[ಚುಟುಕು] ಡಿಆರ್‌ಎಟಿ ಅಧ್ಯಕ್ಷರ ಹುದ್ದೆ ಖಾಲಿ: ಬ್ಯಾಂಕ್‌ ಬಗ್ಗೆ ಡಿಆರ್‌ಟಿ ನೀಡಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್ ತಡೆ

Kotak Mahindra Bank, Nirvan Birla and Bombay High Court

Kotak Mahindra Bank, Nirvan Birla and Bombay High Court


Published on

ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಅಡ ಇಟ್ಟ ಆಸ್ತಿಯ ಸಾಂಕೇತಿಕ ಸ್ವಾಧೀನವನ್ನು ಯಶ್ ಬಿರ್ಲಾ ಅವರ ಪುತ್ರ ನಿರ್ವಾಣ್ ಬಿರ್ಲಾ ಅವರಿಗೆ ಹಸ್ತಾಂತರಿಸುವಂತೆ ನಿರ್ದೇಶಿಸಿದ್ದ ಮುಂಬೈ ಸಾಲ ವಸೂಲಾತಿ ನ್ಯಾಯಮಂಡಳಿಯ (ಡಿಆರ್‌ಟಿ) ಆದೇಶಕ್ಕೆ ಬಾಂಬೆ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ. ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ (ಡಿಆರ್‌ಎಟಿ) ಅಧ್ಯಕ್ಷರ ಹುದ್ದೆ ಖಾಲಿ ಇರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ನೇತೃತ್ವದ ಪೀಠ ಫೆ. 21ರವರೆಗೆ ಡಿಆರ್‌ಟಿ ನೀಡಿದ್ದ ಆದೇಶಕ್ಕೆ ತಡೆ ನೀಡಿತು. ಆದರೂ ಡಿಆರ್‌ಎಟಿ ಹುದ್ದೆ ಭರ್ತಿಯಾದರೆ ಬ್ಯಾಂಕ್‌ ತನ್ನ ಮೇಲ್ಮನವಿ ಮುಂದುವರೆಸಬೇಕಾಗುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com