ಮುಂಬೈನಲ್ಲಿರುವ ಸಾಲ ವಸೂಲಾತಿ ಮೇಲ್ಮನವಿ ಮಂಡಳಿಯ (ಡಿಆರ್‌ಎಟಿ) ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡದೆ ಖಾಲಿ ಉಳಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್ ಹುದ್ದೆಯ ಭರ್ತಿ ಸಂಬಂಧದ ರೂಪುರೇಷೆಯ ಕುರಿತು ಮುಂದಿನ ಗುರುವಾರದೊಳಗೆ ಟಿಪ್ಪಣಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ವಿಚಾರಣೆಯ ಒಂದು ಹಂತದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾ. ಎಂ ಎಸ್ ಕಾರ್ಣಿಕ್ ಅವರಿದ್ದ ಪೀಠವು, "ಪ್ರಸ್ತುತ ಬಜೆಟ್ ಆರ್ಥಿಕತೆಗೆ ಉತ್ತೇಜಕ ಎಂದು ನಾವು ಓದಿದೆವು. ನ್ಯಾಯಾಂಗಕ್ಕೆ ಇದರಲ್ಲಿ ಉತ್ತೇಜನ ಎಲ್ಲಿದೆ?" ಎಂದು ಪ್ರಶ್ನಿಸಿತು. ದೇಶದ ಆರ್ಥಿಕ ರಾಜಧಾನಿಯಾದ ಮುಂಬೈನಲ್ಲಿ ಡಿಆರ್‌ಎಟಿ ರೀತಿಯ ಸಂಸ್ಥೆಯು ಎಷ್ಟು ಪ್ರಾಮುಖ್ಯ ಎನ್ನುವ ಬಗ್ಗೆ ಅದು ವಿವರಿಸಿತು.
ಹೆಚ್ಚಿನ ಮಾಹಿತಿಗೆ 'ಬಾರ್ ಅಂಡ್ ಬೆಂಚ್' ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.