊಂದಿರುವಂತಹವು ಎಂದು ವ್ಯಾಖ್ಯಾನಿಸಿವೆ. ಜೂಜು ಮತ್ತು ಬೆಟ್ಟಿಂಗ್‌ ಹಿನ್ನೆಲೆಯಲ್ಲಿ ಕೌಶಲ್ಯದ ಆಟಗಳು ಮತ್ತು ಅವಕಾಶದ ಆಟಗಳನ್ನು ಇಲ್ಲಿ ವ್ಯಾಖ್ಯಾನಿಸಿಲ್ಲ” ಎಂದು ವಾದಿಸಿದ್ದಾರೆ.

[ಕರಡು ನಿಯಮಾವಳಿಗಳನ್ನು ಇಲ್ಲಿ ಓದಿ]

Attachment
PDF
Online_Gaming_Draft_Rules.pdf
Preview

Related Stories

No stories found.
Kannada Bar & Bench
kannada.barandbench.com